ETV Bharat / state

ಖರ್ಗೆ, ದೇವೇಗೌಡರು ಸೋತಿರೋದು ನೋವು ತಂದಿದೆ: ಡಿಕೆಶಿ

ಮಾಧ್ಯಮಗಳೊಂದಿಗೆ ಮಾತನಾಡಿದ ಬಳಿಕ, ತಮ್ಮ ನಿವಾಸದಿಂದ ತೆರಳಿದ ಅವರು ಸಿಎಂ ಭೇಟಿಯಾಗಿ ಸಮಾಲೋಚಿಸಲಿದ್ದಾರೆ. ಸಿಎಂ ಕುಮಾರಸ್ವಾಮಿ ಸದ್ಯ ಗೃಹ ಕಚೇರಿ ಕೃಷ್ಣದಲ್ಲಿದ್ದಾರೆ. ಅಲ್ಲಿಗೆ ಡಿಕೆಶಿ ತೆರಳಿದ್ದಾರೆ.

ಡಿಕೆಶಿ
author img

By

Published : May 28, 2019, 2:10 PM IST

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ನನಗೆ ದಿಗ್ಭ್ರಮೆ ಮತ್ತು ಆಶ್ಚರ್ಯ ತಂದಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ಈ ಫಲಿತಾಂಶ ನನಗೆ ನಂಬಲು ಸಾಧ್ಯ ಆಗ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯರು ಸೋತಿರೋದು ನೋವು ತಂದಿದೆ. ನನಗೆ ನಾನೇ ನಂಬಲು ಸಾಧ್ಯ ಆಗ್ತಿಲ್ಲ ಎಂದರು.

ದೇವೇಗೌಡ್ರು, ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟ ಚರಿತ್ರೆಯಲ್ಲಿದೆ. ಸಹೋದರ ಒಬ್ಬನೇ ಗೆದ್ದಿರೋದು ನನಗೆ ಖುಷಿಯಾಗಿಲ್ಲ. ಆಪರೇಷನ್ ಕಮಲ ವಿಚಾರದ ಬಗ್ಗೆ ಮಾತನಾಡಿ, ನಾನು ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ಅಲ್ಲದೆ, ಯಾವ ನಾಯಕರೂ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಬಾರದು ಎಂದು ಪಕ್ಷ ತಿಳಿಸಿದೆ. ಹೀಗಾಗಿ ನಾನು ಯಾವ ವಿಚಾರಗಳ ಬಗ್ಗೆ ಮಾತನಾಡಲ್ಲ ಎಂದರು.

ಡಿ.ಕೆ.ಶಿವಕುಮಾರ್ ಆಶೀರ್ವಾದ ಪಡೆದ ಕುಸುಮಾವತಿ ಶಿವಳ್ಳಿ

ಜಿಂದಾಲ್ ವಿಚಾರ ಸಮರ್ಥನೆ:
ಸಾಕಷ್ಟು ಆಕ್ಷೇಪಗಳ ನಡುವೆಯೇ ಜಿಂದಾಲ್ ಜಮೀನು ನಿರ್ಣಯ ಸಮರ್ಥಿಸಿಕೊಂಡ ಡಿಕೆಶಿ, ಜಿಂದಾಲ್​ಗೆ ಸಾವಿರಾರು ಎಕರೆ ಜಮೀನು ನೀಡೋ ನಿರ್ಣಯ ಸರಿ. ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಸೃಷ್ಟಿ ವಿಚಾರದಲ್ಲಿ ಇಂತಹ ನಿರ್ಣಯಗಳು ಬೇಕಾಗುತ್ತೆ. ಇನ್ಫೋಸಿಸ್​ಗೆ ಮೈಸೂರಲ್ಲಿ ಜಮೀನು ನೀಡಿದಾಗಲೂ ಆಕ್ಷೇಪ ವ್ಯಕ್ತವಾಗಿತ್ತು. ಆದ್ರೆ, ಇದೀಗ ಆ ಸಂಸ್ಥೆಯಿಂದ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಒಮ್ಮೊಮ್ಮೆ ಒಂದೊಂದು ಸಾರಿ ಕೆಲ ನಿರ್ಣಯಗಳನ್ನ ಮಾಡಬೇಕಾಗುತ್ತೆ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಳಿಕ, ತಮ್ಮ ನಿವಾಸದಿಂದ ತೆರಳಿದ ಅವರು ಸಿಎಂರನ್ನು ಭೇಟಿಯಾಗಿ ಸಮಾಲೋಚಿಸಲಿದ್ದಾರೆ. ಸಿಎಂ ಕುಮಾರಸ್ವಾಮಿ ಸದ್ಯ ಗೃಹ ಕಚೇರಿ ಕೃಷ್ಣದಲ್ಲಿದ್ದಾರೆ. ಅಲ್ಲಿಗೆ ಡಿಕೆಶಿ ತೆರಳಿದ್ದಾರೆ.

ಕುಸುಮಾವತಿ ಎಸ್ ಶಿವಳ್ಳಿಗೆ ಅಭಿನಂದನೆ:
ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭೆ ಕ್ಷೇತ್ರ ಮರುಚುನಾವಣೆಯಲ್ಲಿ ವಿಜೇತರಾದ ಕುಸುಮಾವತಿ ಎಸ್ ಶಿವಳ್ಳಿ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿ,ಆಶೀರ್ವಾದ ಪಡೆದರು.

