ETV Bharat / state

ಬಿಜೆಪಿ ಬಿಡುವ ಸ್ಥಿತಿ ಬಂದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಕಾಂಗ್ರೆಸ್ ಸೇರಲ್ಲ: ಬೈರತಿ ಬಸವರಾಜ್ - ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ

ಒಂದು ವೇಳೆ ಬಿಜೆಪಿ ತೊರೆಯುವ ಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಕಾಂಗ್ರೆಸ್ ಪಕ್ಷ ಸೇರಲ್ಲ ಎಂದು ಮಾಜಿ ಚಿವ ಬೈರತಿ ಬಸವರಾಜ್ ಹೇಳಿದ್ದಾರೆ.

Former minister Bairati Basavaraj  I will not leave the BJP party  Bairati Basavaraj news  ಬಿಜೆಪಿ ಬಿಡುವ ಸ್ಥಿತಿ ಬಂದಲ್ಲಿ ರಾಜಕೀಯ ನಿವೃತ್ತಿ  ನಿವೃತ್ತಿ ಪಡೆಯುತ್ತೇನೆಯೇ ಹೊರತು ಕಾಂಗ್ರೆಸ್ ಸೇರಲ್ಲ  ಬಿಜೆಪಿ ಬಿಡುವ ಸ್ಥಿತಿ ಬಂದ್ರೆ  ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ  ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ
ಬಿಜೆಪಿ ಬಿಡುವ ಸ್ಥಿತಿ ಬಂದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಕಾಂಗ್ರೆಸ್ ಸೇರಲ್ಲ
author img

By ETV Bharat Karnataka Team

Published : Aug 25, 2023, 7:54 AM IST

ಬೆಂಗಳೂರು: ಬಿಜೆಪಿ ಬಿಡುವ ಸ್ಥಿತಿ ಬಂದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಮರಳಿ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಶಾಸಕ ಬೈರತಿ ಬಸವರಾಜ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟು ಹೋಗಲ್ಲ. ಯಾರೋ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಯಾವ ಕಾರಣಕ್ಕೂ ನಾನು ಪಕ್ಷ ಬಿಡಲ್ಲ. ಪಕ್ಷ ಬಿಡುವ ಸಂದರ್ಭ ಬಂದರೆ ನಾನು ನಿವೃತ್ತಿ ಆಗಿ ಮನೆಯಲ್ಲಿ‌ ಇರುತ್ತೇನೆಯೇ ಹೊರತು ಕಾಂಗ್ರೆಸ್ ಪಕ್ಷ ಸೇರಲ್ಲ. ನನಗೆ ಕಾಂಗ್ರೆಸ್​ನಿಂದ ಯಾವುದೇ ಆಹ್ವಾನ ಬಂದಿಲ್ಲ. ನನ್ನನ್ನು ಆ ಪಕ್ಷದಿಂದ ಯಾರೂ ಸಂಪರ್ಕಿಸಿಲ್ಲ. ನಾನೂ ಸಹ ಆ ಪಕ್ಷವನ್ನು ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ, ಮಾನ, ಗೌರವ ಎಲ್ಲವೂ ಸಿಕ್ಕಿದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ನಾನು ಬಿಜೆಪಿ ಕಾರ್ಯಕರ್ತನಾಗಿ ಇರುತ್ತೇನೆ. ಎಸ್​ಟಿ ಸೋಮಶೇಖರ್ ಅವರೂ ಪಕ್ಷ ಬಿಡಲ್ಲ ಅಂದಿದ್ದಾರೆ. ನಾನೂ ಕೂಡಾ ಸೋಮಶೇಖರ್ ಜತೆ ಮಾತಾಡಿದ್ದೇನೆ. ನಮ್ಮೆಲ್ಲರ ವಿಚಾರದಲ್ಲಿ ಗೊಂದಲ ಸೃಷ್ಟಿ ಆಗಿದೆ. ಈ ಗೊಂದಲ ಬಗೆಹರಿಯುವ ಕೆಲಸ ಆಗಬೇಕಿದೆ ಎಂದರು. ಇದಕ್ಕೆ ದನಿಗೂಡಿಸಿದ ಮಾಜಿ ಡಿಸಿಎಂ ಆರ್ ಅಶೋಕ್, ಬಹಳ ಜನ ನಮ್ಮ ಪಕ್ಷ ಬಿಟ್ಟು ಹೋಗುತ್ತಾರೆ ಅಂತ ವದಂತಿ ಹಬ್ಬಿಸಿದ್ದಾರೆ. ಬೈರತಿ ಬಸವರಾಜ್ ಸಹ ಹೋಗುತ್ತಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬೈರತಿ ಬಸವರಾಜ್ ಅವರು ಬಿಜೆಪಿ ಬಿಟ್ಟು ಹೋಗಲ್ಲ. ಅಷ್ಟೇ ಅಲ್ಲ ಸೋಮಶೇಖರ್ ಸಹ ಹೋಗಲ್ಲ ಎಂದು ಹೇಳಿದರು.

