ETV Bharat / state

ಗುದದ್ವಾರದಲ್ಲಿ ಇಟ್ಟುಕೊಂಡು ಅಕ್ರಮ ಚಿನ್ನ ಸಾಗಣೆ: 28 ಲಕ್ಷ ರೂ. ಮೌಲ್ಯದ ಚಿನ್ನದೊಂದಿಗೆ ಆರೋಪಿ ವಶಕ್ಕೆ - ಈಟಿವಿ ಭಾರತ ಕನ್ನಡ

ಗುದದ್ವಾರದಲ್ಲಿ ಬಚ್ಚಿಟ್ಟು ಚಿನ್ನ ಸಾಗಣೆ - ಪ್ರಯಾಣಿಕನನ್ನು ಬಂಧಿಸಿದ ಕಸ್ಟಮ್ಸ್​ ಅಧಿಕಾರಿಗಳು - 28 ಲಕ್ಷ ರೂ ಮೌಲ್ಯದ ಚಿನ್ನ ವಶ

illegal-smugling-of-gold-customs-officer-arrested-passenger
ಗುದದ್ವಾರದಲ್ಲಿಟ್ಟುಕೊಂಡು ಅಕ್ರಮ ಚಿನ್ನ ಸಾಗಾಟ: 28 ಲಕ್ಷ ರೂ. ಚಿನ್ನ ವಶ
author img

By

Published : Dec 31, 2022, 5:51 PM IST

ದೇವನಹಳ್ಳಿ : ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಚಾಲಾಕಿ ಪ್ರಯಾಣಿಕನನ್ನು ಕಸ್ಟಮ್ಸ್​​ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 28,73,932 ಲಕ್ಷ ಮೌಲ್ಯದ 532 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ನಿನ್ನೆ ಮಾಲ್ಡೀವ್ಸ್ ನಿಂದ ಮಾಲ್ಡಿವ್ಸ್ ಜಿ8-44 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ ಪ್ರಯಾಣಿಕನೋರ್ವ ಬಂದಿಳಿದಿದ್ದ. ಈ ವೇಳೆ ಪ್ರಯಾಣಿಕನ ವರ್ತನೆಯನ್ನು ಕಂಡು ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.

ಈ ವೇಳೆ ಪ್ರಯಾಣಿಕ ಗುದದ್ವಾರದಲ್ಲಿ ಚಿನ್ನವನ್ನು ಮಾತ್ರೆಗಳಂತೆ ಪರಿವರ್ತಿಸಿ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಚಿನ್ನ ಸಮೇತ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಗುದದ್ವಾರದಲ್ಲಿಟ್ಟುಕೊಂಡು ಚಿನ್ನ ಸಾಗಣೆ... ಮಂಗಳೂರು ಏರ್​ಪೋರ್ಟ್​ನಲ್ಲಿ ಮೂವರು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.