ETV Bharat / state

ಮುನಿಸಿಕೊಂಡಿರುವ ಸಿ.ಎಂ. ಇಬ್ರಾಹಿಂ ಜೊತೆ ಮಾತನಾಡುತ್ತೇನೆ: ಸಿದ್ದರಾಮಯ್ಯ

ನಾನು ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಜೊತೆ ಮಾತನಾಡುತ್ತೇನೆ. ಪಕ್ಷ ಬಿಡ್ತೇನೆ ಅಂತಾ ಹಿಂದೆಯೂ ಹೇಳಿದ್ದರು, ಈಗಲೂ ಹೇಳಿದ್ದಾರೆ‌. ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

author img

By

Published : Jan 27, 2022, 7:30 PM IST

I will talk with C.M. Ibrahim says Siddaramaiah
ಶಾಸಕ ರಿಜ್ವಾನ್ ಅರ್ಷದ್ ಕರೆದಿದ್ದ ಭೋಜನ ಕೂಟ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಶಾಸಕ ರಿಜ್ವಾನ್ ಅರ್ಷದ್ ಕರೆದಿದ್ದ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗುವ ನಿರೀಕ್ಷೆ ಹುಸಿಯಾದ ಹಿನ್ನೆಲೆ ಸಿ.ಎಂ. ಇಬ್ರಾಹಿಂ ಅಸಮಾಧಾನಗೊಂಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮುಂದೇನು ಮಾಡಬೇಕು ಎಂಬುದರ ಕುರಿತು ಚರ್ಚಿಸಲು ಇಂದು ಅಲ್ಪಸಂಖ್ಯಾತ ನಾಯಕರು ಸಭೆ ಸೇರಿ ಚರ್ಚಿಸಿದ್ದಾರೆ ಎನ್ನಲಾಗ್ತಿದೆ. ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಭೋಜನಕೂಟ ಆಯೋಜಿಸಿ ಸಭೆಯನ್ನು ನಡೆಸಲಾಗಿದೆ. ಈ ಕೂಟದಲ್ಲಿ ಸಿದ್ದರಾಮಯ್ಯ ಸಹ ಪಾಲ್ಗೊಂಡು ಅಲ್ಪಸಂಖ್ಯಾತ ನಾಯಕರ ಅಹವಾಲು ಆಲಿಸಿದರು.

ಭೋಜನ ಕೂಟದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಾನು ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಜೊತೆ ಮಾತನಾಡುತ್ತೇನೆ ಎಂದರು.

ಶಾಸಕ ರಿಜ್ವಾನ್ ಅರ್ಷದ್ ಕರೆದಿದ್ದ ಭೋಜನ ಕೂಟದಲ್ಲಿ ಸಿದ್ದರಾಮಯ್ಯ ಭಾಗಿ

ಬಳಿಕ ಮಾಧ್ಯಮದವರು, ಇಬ್ರಾಹಿಂ ನಿಮ್ಮ ಫ್ರೆಂಡ್ ಅಲ್ವಾ ಸರ್ ಅಂದಿದ್ದಕ್ಕೆ, ನೀವೂ ಸಹ ನನ್ನ ಫ್ರೆಂಡ್ಸ್. ಸಿದ್ದರಾಮಯ್ಯ ತಬ್ಬಲಿ ಆದ್ರು ಅಂತ ಇಬ್ರಾಹಿಂ ಹೇಳಿಕೆ ವಿಚಾರ ಮಾತನಾಡಿ, ನೀವು ಕೇಳಿದ್ದಕ್ಕೆಲ್ಲ ಉತ್ತರ ಕೊಡೋಕೆ ಆಗಲ್ಲ. ಪಕ್ಷ ಬಿಡ್ತೇನೆ ಅಂತಾ ಹಿಂದೆಯೂ ಹೇಳಿದ್ದರು, ಈಗಲೂ ಹೇಳಿದ್ದಾರೆ‌. ಹಾಗಾಗಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಮತ್ತೆ ಪ್ರಶ್ನೆ ಕೇಳಿದ್ದಕ್ಕೆ ಗದರಿಸಿದರು.

