ETV Bharat / state

ಎಲ್ಲರಂತೆ ನನಗೂ ಪುತ್ರನ ರಾಜಕೀಯ ಭವಿಷ್ಯ ರೂಪಿಸುವ ಆಸೆಯಿತ್ತು: ವಿ ಸೋಮಣ್ಣ - karnataka next CM

ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಈಗಾಗಲೇ 72 ವರ್ಷ ವಯಸ್ಸಾಗಿದೆ. ಸಿದ್ದರಾಮಯ್ಯ ರೀತಿ ಇದೇ ನನ್ನ ಕಡೆ ಚುನಾವಣೆ ಎಂದು ಹೇಳಿಕೊಂಡು ತಿರುಗುವುದಿಲ್ಲ ವಿ ಸೋಮಣ್ಣ ಹೇಳಿದ್ರು.

i-wanted-to-shape-my-sons-political-future-v-somanna
ಎಲ್ಲರಂತೆ ನನಗೂ ಪುತ್ರನ ರಾಜಕೀಯ ಭವಿಷ್ಯ ರೂಪಿಸುವ ಆಸೆಯಿತ್ತು: ವಿ.ಸೋಮಣ್ಣ
author img

By

Published : May 14, 2023, 4:23 PM IST

ಬೆಂಗಳೂರು: ಎಲ್ಲರಂತೆ ನನಗೂ ಪುತ್ರನ ರಾಜಕೀಯ ಭವಿಷ್ಯ ರೂಪಿಸಬೇಕು ಎನ್ನುವ ಆಸೆ ಇತ್ತು, ಆದರೆ ಈ ಬಾರಿ ಅವಕಾಶ ಸಿಗಲಿಲ್ಲ, ಮಗನ ರಾಜಕೀಯ ಭವಿಷ್ಯ ಮುಂದೆ ನೋಡಬೇಕು, ಪಕ್ಷ ಏನು ತೀರ್ಮಾನಿಸಲಿದೆ ಎನ್ನುವುದನ್ನು ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ವಿಜಯನಗರ ನಿವಾಸದಲ್ಲಿ ಮಾತನಾಡಿದ ಅವರು, ಮಗನನ್ನು ರಾಜಕೀಯಕ್ಕೆ ತರಬೇಕು ಎಂದು ನಮಗೂ ಆಸೆ ಇತ್ತು. ಅದಕ್ಕಾಗಿಯೇ ಈ ಬಾರಿ ನನಗೆ ಟಿಕೆಟ್ ಬೇಡ ನನ್ನ ಬದಲು ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಆದರೆ, ದೊಡ್ಡ ದೊಡ್ಡವರೆಲ್ಲಾ ಸೇರಿ ನನಗೇ 2 ಕಡೆ ಟಿಕೆಟ್ ಕೊಟ್ಟರು. ಈಗ ಅದಕ್ಕೆಲ್ಲಾ ಉಪ್ಪು ಖಾರ ಹಾಕಿ ಹೇಳಲ್ಲ. ನನ್ನ ಮಗ ವೈದ್ಯ, ಎಂತೆಂಥವರೋ ರಾಜಕೀಯ ಪ್ರವೇಶ ಮಾಡಿ ಏನೆಲ್ಲಾ ಆಗಿದ್ದಾರೆ. ಆದರೆ ನಮಗೆ ಯಾಕೆ ಹೀಗಾಯಿತೋ ಗೊತ್ತಿಲ್ಲ, ಎಲ್ಲ ಹಣೆ ಬರಹ. ಪುತ್ರ ಅರುಣ್ ರಾಜಕೀಯ ಭವಿಷ್ಯ ಮುಂದೆ ನೋಡೋಣ, ಪಕ್ಷ ಏನು ತೀರ್ಮಾನ ಮಾಡಲಿದೆ ಎಂದು ಕಾದು ನೋಡುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸಾಕಷ್ಟು ಬಾರಿ ಶಾಸಕ ಆಗಿದ್ದೇನೆ, ಗೋವಿಂದರಾಜನಗರದಲ್ಲಿ ಚುನಾವಣೆಗೆ ನಿಂತಿದ್ದರೆ ಗೆಲ್ಲುತ್ತಿದ್ದೆ ಎನ್ನುವುದು ಎಲ್ಲರಿಗೂ ಗೊತ್ತು, ನನ್ನ ಕೆಲಸ, ಅಭಿವೃದ್ಧಿಯನ್ನು ನೋಡಿಯೇ ಜನತೆ ಗೋವಿಂದರಾಜನಗರದಲ್ಲಿ ನಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಈ ಕ್ಷೇತ್ರ ಈ ಬಾರಿ ನಮ್ಮ ಕೈತಪ್ಪಿದೆ. ಆದರೆ ಅದು ಶಾಶ್ವತ ಅಲ್ಲ, ಮತ್ತೆ ಚುನಾವಣೆಗೆ ಬೇಕಾದಷ್ಟು ಸಮಯ ಇದೆ. ಗೋವಿಂದರಾಜನಗರ ಕ್ಷೇತ್ರ ಮತ್ತೆ ನಮ್ಮ ಕುಟುಂಬಕ್ಕೆ ಸಿಗಲಿದೆ ಎಂದು ಪುತ್ರನ ರಾಜಕೀಯ ಪ್ರವೇಶ ಇಲ್ಲಿಂದಲೇ ಮಾಡಿಸುವ ಕುರಿತು ಪರೋಕ್ಷವಾಗಿ ಸೋಮಣ್ಣ ಸುಳಿವು ನೀಡಿದರು.

