ETV Bharat / state

ಬಿಜೆಪಿಯವರ ಬಳಿ ಅಧಿಕಾರವಿದೆ, ಏನಾದ್ರೂ ಮಾಡಲಿ.. ನಾ ಪ್ರತಿಕ್ರಿಯಿಸಲ್ಲ- ಮಾಜಿ ಸಚಿವ ಡಿಕೆಶಿ

author img

By

Published : Jan 13, 2020, 5:20 PM IST

ಕನ್ನಡ ಮಾಧ್ಯಮಗಳು ತಮ್ಮತನ ಉಳಿಸಿಕೊಳ್ಳಬೇಕು. ನಿಮ್ಮ ಇಮೇಜ್ ಹಾಳು ಮಾಡಿಕೊಳ್ಳಬೇಡಿ. ಸತ್ಯ ಸುದ್ದಿ ಮಾಡಿ. ಏನೇನೋ ಸುಳ್ಳು ಸುದ್ದಿ ಮಾಡಿ ಹಾಳು ಮಾಡಿಕೊಳ್ಳಬೇಡಿ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್‌ ಸಲಹೆ ನೀಡಿದರು.

i-wont-give-reaction-for-bjp-action-said-by-dks

ಬೆಂಗಳೂರು: ಬಿಜೆಪಿ ಅವರ ಬಳಿ ಅಧಿಕಾರವಿದೆ. ಅವರು ಏನು ಬೇಕಾದರೂ ಮಾಡಲಿ, ಅಶಾಂತಿ ಉಂಟು ಮಾಡಿದರೂ ನಾನೇನೂ ಮಾತನಾಡಲ್ಲ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಯೇಸು ಪ್ರತಿಮೆ ವಿರುದ್ಧ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಡೆಯಿಂದ ಕನಕಪುರ ಚಲೋ ಆಯೋಜಿಸಿರುವ ಕುರಿತು ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ಅವ್ರು ಯಾರೋ ನನಗೆ ಗೊತ್ತಿಲ್ಲ. ನಾನು ಮಾನವ ಜೀವನಕ್ಕೆ ಜಯವಾಗಲಿ. ಮಾನವ ಧರ್ಮದಲ್ಲಿ ನಾನು ನಂಬಿಕೆ ಇಟ್ಟವನು‌’ ಎಂದರು.

ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡಲ್ಲ.. ಮಾಜಿ ಸಚಿವ ಡಿ ಕೆ ಶಿವಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷ ಇರಬೇಕು. ಪರ-ವಿರೋಧ ಇರಬೇಕು. ಯಾರು ಬೇಕಾದರೂ ಕನಕಪುರಕ್ಕೆ ಬರಬಹುದು. ಬಾರದಂತೆ ತಡೆಯುವುದು ನನ್ನ ಧರ್ಮ ಅಲ್ಲ. ಇದು ಬೆಂಗಳೂರು. ಇಡೀ ವಿಶ್ವ ಇಲ್ಲಿ ಏನೇನಾಗುತ್ತಿದೆ ಅಂತಾ ನೋಡ್ತಿದೆ. ಅಮೆರಿಕಾ,ಆಸ್ಟ್ರೇಲಿಯಾದಿಂದ ಫೋನ್ ಮಾಡ್ತಿದ್ದಾರೆ. ನಾನು ಏನು ಮಾತಾಡೊಲ್ಲ. ಅವರ ಹತ್ತಿರ ಅಧಿಕಾರ ಇದೆ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ನನ್ನ ಕಾರ್ಯಕರ್ತರಿಗೆ ಹೇಳಿದ್ದೇನೆ. ಯಾರು ಏನೇ ಮಾತಾಡಿದ್ರೂ ಸುಮ್ಮನೆ ಇರಿ.‌ ಎಷ್ಟೇ ಬೈದರು ಸುಮ್ಮನೆ ‌ಇರಿ ಅಂತಾ ಹೇಳಿದ್ದೇನೆ. ಯಾರೂ ಗಲಾಟೆ ಮಾಡೋದು ಬೇಡ. ಅವರು ಏನು ಬೇಕೋ ಅದನ್ನು ಮಾಡಿಕೊಂಡು ಹೋಗಲಿ ಎಂದರು.