Intro:newsBody:ಲೋಕಸಭೆ ಚುನಾವಣೆ ಫಲಿತಾಂಶ
ನನಗೆ ದಿಗ್ಭಮೆ, ಆರ್ಶ್ಚಯ ತಂದಿದೆ: ಡಿಕೆಶಿ

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ
ನನಗೆ ದಿಗ್ಭಮೆ, ಆರ್ಶ್ಚಯ ತಂದಿದೆ ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ಈ ಫಲಿತಾಂಶ ನನಗೆ ನಂಬಲು ಸಾಧ್ಯ ಆಗ್ತಿಲ್ಲ. , ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯರು ಸೋತಿರೋದು ಶಾಕ್ ತಂದಿದೆ. ನನಗೆ ನಾನೇ ನಂಬಲು ಸಾಧ್ಯ ಆಗ್ತಿಲ್ಲ ಎಂದರು.
ದೇವೇಗೌಡ್ರು, ಮಲ್ಲಿಕಾರ್ಜುನ ಖರ್ಗೆ ಅವ್ರ
ಹೋರಾಟ ಚರಿತ್ರೆಯಲ್ಲಿದೆ. ಸಹೋದರ ಒಬ್ಬನೇ ಗೆದ್ದಿರೋದು ನನಗೆ ಖುಷಿಯಾಗಿಲ್ಲ.
ಆಪರೇಷನ್ ಕಮಲ ವಿಚಾರ ಮಾತನಾಡಿ, ಯಡಿಯೂರಪ್ಪ ಮಾಡಲಿ, ಅವರಿಗೆ ಎಲ್ಲವೂ ಗೊತ್ತಿದೆ. ನಾನು ಮಾಧ್ಯಮಗಳಿಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ಯಾವ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಬಾರದು ಎಂದು ಹೇಳಿದ್ದಾರೆ. ಯಾವ ವಿಚಾರಗಳ ಬಗ್ಗೆ ನಾನು ಮಾತನಾಡಲ್ಲ. ನನ್ನ ಬಾಯಿಗೆ ಬೀಗ ಹಾಕಲು ಹೇಳಿದೆ. ನಾನೇನೂ ಮಾತಾಡಲ್ಲ ಎಂದರು.
ಜಿಂದಾಲ್ ವಿಚಾರ ಸಮರ್ಥನೆ
ಸಾಕಷ್ಟು ಆಕ್ಷೇಪಗಳ ನಡುವೆಯೇ ಜಿಂದಾಲ್ ಜಮೀನು ನಿರ್ಣಯ ಸಮರ್ಥಿಸಿಕೊಂಡ ಡಿಕೆಶಿ, ಜಿಂದಾಲ್ ಗೆ ಸಾವಿರಾರು ಎಕರೆ ಜಮೀನು ನೀಡೋ ನಿರ್ಣಯ ಸರಿ. ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಸೃಷ್ಟಿ ವಿಚಾರದಲ್ಲಿ ಇಂತಹ ನಿರ್ಣಯಗಳು ಬೇಕಾಗುತ್ತೆ. ಇನ್ಫೋಸಿಸ್ ಗೆ ಮೈಸೂರಲ್ಲಿ ಜಮೀನು ನೀಡಿದಾಗಲೂ ಆಕ್ಷೇಪ ವ್ಯಕ್ತವಾಗಿತ್ತು. ಆದ್ರೆ ಇದೀಗ ಆ ಸಂಸ್ಥೆಯಿಂದ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಒಮ್ಮೊಮ್ಮೆ ಒಂದೊಂದು ಸಾರಿ ಕೆಲ ನಿರ್ಣಯಗಳನ್ನ ಮಾಡಬೇಕಾಗುತ್ತೆ. ನಾನು ಬಳ್ಳಾರಿ ಉಸ್ತುವಾರಿಯಾಗಿ ಈ ಬಗ್ಗೆ ಮಾತಾಡಲೇ ಬೇಕು ಎಂದರು.
ಮಾಧ್ಯಮಗಳಿಗೆ ಮಾತನಾಡಿದ ಬಳಿಕ ನಿವಾಸದಿಂದ ತೆರಳಿದರು. ಸಿಎಂ ಭೇಟಿಯಾಗಿ ಸಮಾಲೋಚಿಸಲಿದ್ದಾರೆ. ಸಿಎಂ ಕುಮಾರಸ್ವಾಮಿ ಸದ್ಯ ಗೃಹ ಕಚೇರಿ ಕೃಷ್ಣದಲ್ಲಿದ್ದಾರೆ. ಅಲ್ಲಿಗೆ ಡಿಕೆಶಿ ತೆರಳಿದ್ದಾರೆ.
ಅಭಿನಂದನೆ
ಕುಂದಗೋಳ ವಿಧಾನಸಭೆ ಕ್ಷೇತ್ರದ ಇತ್ತೀಚೆಗೆ ನಡೆದ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭೆ ಕ್ಷೇತ್ರ ಮರುಚುನಾವಣೆಯಲ್ಲಿ ವಿಜೇತರಾದ ಕುಸುಮಾವತಿ ಎಸ್ ಶಿವಳ್ಳಿ ಅವರು ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಚುನಾವಣೆ ಉಸ್ತುವಾರಿ ಹೊತ್ತಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿ, ಆಶೀರ್ವಾದ ಪಡೆದರು.
ನಾಗೇಶ್ ಭೇಟಿ
ಮುಳಬಾಗಿಲು ಶಾಸಕ ಎಚ್. ನಾಗೇಶ್ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ತಮ್ಮ ಬೆಂಬಲ ಅಚಲ ಎಂದು ತಿಳಿಸಿದರು.
Conclusion:news

For All Latest Updates

TAGGED:

dks talk
ETV Bharat Logo

Copyright © 2024 Ushodaya Enterprises Pvt. Ltd., All Rights Reserved.