ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ದಿನಕೊಂದು, ಕ್ಷಣಕ್ಕೊಂದು ಬೆಳವಣಿಗೆಗಳು ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರ ಉಳಿಯುತ್ತಾ ಉರುಳುತ್ತಾ ಅನ್ನೋ ಯಕ್ಷಪ್ರಶ್ನೆ ಎಲ್ಲರಿಗೂ ಕಾಡ್ತಾ ಇದೆ. ಈ ಮಧ್ಯೆಯೂ ಸರ್ಕಾರ ಮೂವರು ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ಮೂಲಕ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.
ಡಾಕ್ಟರ್ ರಜನೀಶ್ ಗೋಯಲ್, (ಐಎಎಸ್) ಅಡಿಷನಲ್ ಚೀಫ್ ಸೆಕ್ರೆಟರಿ, ಗೌರಮೆಂಟ್ ಹೋಂ ಡಿಪಾರ್ಟ್ಮೆಂಟ್ನಿಂದ ಅಡಿಷನಲ್ ಚೀಫ್ ಸೆಕ್ರೆಟರಿ ಗೌರ್ನಮೆಂಟ್ ಯೂತ್ ಎಂಪವರ್ಮೆಂಟ್ ಅಂಡ್ ಸ್ಪೋರ್ಟ್ಸ್ ಡಿಪಾರ್ಟ್ಮೆಂಟ್ಗೆ ವರ್ಗಾವಣೆಗೊಂಡಿದ್ದಾರೆ.
ಡಾ. ಜಿ.ಕಲ್ಪನಾ (ಐಎಎಸ್) ಅಡಿಷನಲ್ ಚೀಫ್ ಸೆಕ್ರೆಟರಿ ಗೌರ್ನಮೆಂಟ್ ಎಂಪವರ್ಮೆಂಟ್ ಅಂಡ್ ಸ್ಪೋರ್ಟ್ಸ್ ಡಿಪಾರ್ಟ್ಮೆಂಟ್ನಿಂದ ಅಡಿಷನಲ್ ಸೆಕ್ರೆಟರಿ ಗೌರ್ನಮೆಂಟ್ ಪಬ್ಲಿಕ್ ಎಂಟರ್ಪ್ರೈಸಸ್ ಡಿಪಾರ್ಟ್ಮೆಂಟ್ಗೆ ವರ್ಗಾವಣೆಗೊಂಡಿದ್ದಾರೆ.