ಕನಕಪುರಕ್ಕೆ ಬೇರೆಬೇರೆ ಕಡೆಯಿಂದ ಎಷ್ಟು ಗಾಡಿಗಳು ಹೋಗಿವೆ ಗೊತ್ತಿದೆ. ರಾಮನಗರದ ಮಾಜಿ ಮಂತ್ರಿ ಒಬ್ಬರೇ ನನಗೆ ಮಾಹಿತಿ ಕೊಟ್ಟರು. ತಪ್ಪು ತಿಳ್ಕೊಬೇಡಿ ಅಣ್ಣಾ.. ಏನೋ ಮಾಡ್ಕೊಂಡು ಹೋಗ್ತಾರೆ ಅಂದರು. ಪಾಪ ಅವರ ಹೆಸರನ್ನು ಬಹಿರಂಗಪಡಿಸಲ್ಲ. ಅವರು ಇನ್ನೂ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಬೇಕಾಗಿದೆ. ರಾಜಕಾರಣ ನಿಂತ ನೀರಲ್ಲ. ಏನು ಬೇಕಾದರೂ ಆಗಬಹುದು. ರಾಜಕಾರಣದಲ್ಲಿ ನಮ್ಮ ನೆರಳನ್ನೇ ನಂಬಲಿಕ್ಕೆ ಆಗಲ್ಲ. ರಾತ್ರಿ ಆದರೆ ನಮ್ಮ ನೆರಳು ನಮ್ಮ ಜೊತೆನೇ ಇರಲ್ಲ. ಪರೋಕ್ಷವಾಗಿ ಸಿ ಪಿ ಯೋಗೇಶ್ವರ್ ರಾಜಕಾರಣ ಬದಲಾಗಲಿದೆ ಎಂದು ನುಡಿದರು.

ಕನಕಪುರಕ್ಕೆ ಯಾರು ಬೇಕಾದರೂ ಬರಬಹುದು. ಕೇವಲ ಇವರಲ್ಲ, ಸಚಿವರುಗಳಾಗಲಿ, ದೊಡ್ಡ ದೊಡ್ಡ ನಾಯಕರಾಗಲಿ ಯಾರು ಬೇಕಾದರೂ ಬರಲಿ. ನಾವು ಅವರನ್ನು ಸ್ವಾಗತಿಸುತ್ತೇವೆ. ಅಭಿವೃದ್ಧಿ ಮಾಡುತ್ತೇವೆ ಅಂತಿದ್ದಾರೆ, ಮಾಡಲಿ. ಅವರವರ ಖುಷಿಗೆ ಏನೇನ್ ಬೇಕು ಅದನ್ನು ಮಾಡ್ತಿದ್ದಾರೆ, ಮಾಡಲಿ. ಕನಕಪುರ ಕಸ ಗೂಡಿಸುತ್ತೇವೆ ಅಂದರು. ‌ಕ್ಲೀನ್ ಮಾಡ್ತೇವೆ ಅಂತಿದ್ದಾರೆ ಮಾಡಲಿ. ನಾವು ಮಾಡಿರುವುದನ್ನು ನೋಡಲಿ. ಸೋಲಾರ್ ಪ್ಯಾನಲ್ ಮಾಡಿದ್ದೇನೆ, ರೈತರಿಗೆ ಪಂಪ್ ಕೊಟ್ಟಿದ್ದೇನೆ. ಪ್ರತಿ ಊರಿಗೆ ಕಾವೇರಿ ನೀರು ಕೊಟ್ಟಿದ್ದೇನೆ. ಬಿಲ್ಡಿಂಗ್‌ಗಳನ್ನು ನೋಡಲಿ. ಇಡೀ ದೇಶಕ್ಕೆ ನರೇಗಾ ಅತ್ಯುತ್ತಮವಾಗಿ ಜಾರಿಗೆ ತಂದಿದೆ ಅಂತಾ ಸರ್ಟಿಫಿಕೇಟ್ ಕೊಟ್ಟಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಇದ್ದಾಗ ಮಾಗಡಿ ರೋಡ್​ನಲ್ಲಿ ಕೆಂಪೇಗೌಡ ಪ್ರಾಧಿಕಾರಕ್ಕೆ ಕ್ರೈಸ್ತರು 5 ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ. ನಾನು ಜಾರ್ಜ್ ಅವರೊಂದಿಗೆ ಮಾತನಾಡಿ, ಆರ್ಚ್ ಬಿಷಪ್ ಅವರಿಗೆ ಮನವಿ ಮಾಡಿಕೊಂಡಾಗ ಕೆಂಪೇಗೌಡ ಪ್ರಾಧಿಕಾರಕ್ಕೆ ಐದು ಎಕರೆ ಭೂಮಿ ಬಿಟ್ಟುಕೊಟ್ಟರು. ಬೇಕಿದ್ದರೆ ಹೋಗಿ ಕೇಳಿ.. ಬಿಜೆಪಿ ಅವರು ರಾಜಕಾರಣ ಮಾಡಬೇಕು ಅಂತಾ ಮಾತನಾಡುತ್ತಿದ್ದಾರೆ. ಅವರಿಗೆ ಅವರ ಪಕ್ಷಕ್ಕೆ ಏನು ಒಳ್ಳೆಯದಾಗುತ್ತದೆಯೋ ಅದನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಕನ್ನಡ ಮಾಧ್ಯಮಗಳು ತಮ್ಮತನ ಉಳಿಸಿಕೊಳ್ಳಬೇಕು. ನಿಮ್ಮ ಇಮೇಜ್ ಹಾಳು ಮಾಡಿಕೊಳ್ಳಬೇಡಿ. ಸತ್ಯ ಸುದ್ದಿ ಮಾಡಿ. ಏನೇನೋ ಸುಳ್ಳು ಸುದ್ದಿ ಮಾಡಿ ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು. ಜಮೀರ್ ಅಹ್ಮದ್ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ ಅಂದರು ಮಾಜಿ ಸಚಿವ ಡಿಕೆಶಿ. ದೆಹಲಿಗೆ ಹೋಗುವ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ನಾನು ಪಾರ್ಟಿ ಬಗ್ಗೆ ಮಾತನಾಡುವುದಿಲ್ಲವೆಂದು ಈಗಾಗಲೇ ಹೇಳಿದ್ದೇನೆ. ಮಾತಾಡೋ ಜಾಗದಲ್ಲಿ ಮಾತಾಡ್ತೀನಿ. ನನ್ನ ವಿಚಾರ ನಿಮಗೆ ಗೊತ್ತಿರುತ್ತೆ ಅಲ್ಲವಾ? ನನ್ನ ಫಾಲೋ ಮಾಡ್ತಿದ್ದೀರಾ, ಗೊತ್ತಾಗುತ್ತೆ ಬಿಡಿ ಎಂದರು.

