ETV Bharat / state

ಐಎಂಎ ವಂಚನೆ ಪ್ರಕರಣ: ಇಂದು ಸಿಬಿಐನಿಂದ ಮಾಜಿ ಸಚಿವ ಜಮೀರ್ ವಿಚಾರಣೆ - ಸಿಬಿಐನಿಂದ ಜಮೀರ್​ ಅಹ್ಮದ್​ ವಿಚಾರಣೆ

ಮನ್ಸೂರ್ ನಿಂದ ಹಣ ಪಡೆದಿದ್ದಾರೆ ಎನ್ನಲಾದ ಕೆಲ ರಾಜಕಾರಣಿಗಳು ಮತ್ತು ಐಪಿಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿರುವ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮನ್ಸೂರ್ ಖಾನ್ ನಿಂದ ಹಣ ಪಡೆದಿರುವ ಆರೋಪ ಹಿನ್ನೆಲೆ ಮಾಜಿ ಸಚಿವ ಜಮೀರ್ ಅವರನ್ನು ಇಂದು ಸಿಬಿಐ ವಿಚಾರಣೆ ನಡೆಸಲಿದೆ.

author img

By

Published : Sep 24, 2019, 9:23 AM IST

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿ ಪ್ರಮುಖ ಆರೋಪಿ ಮನ್ಸೂರ್ ನಿಂದ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಮನ್ಸೂರ್ ನಿಂದ ಹಣ ಪಡೆದಿದ್ದಾರೆ ಎನ್ನಲಾದ ಕೆಲ ರಾಜಕಾರಣಿಗಳು ಮತ್ತು ಐಪಿಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಸಿಬಿಐ ವಿಚಾರಣೆ ಮುಂದುವರಿಸಿದೆ. ಇನ್ನು ಮನ್ಸೂರ್ ಖಾನ್ ನಿಂದ ಹಣ ಪಡೆದ ಹಿನ್ನೆಲೆ ಮಾಜಿ ಸಚಿವ ಜಮೀರ್ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಜಮೀರ್​ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಮನ್ಸೂರ್ ವಿಚಾರಣೆ ವೇಳೆ ಜಮೀರ್ ಗೆ ಹಣ ನೀಡಿರುವ ಬಗ್ಗೆ ಬಾಯ್ಬಿಟ್ಟಿರುವುದರಿಂದ ಜಮೀರ್ ಅವರಿಗೆ ಸಿಬಿಐನಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಕಳೆದ ‌ಬಾರಿ ವಿಚಾರಣೆಗೆ ಹಾಜರಾಗದೆ 5 ದಿನ ಕಾಲಾವಕಾಶ ಕೇಳಿದ್ದರು. ಹೀಗಾಗಿ ಇಂದು ಸಿಬಿಐ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ‌. ಸಿಬಿಐಗೆ ಪ್ರಕರಣ ವರ್ಗಾವಣೆಯಾಗುವ ಮೊದಲೇ ಐಎಂಎ ಪ್ರಕರಣವನ್ನ ತನಿಖೆ ನಡೆಸಿದ್ದ ಎಸ್​ಐಟಿ ತಂಡ ಕೂಡ ಜಮೀರ್​ ಅಹ್ಮದ್​ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

Intro:IMA ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ.
ಇಂದು ಮಾಜಿ ಸಚಿವ ಜಮೀರ್ ಅಹ್ಮದ್ ಗೆ ಸಿಬಿಐ ಡ್ರಿಲ್.

IMA ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯ ನ್ನ ಚುರುಕುಗೊಳಿಸಿ ಪ್ರಮುಖ ಆರೋಪಿ ಮನ್ಸೂರ್ ನಿಂದ ಹಲವಾರು ಮಾಹಿತಿ ಕಲೆ ಹಾಕಿದ್ದಾರೆ.

ಹೀಗೆ ಮನ್ಸೂರ್ ನಿಂದ ಕೆಲ ರಾಜಾಕಾರಣಿಗಳು ಐಪಿಎಸ್ ಅಧಿಕಾರಿಗಳು ಹಣ ಪಡೆದಿರುವ ಕಾರಣ ಭಾಗಿಯಾಗಿರುವ ವ್ಯಕ್ತಿಗಳಿಗೆ ನೋಟಿಸ್ ಜಾರಿಗೊಳಿಸಿ ಸಿಬಿಐ ಡ್ರೀಲ್ ಮಾಡ್ತಿದೆ.

ಮನ್ಸೂರ್ ಖಾನ್ ನಿಂದ ಹಣ ಪಡೆದ ಹಿನ್ನೆಲೆ ಇಂದು ಜಮೀರ್ ಅವ್ರನ್ನ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆನೀಡಲಾಗಿದೆ.ಹೀಗಾಗಿ ಜಮೀರ್ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಮನ್ಸೂರ್ ವಿಚಾರಣೆಯಲ್ಲಿ ಜಮೀರ್ ಗೆ ಹಣ ನೀಡಿದ್ದಾಗಿ ಹೇಳಿಕೆ ನೀಡಿದ್ದ ಈ‌ ಹಿನ್ನೆಲೆ ಜಮೀರ್ ಗೆ ಸಿಬಿಐನಿಂದ ನೋಟೀಸ್ ಜಾರಿ ಮಾಡಲಾಗಿತ್ತು ಕಳೆದ ‌ಬಾರಿ ವಿಚಾರಣೆಗೆ ಹಾಜರಾಗದೆ 5 ದಿನ ಕಾಲಾವಕಾಶ ಕೇಳಿದ್ದರು ಜಮೀರ್ ಹೀಗಾಗಿ ಇಂದು ಸಿಬಿಐ ವಿಚಾರಣೆ ಗೆ ಹಾಜರಾಗುವ ಸಾಧ್ಯತೆ ಇದೆ‌

ಸಿಬಿಐಗೆ ಪ್ರಕರಣ ವರ್ಗಾವಣೆಯಾಗುವ ಮೊದಲೆ ಐಎಂಎ ಪ್ರಕರಣವನ್ನ ತನಿಖೆ ನಡೆಸಿದ ಎಸ್ಐಟಿ ಕೂಡ ಜಮೀರನ್ನ ವಿಚಾರಣೆಗೆ ಒಳಪಡಿಸಿತ್ತು.

Body:KN_BNG_01_IMA_7204498Conclusion:KN_BNG_01_IMA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.