ಓದಿ: ಬಿಜೆಪಿಯಲ್ಲಿ ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ: ಮಾಜಿ ಸಚಿವ ಎಸ್.ಟಿ. ಸೋಮಶೇಖರ್

ಲೋಕಸಭೆ ಚುನಾವಣೆಗೆ ಟಿಕೆಟ್: ಕಾಂಗ್ರೆಸ್​ನವರು ನಮ್ಮ ಪಕ್ಷಕ್ಕೆ ಬನ್ನಿ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡುತ್ತೇವೆ ಅಂತ ಹೇಳಿರೋದಾಗಿ ನನ್ನ ಮುಂದೆ ಸೋಮಶೇಖರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್​ನವರು ಆಹ್ವಾನ ಮಾಡಿದ್ದು ನಿಜ‌ ಅಂತ ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಲೋಕಸಭೆ ಅಭ್ಯರ್ಥಿ ಆಗಲ್ಲ ಅಂತ ಸೋಮಶೇಖರ್ ಹೇಳಿದ್ದಾರೆ. ಕ್ಷೇತ್ರದ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಯಾರ್ಯಾರಿಂದ ಸಮಸ್ಯೆ ಆಗುತ್ತಿದೆ ಅಂತಲೂ ತಿಳಿಸಿದ್ದಾರೆ ಎಂದು ಅಶೋಕ್​ ಹೇಳಿದ್ದಾರೆ.

ಸೋಮಶೇಖರ್​ ಅವರು ಐದಾರು ಜನರ ಹೆಸರು ಹೇಳಿದ್ದಾರೆ. ಅವರ ಜತೆ ಸಮಗ್ರವಾಗಿ ಚರ್ಚೆ ಮಾಡಿದ್ದೇನೆ. ನನಗೆ ಗೊತ್ತಿರುವಂತೆ ಅವರು ಕಾಂಗ್ರೆಸ್​ಗೆ ಹೋಗಲ್ಲ. ಅವರ ಕ್ಷೇತ್ರದಲ್ಲಿ ಅವರ ವಿರುದ್ಧ ಕೆಲವರು ಅಪಪ್ರಚಾರ ನಡೆಸ್ತಿದಾರೆ ಅಂತ ಹೇಳಿದರು. ಅದೆಲ್ಲವನ್ನು ಪರಿಹರಿಸುವ ಭರವಸೆ ನೀಡಿ, ನಾನು ಅವರಿಗೆ ಪಕ್ಷದ ಮುಖಂಡನಾಗಿಯೂ, ಸ್ನೇಹಿತನಾಗಿಯೂ ಮಾತಾಡಿದ್ದೇನೆ. ಕಾಂಗ್ರೆಸ್​ಗೆ ಹೋಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಹೇಳಿದ್ದೇನೆ. ಅವರು ಪಕ್ಷ ಬಿಡಲ್ಲ ಎಂದಿದ್ದಾರೆ ಎಂದು ಅಶೋಕ್​ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.