ಬಿಜೆಪಿ ನಡೆಯಿಂದ ಡಿಕೆಶಿ ಭಯ ಬೀಳ್ತಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು. ಗಢಗಢ ನಡುಗುತ್ತಿದ್ದೇನೆ. ಈಗಲೂ ನಡುಗುತ್ತಿದ್ದೇನೆ ಎಂದು ಹಾಸ್ಯ ಮಾಡಿದರು.

Intro:ಬೆಂಗಳೂರು : ಬಿಜೆಪಿ ಅವರ ಬಳಿ ಅಧಿಕಾರ ಇದೆ. ಅವರು ಏನು ಬೇಕಾದರೂ ಮಾಡಲಿ, ಅಶಾಂತಿ ಉಂಟು ಮಾಡಿದರೂ ನಾನೇನು ಮಾತನಾಡಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. Body:ಯೇಸು ಪ್ರತಿಮೆ ವಿರುದ್ಧ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಡೆಯಿಂದ ಕನಕಪುರ ಚಲೋ ಆಯೋಜಿಸಿರುವ ಕುರಿತು ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ನನಗೆ ಅವ್ರು ಯಾರು ಗೊತ್ತಿಲ್ಲ. ನಾನು ಮಾನವ ಜೀವನಕ್ಕೆ ಜಯವಾಗಲಿ. ಮಾನವ ಧರ್ಮದಲ್ಲಿ ನಾನು ನಂಬಿಕೆ ಇಟ್ಟವನು‌’ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷ ಇರಬೇಕು. ಪರ ವಿರೋಧ ಇರಬೇಕು. ಯಾರು ಬೇಕಾದರೂ ಕನಕಪುರಕ್ಕೆ ಬರಬಹುದು. ಬಾರದಂತೆ ತಡೆಯುವುದು ನನ್ನ ಧರ್ಮ ಅಲ್ಲ. ಇದು ಬೆಂಗಳೂರು. ಇಡೀ ವಿಶ್ವ ಇಲ್ಲಿ ಏನೇನಾಗುತ್ತಿದೆ ಅಂತಾ ನೋಡ್ತಿದೆ. ಅಮೆರಿಕಾ, ಆಸ್ಟ್ರೇಲಿಯಾದಿಂದ ಫೋನ್ ಮಾಡ್ತಿದ್ದಾರೆ. ನಾನು ಏನು ಮಾತಾಡೊಲ್ಲ. ಅವರ ಹತ್ತಿರ ಅಧಿಕಾರ ಇದೆ. ಅವರು ಏನು ಬೇಕಾದ್ರು ಮಾಡಿಕೊಳ್ಳಲಿ. ನನ್ನ ಕಾರ್ಯಕರ್ತರಿಗೆ ಹೇಳಿದ್ದೇನೆ. ಯಾರು ಏನೇ ಮಾತಾಡಿದ್ರು ಸುಮ್ಮನೆ ಇರಿ.‌ ಎಷ್ಟೇ ಬೈದರು ಸುಮ್ಮನೆ ‌ಇರಿ ಅಂತ ಹೇಳಿದ್ದೇನೆ. ಯಾರು ಗಲಾಟೆ ಮಾಡೋದು ಬೇಡ. ಅವರು ಏನು ಬೇಕೋ ಅದನ್ನು ಮಾಡಿಕೊಂಡು ಹೋಗಲಿ ಎಂದರು.
ಕನಕಪುರಕ್ಕೆ ಬೇರೆ ಬೇರೆ ಕಡೆಯಿಂದ ಎಷ್ಟು ಗಾಡಿಗಳು ಹೋಗಿವೆ ಗೊತ್ತಿದೆ. ರಾಮನಗರದ ಮಾಜಿ ಮಂತ್ರಿ ಒಬ್ಬರೇ ನನಗೆ ಮಾಹಿತಿ ಕೊಟ್ಟರು. ತಪ್ಪು ತಿಳ್ಕೊಬೇಡಿ ಅಣ್ಣಾ. ಏನೋ ಮಾಡ್ಕೊಂಡು ಹೋಗ್ತಾರೆ ಅಂದರು. ಪಾಪ ಅವರ ಹೆಸರನ್ನು ಬಹಿರಂಗಪಡಿಸಲ್ಲ. ಅವರು ಇನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಬೇಕಾಗಿದೆ. ರಾಜಕಾರಣ ನಿಂತ ನೀರಲ್ಲ. ಏನು ಬೇಕಾದರು ಆಗಬಹುದು. ರಾಜಕಾರಣದಲ್ಲಿ ನಮ್ಮ ನೆರಳನ್ನೇ ನಂಬಲಿಕ್ಕೆ ಆಗಲ್ಲ. ರಾತ್ರಿ ಆದರೆ ನಮ್ಮ ನೆರಳು ನಮ್ಮ ಜೊತೆನೇ ಇರಲ್ಲ. ಪರೋಕ್ಷವಾಗಿ ಸಿ.ಪಿ ಯೋಗೇಶ್ವರ್ ರಾಜಕಾರಣ ಬದಲಾಗಲಿದೆ ಎಂದು ನುಡಿದರು.
