ETV Bharat / state

ಗುಡಿಸಲಿನಲ್ಲಿ ಅಕ್ರಮ ಸ್ಫೋಟಕ ಪತ್ತೆ: ಆರೋಪಿ ಅರೆಸ್ಟ್​ - ಆನೇಕಲ್

ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರ ತಂಡ ಯಶಸ್ವಿಯಾಗಿದೆ. ವೆಂಕಟೇಶ್ ಬಂಧಿತ ಆರೋಪಿ.

Illegal Explosive found in Hut: accused Arrested
ಗುಡಿಸಲಿನಲ್ಲಿ ಅಕ್ರಮ ಸ್ಪೋಟಕ ಪತ್ತೆ: ಆರೋಪಿ ಬಂಧನ
author img

By

Published : Mar 3, 2021, 7:37 AM IST

ಆನೇಕಲ್: ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸ್ ಇನ್ಸ್​ಪೆಕ್ಟರ್ ಬಿ.ಕೆ. ಶೇಖರ್ ನೇತೃತ್ವದ ತಂಡ ಯಶಸ್ವಿಯಾಗಿದೆ.

Illegal Explosive found in Hut: accused Arrested
ವೆಂಕಟೇಶ್ ಬಂಧಿತ ಆರೋಪಿ

ವೆಂಕಟೇಶ್ ಬಂಧಿತ ಆರೋಪಿ. ಆನೇಕಲ್​ ತಾಲೂಕಿನ ಬಾಲಾರಬಂಡೆ ಬಳಿಯ ಸರ್ಕಾರಿ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿ ಸ್ಫೋಟಕಗಳನ್ನು ಇಟ್ಟುಕೊಂಡಿದ್ದ. ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂ ಗ್ರಾಮದವನಾಗಿದ್ದ ಈತ ಸೇಫ್ಟಿ ಪ್ಯೂಜ್ 82 ಕಟ್ಟು, ಗನ್ ಪೌಡರ್ ಹಾಗೂ ಇನ್ನಿತರ ಆರೇಳು ವಿಧದ ಸ್ಫೋಟಕಗಳನ್ನು ಹೊಂದಿದ್ದ. ಇದರಿಂದ ಬಂಡೆ ಸ್ಫೋಟಿಸಿ ಚಪ್ಪಡಿ, ಜಲ್ಲಿ, ಕಲ್ಲುದಿಂಡು ಕಾರ್ಯಕ್ಕೆ ಬಳಸುತ್ತಿದ್ದನೆಂದು ವಿಚಾರಣೆಯಿಂದ ತಿಳಿದು ಬಂದಿದೆ.

ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ಅಪಾಯಕಾರಿ ಅಕ್ರಮ ಸ್ಫೋಟಕ ಹೊಂದಿದ್ದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.