ಬೆಂಗಳೂರು: ಬಿಜೆಪಿಯಲ್ಲಿ 75 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಟಿಕೆಟ್ ಇಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ನಾನು ಇನ್ನೂ ಹೊಸ ಮದುವೆ ಗಂಡು ತರ ಇದ್ದೇನೆ. ನನಗೆ ವಯಸ್ಸಾಗಿದೆ ಅಂತಾ ಹೇಳಿದವರು ಯಾರು?. ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಗುರುಮಿಟ್ಕಲ್ ಕ್ಷೇತ್ರದಿಂದ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ.
ವಿಧಾನಪರಿಷತ್ ಉಪಚುನಾವಣೆಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ನಂತರ ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಗುರುಮಿಟ್ಕಲ್‌ಗೆ ನಾನೇ ಅಭ್ಯರ್ಥಿ. 45 ಸಾವಿರ ಮತಗಳಿಂದ ಗೆಲ್ಲುತ್ತೇನೆ. 50 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ, ನನ್ನನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿದೆ ಎಂದರು.
ಮಾಲಿಕಯ್ಯ ಗುತ್ತೆದಾರ್, ನಾನು ಇಬ್ಬರು ಜೋಡೆತ್ತುಗಳು ಇದ್ದಂತೆ. ಅವರನ್ನು ಯಾರು ಸೈಡ್ಲೈನ್ ಮಾಡಿದ್ದಾರೆ. ಕಾಂಗ್ರೆಸ್‌ನವರದ್ದು ಬರೀ ಬೊಗಳೋದು ಅಷ್ಟೇ ಕೆಲಸ. ಅವರಿಗೆ ಬೇರೆ ಇನ್ನೇನು ಇದೆ ಎಂದು ಗರಂ ಆದರು.
ಹೈದ್ರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಸ್ಟ್ರಾಂಗ್ ಇದೆ. ಇದನ್ನು ಗುರುತಿಸಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಲ್.ಸಂತೋಷ್, ಜೆ.ಪಿ.ನಡ್ಡಾ, ಮಾಜಿ ಸಿಎಂ ಯಡಿಯೂರಪ್ಪ ಎಲ್ಲರೂ ಸೇರಿ ನನ್ನನ್ನು ಅಭ್ಯರ್ಥಿ ಮಾಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಕೋಲಿ ಸಮಾಜದ ಶಕ್ತಿ ಇದೆ. ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ.
ಮುಂದಿನ ದಿನದಲ್ಲಿ ಬಿಜೆಪಿ ಹೈದ್ರಾಬಾದ್ ಕರ್ನಾಟಕಲ್ಲಿ ಸ್ಟ್ರಾಂಗ್ ಆಗಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಯಾರೂ ಮಣಿಸಲು ಆಗಲ್ಲ. ಮುಂಬರುವ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಇದನ್ನೂ ಓದಿ: ಸರಣಿ ಹತ್ಯೆ; ಸಂಘಟನೆಗಳ ಪಾತ್ರವಿದ್ದರೆ ಚಾರ್ಜ್ ಶೀಟ್ನಲ್ಲಿ ಅದನ್ನೂ ದಾಖಲಿಸುತ್ತೇವೆ: ಡಿಜಿಪಿ ಸೂದ್