ಕನಕಪುರಕ್ಕೆ ಯಾರು ಬೇಕಾದರೂ ಬರಬಹುದು. ಕೇವಲ ಇವರಲ್ಲ ಸಚಿವರುಗಳಾಗಲಿ, ದೊಡ್ಡ ದೊಡ್ಡ ನಾಯಕರಾಗಲಿ ಯಾರು ಬೇಕಾದರೂ ಬರಲಿ. ನಾವು ಅವರನ್ನು ಸ್ವಾಗತಿಸುತ್ತೇವೆ. ಅಭಿವೃದ್ಧಿ ಮಾಡುತ್ತೇವೆ ಅಂತಿದ್ದಾರೆ, ಮಾಡಲಿ. ಅವರವರ ಖುಷಿಗೆ ಏನೇನ್ ಬೇಕು ಅದನ್ನು ಮಾಡ್ತಿದ್ದಾರೆ, ಮಾಡಲಿ. ಕನಕಪುರ ಕಸ ಗೂಡಿಸುತ್ತೇವೆ ಅಂದರು. ‌ಕ್ಲೀನ್ ಮಾಡ್ತೇವೆ ಅಂತಿದ್ದಾರೆ ಮಾಡಲಿ. ನಾವು ಮಾಡಿರುವುದನ್ನು ನೋಡಲಿ. ಸೋಲಾರ್ ಪ್ಯಾನಲ್ ಮಾಡಿದ್ದೇನೆ, ರೈತರಿಗೆ ಪಂಪ್ ಕೊಟ್ಟಿದ್ದೇನೆ. ಪ್ರತಿ ಊರಿಗೆ ಕಾವೇರಿ ನೀರು ಕೊಟ್ಟಿದ್ದೇನೆ. ಬಿಲ್ಡಿಂಗ್ ಗಳನ್ನು ನೋಡಲಿ. ಇಡೀ ದೇಶಕ್ಕೆ ನರೇಗಾ ಅತ್ಯುತ್ತಮವಾಗಿ ಜಾರಿಗೆ ತಂದಿದೆ ಅಂತ ಸರ್ಟಿಫಿಕೇಟ್ ಕೊಟ್ಟಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಇದ್ದಾಗ ಮಾಗಡಿ ರೋಡ್ ನಲ್ಲಿ ಕೆಂಪೇಗೌಡ ಪ್ರಾಧಿಕಾರಕ್ಕೆ ಕ್ರೈಸ್ತರು 5 ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ. ನಾನು ಜಾರ್ಜ್ ಅವರೊಂದಿಗೆ ಮಾತನಾಡಿ, ಆರ್ಚ್ ಬಿಷಪ್ ಅವರಿಗೆ ಮನವಿ ಮಾಡಿಕೊಂಡಾಗ ಕೆಂಪೇಗೌಡ ಪ್ರಾಧಿಕಾರಕ್ಕೆ ಐದು ಎಕರೆ ಭೂಮಿ ಬಿಟ್ಟುಕೊಟ್ಟರು. ಬೇಕದ್ದರೆ ಹೋಗಿ ಕೇಳಿ. ಬಿಜೆಪಿ ಅವರು ರಾಜಕಾರಣ ಮಾಡಬೇಕು ಅಂತಾ ಮಾತನಾಡುತ್ತಿದ್ದಾರೆ. ಅವರಿಗೆ ಅವರ ಪಕ್ಷಕ್ಕೆ ಏನು ಒಳ್ಳೆಯದಾಗುತ್ತದೆಯೋ ಅದನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಜಮೀರ್ ಅಹಮದ್ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ಕನ್ನಡ ಮಾಧ್ಯಮಗಳು ತಮ್ಮ ತನ ಉಳಿಸಿಕೊಳ್ಳಬೇಕು. ನಿಮ್ಮ ಇಮೇಜ್ ಹಾಳು ಮಾಡಿಕೊಳ್ಳಬೇಡಿ. ಸತ್ಯ ಸುದ್ದಿ ಮಾಡಿ. ಏನೇನೋ ಸುಳ್ಳು ಸುದ್ದಿ ಮಾಡಿ ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ದೆಹಲಿಗೆ ಹೋಗುವ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ನಾನು ಪಾರ್ಟಿ ಬಗ್ಗೆ ಮಾತನಾಡುವುದಿಲ್ಲವೆಂದು ಈಗಾಗಲೇ ಹೇಳಿದ್ದೇನೆ. ಮಾತಾಡೋ ಜಾಗದಲ್ಲಿ ಮಾತಾಡ್ತೀನಿ. ನನ್ನ ವಿಚಾರ ನಿಮಗೆ ಗೊತ್ತಿರುತ್ತೆ ಅಲ್ಲವಾ? ನನ್ನ ಫಾಲೋ ಮಾಡ್ತಿದ್ದೀರಾ ಗೊತ್ತಾಗುತ್ತೆ ಬಿಡಿ ಎಂದರು.
ಬಿಜೆಪಿ ನಡೆಯಿಂದ ಡಿಕೆಶಿ ಭಯ ಬೀಳ್ತಿದ್ದಾರಾ ಅನ್ನೊ ಪ್ರಶ್ನೆಗೆ ಉತ್ತರಿಸಿ, ಹೌದು, ಗಡ ಗಡ ನಡುಗುತ್ತಿದ್ದೇನೆ. ಈಗಲೂ ನಡುಗುತ್ತಿದ್ದೇನೆ ಎಂದು ಹಾಸ್ಯ ಮಾಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.