ಲೋಕಸಭೆಗೆ ಸ್ಪರ್ಧಿಸುವುದಿಲ್ಲ: ಜಿಲ್ಲಾ ಉಸ್ತುವಾರಿಯಾಗಿದ್ದ ಚಾಮರಾಜನಗರದಲ್ಲಿಯೂ ಸೋತಿದ್ದೇನೆ, ಆದರೆ ಜಿಲ್ಲೆಯ ಜೊತೆಗಿನ ನಂಟು ಕಳೆದುಕೊಳ್ಳುವುದಿಲ್ಲ. ಮಲೆ ಮಹಾದೇಶ್ವರ ನನ್ನ ಮನೆ ದೇವರು, ನಮ್ಮ ತಲೆಮಾರು ಇರುವವರೆಗೂ ಮಾದಪ್ಪನ ಸೇವೆ ಮಾಡುತ್ತೇವೆ. ಚಾಮರಾಜನಗರ ಮರೆಯುವ ಪ್ರಶ್ನೆಯೇ ಇಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ, ಆ ಅವಕಾಶ ನನಗೆ ಬೇಡ, ನನಗೆ ಈಗಾಗಲೇ 72 ವರ್ಷ ವಯಸ್ಸಾಗಿದೆ ಎಂದರು.

ಸಿದ್ದರಾಮಯ್ಯ ಅವರ ರೀತಿ ಇದೇ ನನ್ನ ಕಡೆಯ ಚುನಾವಣೆ ಎಂದು ಹೇಳಿಕೊಂಡು ತಿರುಗುವುದಿಲ್ಲ. ಈ ರಾಜ್ಯದ ರಾಜಕಾರಣದಲ್ಲಿ ಎಂತೆಂಥ ಪುಣ್ಯಾತ್ಮರು ಬಂದು ಹೋಗಿದ್ದಾರೆ ನಾನು ಯಾವ ಲೆಕ್ಕ. ನಾನು ಎಲ್ಲವನ್ನೂ ಅನುಭವಿಸಿದ್ದೇನೆ. ಈ ಸೋಲು ಆಗಬಾರದಿತ್ತು. ಆದರೆ ಆಗಿದೆ, ಇದನ್ನು ಸ್ವೀಕಾರ ಮಾಡಬೇಕು ಅಷ್ಟೇ. ಕೇವಲ ಕೆಲಸದಿಂದಲೇ ಜನ ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕಿಂತ ಕೆಲಸಗಾರನನ್ನ ನಿರುದ್ಯೋಗಿ ಮಾಡಿದ್ದಾರೆ.

ಕೆಲಸವಿಲ್ಲ ನಿರುದ್ಯೋಗಿಯಾಗಿದ್ದೇನೆ: ಕಳೆದ ಐದು ದಶಕ ರಾಜಕಾರಣದಲ್ಲಿದ್ದು ಪ್ರತಿದಿನ ಬೆಳಗ್ಗೆಯಿಂದಲೇ ಕೆಲಸ ಶುರು ಮಾಡುತ್ತಿದ್ದೆ. ಈಗ ಕೆಲಸವೇ ಇಲ್ಲ. ಇಂದು ಬೆಳಗ್ಗೆ 4 ಗಂಟೆಗೆ ಎದ್ದು ಏನು ಮಾಡುವುದು ಅನ್ನೋದು ತೋಚದೆ ಸುಮ್ಮನೆ ಮನೆಯಲ್ಲೇ ಸುತ್ತಾಡುತ್ತಿದ್ದೆ. ಮುಂಜಾನೆಯಿಂದಲೇ ಕೆಲಸ ಆರಂಭಿಸುವ ರೂಢಿಯಾಗಿಬಿಟ್ಟಿದೆ. ಈಗ ನಿರುದ್ಯೋಗಿ ಎಂದು ತಮ್ಮ ದಿನಚರಿಯನ್ನು ವಿವರಿಸುತ್ತಾ ಸೋಲಿಗೆ ಪರೋಕ್ಷವಾಗಿ ಅತೀವ ನಿರಾಸೆ ವ್ಯಕ್ತಪಡಿಸಿದರು.

ನಾನು ಹೈಕಮಾಂಡ್ ನಾಯಕರಿಗೆ ಏನನ್ನೂ ಕೇಳಲ್ಲ. ನನಗೆ ಎರಡು ಮೂರು ಲಕ್ಷ ಆದಾಯ ಬರುವಷ್ಟು ಸಂಪಾದನೆ ಮಾಡಿಕೊಳ್ಳುವ ಶಕ್ತಿ ಇದೆ. ಚುನಾವಣೆ ವೇಳೆ ಯಾರೋ ಬರುತ್ತಾರೆ ಸಹಾಯ ಮಾಡುತ್ತಾರೆ ಹೋಗುತ್ತಾರೆ ಅಷ್ಟೆ. ನಾನು ಹೈಕಮಾಂಡ್ ಮುಂದೆ ಏನೂ ಕೇಳಲ್ಲ. ಒಳ್ಳೆಯವರನ್ನು ಗುರುತಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಸೋಮಣ್ಣ ಪ್ರಸ್ತುತ ಸನ್ನಿವೇಶಕ್ಕೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಶಾಸಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.