ಬೆಂಗಳೂರು: ಲಾಕ್ಡೌನ್ ನಡುವೆಯೂ ಕಾನೂನು ಉಲ್ಲಂಘನೆ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದ 4 ಜನರನ್ನು ಬಂಧನ ಮಾಡುವಲ್ಲಿ ಬೆಂಗಳೂರಿನ ಉತ್ತರ ವಿಭಾಗದ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನರಸಮ್ಮ, ವಿಶ್ವನಾಥ್, ವರುಣೇಶ್ ಮತ್ತು ರಘು ಬಂಧಿತ ಆರೋಪಿಗಳು. ಇವರು ನಗರದ ಅಮೃತಹಳ್ಳಿ ವ್ಯಾಪ್ತಿಯಲ್ಲಿ ಮದ್ಯ ಪ್ರಿಯರಿಗೆ ಹೆಚ್ಚಿನ ಹಣಕ್ಕೆ ಮದ್ಯ ಮಾರಾಟ ಮಾಡುತ್ತಿದ್ದು, ಲಾಕ್ಡೌನ್ ಹೇರಿಕೆಯಾದ ದಿನದಿಂದ ಗಸ್ತಿನಲ್ಲಿದ್ದ ಅಬಕಾರಿ ಅಧಿಕಾರಿಗಳಿಗೆ ಮದ್ಯ ಮಾರಟದ ಸುಳಿವು ಸಿಕ್ಕಿ ಆರೋಪಿಗಳ ಮಾಹಿತಿ ತಿಳಿದು ದಾಳಿ ಮಾಡಿದ್ದಾರೆ.
ದಾಳಿ ವೇಳೆ ಆರೋಪಿಗಳ ಬಳಿ ಮದ್ಯದ ಬಾಟಲಿಗಳು ಇದ್ದು, ಸದ್ಯ ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿ 1 ಲಕ್ಷದ 22 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.