ETV Bharat / state

ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?: ಸಿ ಟಿ ರವಿ

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂಬ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಸಿ ಟಿ ರವಿ ಕಿಡಿಕಾರಿದ್ದಾರೆ.

ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಅಪ್ಪನ ಆಸ್ತಿಯೇ?: ಸಿ ಟಿ ರವಿ

author img

By

Published : Aug 10, 2022, 4:11 PM IST

Updated : Aug 10, 2022, 4:55 PM IST

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಹ್ಮದ್ ಖಾನ್ ಅವರ ಅಪ್ಪನ ಆಸ್ತಿಯೇ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂಬ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ವಿಧಾನಸೌಧದಲ್ಲಿಂದು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಇಡಬೇಕು ಎಂದಾದರೆ ಇಟ್ಟೇ ಇಡುತ್ತೇವೆ. ಬೇಡ ಎನ್ನಲು‌ ಜಮೀರ್ ಯಾರು? ಇವರು ಯಾವ ಸೀಮೆ ದೊಣ್ಣೆ ನಾಯಕ ಎಂದು ಗುಡುಗಿದರು.

ಗಣೇಶನನ್ನು ಕೂರಿಸಲು ಇವರ ಅಪ್ಪಣೆ ಏಕೆ ಬೇಕು? ನಾವು ಅರಬ್ ನಲ್ಲಿ‌ ಗಣೇಶ ಇಡುತ್ತಿದ್ದೇವಾ? ಅರಬ್ ನಲ್ಲಿ ಗಣೇಶ ಕೂರಿಸಬೇಕಾದರೆ ಜಮೀರ್ ಹಾಗೂ ಅವರ ಪೂರ್ವಜರ ಅಪ್ಪಣೆ ಬೇಕಾಗಬಹುದು. ಆದರೆ, ನಮ್ಮ ದೇಶದಲ್ಲಿ ಗಣೇಶನನ್ನು ಇಡಲು‌ ಜಮೀರ್ ಅಪ್ಪಣೆ ಬೇಕಿಲ್ಲ ಎಂದು ಹೇಳಿದರು.

ಜಮೀರ್​ ಯಾರು? : ನಮ್ಮ ದೇಶದಲ್ಲಿ ಗಣಪತಿ ಇಡಬೇಕೋ, ಬೇಡವೋ‌‌ ಎಂದು ಜಮೀರ್ ಕೇಳಿ ತೀರ್ಮಾನ ಮಾಡಬೇಕಾ? ಜಮೀರ್ ಕೇಳಿ ಗಣೇಶ ಪ್ರತಿಷ್ಠಾನಪನೆ ಮಾಡಬೇಕಾದ ಅಗತ್ಯ ಇಲ್ಲ. ನಮಗೆ ತಾಕತ್ತು ಇದೆ, ನಾವು ಇಡುತ್ತೇವೆ. ಅದ್ಧೂರಿಯಾಗಿ ಆಚರಣೆ ಮಾಡುತ್ತೇವೆ, ಬಂದು‌ ತಡೆಯಲಿ ನೋಡೋಣ ಎಂದು ಸಿ ಟಿ ರವಿ ಸವಾಲು ಹಾಕಿದರು.

ಅನುಮತಿ ಯಾಕೆ? : ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಏಕೆ ಅನುಮತಿ ಬೇಕು? ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇವೆ, ಎಂಟು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ರಾಷ್ಟ್ರಧ್ವಜದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಅಂದು, ರಾಷ್ಟ್ರಧ್ವಜ ಹಿಡಿದುಕೊಂಡು ಹೋದವರ ಮೇಲೆ ಗೋಲಿಬಾರ್ ಮಾಡಿದ್ದರು. ಕಾಂಗ್ರೆಸ್​ನ ಈ ಪಾಪ‌ ಏಳು ಸಮುದ್ರದಲ್ಲಿ ಮುಳಿಗಿದರೂ ಹೋಗಲ್ಲ ಎಂದು ವಾಗ್ದಾಳಿ ನಡೆಸಿದರು.

ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?: ಸಿ ಟಿ ರವಿ

ಮೈದಾನಕ್ಕೆ ಒಡೆಯರ್ ಹೆಸರು : ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಜಯ ಚಾಮರಾಜ ಒಡೆಯರ್ ಹೆಸರು ಇಡಲಿ. ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ‌ನಿಟ್ಟಿನಲ್ಲಿ ನಮಗೆ ಬೇಕಾಗಿರುವುದು ಬಿಬಿಎಂಪಿ, ಪೊಲೀಸ್ ಇಲಾಖೆ ಅನುಮತಿ ಬೇಕೇ ಹೊರತು, ಜಮೀರ್ ಅನುಮತಿ ಅಲ್ಲ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು, ಕಾಂಗ್ರೆಸ್​​ನವರು ದಿನಾ ಸುದ್ದಿಯಲ್ಲಿರಬೇಕು ಎಂಬುವು ಅವರ ಕನಸು. ಹಾಗಾಗಿ ಈ ವಿಚಾರ ಕೆದಕುತ್ತಿದ್ದಾರೆ. ಹೀಗಾಗಿ ಇಲ್ಲಸಲ್ಲದ ವಿಚಾರ ಪ್ರಸ್ತಾಪ ಮಾಡ್ತಿದ್ದಾರೆ. ವೀರೇಂದ್ರ ಪಾಟೀಲ್ ದಾಖಲೆ ಸ್ಥಾನ ಗೆಲ್ಲಿಸುವ ಮೂಲಕ ಸಿಎಂ ಆಗಿದ್ದರು. ಅವರಿಗೆ ಆರೋಗ್ಯ ಸರಿ ಇಲ್ಲದಿದ್ದ ಕಾರಣ ನೀಡಿ, ಏರ್ ಪೋರ್ಟ್ ನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ‌ ಚೀಟಿ ನೀಡುವ ಮೂಲಕ ಸಿಎಂ ಬದಲಾವಣೆ ಮಾಡಿದ್ದರು. ಇದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಬದಲಾವಣೆ ಇಲ್ಲ: ಅಳೆದು ತೂಗಿ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಗಿದ್ದು, ಯಾವುದೇ ಬದಲಾವಣೆ ಇಲ್ಲ. ನಮ್ಮ ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಕಾಂಗ್ರೆಸ್ ಯಾವ ಊರು ದಾಸಪ್ಪ? ಅವರ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ತೀರ್ಮಾನ ಮಾಡಲಿ ಎಂದು ಕುಟುಕಿದರು.

ದತ್ತ ಪೀಠಕ್ಕೆ ಸಿದ್ದರಾಮಯ್ಯರಿಂದ ಅನ್ಯಾಯ : ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ಚುನಾವಣೆಗೆ ನಿಲ್ಲಬೇಕಾದರೆ ಮತದಾರ ಪಟ್ಟಿಯಲ್ಲಿ‌ ಹೆಸರು ಇದ್ದರೆ ಸಾಕು. ಹತ್ತು ಜನ ಸೂಚಿಸಿದರೆ ನಾಮಪತ್ರ ಸಲ್ಲಿಕೆ ಊರ್ಜಿತ ಆಗುತ್ತದೆ. ಆದರೆ, ಗೆಲ್ಲಿಸಲು ಜನರು ವೋಟ್ ಹಾಕಬೇಕು. ಆದರೆ, ನನ್ನನ್ನು ಜನರು ಗೆಲ್ಲಿಸುತ್ತಾರೆ. ಕ್ಷೇತ್ರದಲ್ಲಿ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ದತ್ತ ಪೀಠಕ್ಕೆ ಅನ್ಯಾಯ ಮಾಡಿದವರು ಎಂಬ ಭಾವನೆ ಅಲ್ಲಿನ ಜನರಲ್ಲಿದೆ.‌ ಅದಕ್ಕೆ ಚಿಕ್ಕಮಗಳೂರು ಜನರು ಉತ್ತರ ಕೊಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ನಾನು ಹೇಳಿದೆ.. ಸಿದ್ದರಾಮಯ್ಯ ಅವರೇ ಅನ್ಯಾಯ ಮಾಡಬೇಡಿ. ಅದು ಹಿಂದೂ ಜನರದ್ದು ಅಂತ ಮನವಿ ಮಾಡಿದೆ. ಆದರೂ ಕೇರ್ ಮಾಡಲಿಲ್ಲ. ಅವರು ಅಲ್ಲಿಗೆ ಬಂದರೆ ಚಿಕ್ಕಮಗಳೂರು ಜನತೆ ಪಾಠ ಕಲಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆದ್ದಿದ್ದೇವೆ. ಈಗ ಐದಕ್ಕೆ ಐದೂ ಸ್ಥಾನ ಗೆಲ್ಲುತ್ತೇವೆ ಎಂದು ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರದ ವಿಸ್ತರಣೆ-ಬಲವರ್ಧನೆಗೆ ಕ್ರಮ: ಆರಗ ಜ್ಞಾನೇಂದ್ರ

Last Updated : Aug 10, 2022, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.