ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಗೆ ನನ್ನ ಸಂಪೂರ್ಣ ಬೆಂಬಲವಿದೆ, ಯಾವುದೇ ಧರ್ಮದವರಿಗೆ ಅನ್ಯಾಯ ಮಾಡುವ ಕ್ರಮ ಈ ಕಾಯ್ದೆಯದ್ದಲ್ಲ. ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಕ್ರೈಸ್ತ ಮತ್ತು ಪಾರ್ಸಿಗಳಿಗೆ ಪೌರತ್ವ ಕೊಡೋದು ಸರಿಯಾದ ಕ್ರಮ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಹೇಳಿದ್ದಾರೆ.
ನಗರದ ಟೌನ್ ಹಾಲ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಂಗಳೂರು ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕೆಲವರು ತಿಳಿಯದೇ ಬೀದಿಗಿಳಿದಿದ್ದಾರೆ. ಎಲ್ಲೂ ಕೂಡ ಹಿಂಸಾತ್ಮಕವಾಗಿ ಹೋರಾಟ ಮಾಡಬಾರದು ಎಂದು ಚಿ. ಮೂ ಸಲಹೆ ನೀಡಿದ್ರು.
ಹಾಗೆಯೇ ಮಂಗಳೂರಿನಲ್ಲಿ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಮಾಡಿದ್ದು ಕೂಡ ತಪ್ಪು. ಪ್ರತಿಭಟನೆ ಮಾಡುವುದೇ ಆದಲ್ಲಿ ಹಿಂಸಾತ್ಮಕ ನಡೆ ಸಲ್ಲದು. ಅಹಿಂಸಾತ್ಮಕ ಹೋರಾಟ ಮಾಡಲಿ ಎಂದರು.