ಬೆಂಗಳೂರು: ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೆ. ಈಗಲೂ, ಮುಂದೆಯೂ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಶಾಸಕ ಉಮೇಶ್ ಕತ್ತಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಎಂಟು ಸಲ ಶಾಸಕನಾಗಿದ್ದೇನೆ. ಕಳೆದ ಮೂರು ನಾಲ್ಕು ತಿಂಗಳಿಂದ ನನಗೆ ಅಧಿಕಾರ ಕೊಟ್ಟಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಮಂತ್ರಿಯಾಗಲೀ ಆಗದಿರಲಿ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನನಗೆ ಡಿಸಿಎಂ ಹುದ್ದೆ ಬೇಕಾಗಿಲ್ಲ. ಕೊಟ್ಟರೆ ಮಂತ್ರಿ ಸ್ಥಾನ ಕೊಡಲಿ ಡಿಸಿಎಂ ಬೇಡ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ಆದರೆ ಮಂತ್ರಿ ಆಗುತ್ತೇನೆ ಇಲ್ಲ, ಸಿಎಂ ಸ್ಥಾನ ಕೊಟ್ರೂ ಆಗುತ್ತೇನೆ. ಡಿಸಿಎಂ ಹುದ್ದೆ ನನಗೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.