ಇದನ್ನೂ ಓದಿ: ಸಿ.ಎಂ. ಇಬ್ರಾಹಿಂ ಅಸಮಾಧಾನ ಶಮನಕ್ಕೆ ಮಾತುಕತೆ ನಡೆಸುತ್ತೇನೆ: ಡಿಕೆಶಿ

ಪಕ್ಷದ ನಾಯಕ ಸಿ.ಎಂ. ಇಬ್ರಾಹಿಂ ಪಕ್ಷ ಬಿಡುವ ವಿಚಾರವಾಗಿ ಮಾತನಾಡಿದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಜನ ಬಹಳ ಪ್ರಬುದ್ಧರಿದ್ದಾರೆ. ಮುಸ್ಲಿಂ ಸಮುದಾಯ ನಮ್ಮ ಜತೆಗಿದೆ. 2018 ರಲ್ಲೂ ನಮ್ಮ ಜತೆ ಇತ್ತು. ಈಗಲೂ ಅವರು ನಮ್ಮ ಜತೆಗೇ ಇದ್ದಾರೆ. ಯು ಟಿ ಖಾದರ್, ನಸೀರ್ ಅಹಮದ್ ಸೇರಿದಂತೆ ಹಲವರಿಗೆ ಸ್ಥಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಹಲವು ಸ್ಥಾನಮಾನ ಕೊಟ್ಟಿದೆ. ಸಿ.ಎಂ ಇಬ್ರಾಹಿಂ ವಿಚಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ, ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ನಿರ್ಧಾರವನ್ನು ಪ್ರಶ್ನಿಸುವ ಮಟ್ಟದ ನಾಯಕ ನಾನಲ್ಲ. ನಾನು ಚಿಕ್ಕ ವ್ಯಕ್ತಿ ಎಂದು ಸಿದ್ದರಾಮಯ್ಯ ಹೇಳಿದ್ರು.

ಸಿ.ಎಂ. ಇಬ್ರಾಹಿಂ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸ್ತಿದೆ. ನಮ್ಮ ಹೋರಾಟ ಅಧಿಕಾರಕ್ಕಲ್ಲ. ಸೈದ್ಧಾಂತಿಕ ಹೋರಾಟ. ಇಂತಹ ಸಂದರ್ಭದಲ್ಲಿ ಅಧಿಕಾರ ಸಿಗುವುದು ವಿಳಂಬವಾಗಬಹುದು. ಸಿ.ಎಂ. ಇಬ್ರಾಹಿಂ ಆತುರ ಪಡಬಾರದು. ಅವರು ಈಗ ನೋವಿನಲ್ಲಿದ್ದಾರೆ. ಹೀಗಾಗಿ ಪಕ್ಷ ಬಿಡುವ ಬಗ್ಗೆ ಮಾತಾಡಿದ್ದಾರೆ. ಇಬ್ರಾಹಿಂ ಮಾತಿನ ಮಲ್ಲ. ಅವರ ಮಾತು ಕೇಳಲು ನಮಗೂ ಖುಷಿಯಾಗುತ್ತೆ. ಆದರೆ, ಪಕ್ಷದ ವಿರುದ್ಧ ಈ ರೀತಿ ಮಾತನಾಡೋದು ಸರಿಯಲ್ಲ. ಅವರ ಮನೆಗೆ ಹೋಗಿ ಭೇಟಿ ಮಾಡ್ತೇನೆ ಎಂದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕರಾಗಿ ನೇಮಕವಾಗಿರುವ ಪ್ರಕಾಶ್ ರಾಥೋಡ್ ಅವರನ್ನು ಸಿದ್ದರಾಮಯ್ಯ ಅವರು ಅಭಿನಂದಿಸಿದರು. ಮಾಜಿ ಶಾಸಕರಾದ, ಅಶೋಕ್ ಪಟ್ಟಣ್ ಶ್ರೀನಿವಾಸ್, ಅಪ್ಪಾಜಿ ನಾಡಗೌಡ, ವಿಜಯಸಿಂಗ್ ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.