ETV Bharat / state

ನನಗೆ ಬಟರ್ ಚಿಕನ್ ಅಂದರೆ ಇಷ್ಟ.. ಸಮತೋಲಿತ ಆರೋಗ್ಯಕ್ಕಾಗಿ ಶಾಖಾಹಾರಕ್ಕೆ ಆದ್ಯತೆ: ಎಂ.ಎಸ್.ಧೋನಿ - ಈಟಿವಿ ಭಾರತ ಕನ್ನಡ ನ್ಯೂಸ್​​​

ಮನುಷ್ಯನ ಸುಸ್ಥಿರ ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಹಾಗೂ ಸಮತೋಲಿತ ಆಹಾರ ಅಗತ್ಯ. ನಾನು ಮಾಂಸಹಾರಿಯಾದರೂ ಸಸ್ಯಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಹೇಳಿದ್ದಾರೆ.

i-prefer-vegetarian-diet-for-balanced-health-ms-dhoni
ನನಗೆ ಬಟರ್ ಚಿಕನ್ ಅಂದರೆ ಇಷ್ಟ.. ಸಮತೋಲಿತ ಆರೋಗಕ್ಕಾಗಿ ಶಾಖಾಹಾರಕ್ಕೆ ಆದ್ಯತೆ: ಎಂ.ಎಸ್.ಧೋನಿ
author img

By

Published : Oct 11, 2022, 10:49 PM IST

Updated : Oct 11, 2022, 10:55 PM IST

ಬೆಂಗಳೂರು : ಮನುಷ್ಯನ ಸುಸ್ಥಿರ ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಹಾಗೂ ಸಮತೋಲಿತ ಆಹಾರ ಮುಖ್ಯವಾಗಲಿದೆ. ಹೀಗಾಗಿ ನನ್ನ ಫೇವರೇಟ್ ಬಟರ್ ಚಿಕನ್ ಆದರೂ ಪ್ರೋಟೀನ್ ಅಂಶವಿರುವ ಸಸ್ಯಾಹಾರಕ್ಕೆ‌ ಆದ್ಯತೆ ನೀಡುವೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಹೇಳಿದ್ದಾರೆ.

ಫಿಟ್ ನೆಸ್ ಗಾಗಿ ಸಮತೋಲನದ ಆಹಾರ : ಅಬರೇಟ್ ಫುಡ್ಸ್ ಕಂಪನಿ ಸೇರಿ ವಿವಿಧ ಕಂಪೆನಿಗಳ‌ ಪಾಲುದಾರಿಕೆಯಲ್ಲಿ ಶಾಖಾಹಾರಿ ಹೆಸರಿನ ಸ್ಟಾರ್ಟಪ್ ಕಂಪನಿಗೆ ಇಂದು ಬೆಂಗಳೂರಿನ‌ ಖಾಸಗಿ ಹೊಟೇಲ್ ನಲ್ಲಿ ಅಧಿಕೃತ ಚಾಲನೆ ನೀಡಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಸಮತೋಲಿತ ಹಾಗೂ‌ ಪ್ರೋಟಿನ್ ಯುಕ್ತ ಆಹಾರ ಸೇವನೆ ಅತಿಮುಖ್ಯವಾಗಲಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸಸ್ಯಾಹಾರಕ್ಕೆ ಅದರದ್ದೇ ಗೌರವವಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಜಿಮ್ ಅಥವಾ ದೈಹಿಕ ಕಸರತ್ತು ಮಾಡಲು ಸಮಯ ಸಿಗುವುದಿಲ್ಲ. ಹೆಚ್ಚು ಸಮಯ ಟ್ರಾಫಿಕ್ ನಲ್ಲಿ ಕಳೆಯಬೇಕಾಗುತ್ತದೆ. ಹೀಗಾಗಿ ದೀರ್ಘಕಾಲದ ಉತ್ತಮ ಆರೋಗ್ಯಕ್ಕಾಗಿ ಶಾಖಾಹಾರ‌ ಸೇವನೆ ಅತಿ ಮುಖ್ಯವಾಗಿದೆ. ನಾನು ಬಟರ್ ಚಿಕನ್‌ ಸೇರಿದಂತೆ ಮಾಂಸಾಹಾರ ಇಷ್ಟಪಡುತ್ತೇನೆ, ಆದರೆ ನನ್ನ ಫಿಟ್ ನೆಸ್ ಗಾಗಿ ನಾನು ಹೆಚ್ಚು ಸಮತೋಲನದ ಆಹಾರ ಬಯಸುತ್ತೇನೆ ಎಂದರು.

ನನ್ನ 14 ವರ್ಷ ವಯಸ್ಸಿನಿಂದ ಮಾಂಸಹಾರವನ್ನು ಸೇವಿಸುತ್ತಿದ್ದೇನೆ. 2004ರಲ್ಲಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಬಳಿಕ ಆಹಾರ ಅಭಿರುಚಿ ಬದಲಾಯಿಸಿದೆ. ಸುಸ್ಥಿರ ಅರೋಗ್ಯ ಹಾಗೂ ಫಿಟ್ ನೆಸ್ ಕಾಪಾಡಿಕೊಳ್ಳಲು ಶಾಖಾಹಾರವನ್ನೇ ಅವಲಂಬಿಸಿದ್ದೆ. ಇದರಿಂದ ನನ್ನ‌ ಕ್ರಿಕೆಟ್ ವೃತ್ತಿಗೆ ಇನ್ನಷ್ಟು ಸಹಕಾರಿಯಾಯಿತು ಎಂದು ಹೇಳಿದರು.

ಒತ್ತಡರಹಿತವಾಗಿ ಆಡುವ ತಂಡವೇ ಚಾಂಪಿಯನ್ : ಮುಂಬರುವ 20-20 ವಿಶ್ವಕಪ್ ನಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಧೋನಿ, ನಾನೀಗ ತಂಡದಿಂದ ಹೊರಗಿದ್ದೇನೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಗುತ್ತಲೇ ಮಾತು ಮುಂದುವರಿಸಿದ ಅವರು ಟಿ-ಟ್ವಿಂಟಿ ವಲ್ಡ್ ಕಪ್ ಎತ್ತಿ ಹಿಡಿಯಲು ಎಲ್ಲಾ ತಂಡಗಳು ಉತ್ಸುಕವಾಗಿವೆ‌.‌

ನನ್ನ ಪ್ರಕಾರ ಎಲ್ಲಾ ತಂಡಗಳು ಉತ್ತಮವಾಗಿದೆ. ಚುಟುಕು ಕ್ರಿಕೆಟ್ ಕದನದಲ್ಲಿ ಗೆಲ್ಲುವವರು ಯಾರು ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಪಂದ್ಯದ ಕೊನೆಯ ಐದು ಹತ್ತು ನಿಮಿಷಗಳು ಪಂದ್ಯದ ಗತಿ ಬದಲಾಗಲಿದೆ. ನನ್ನ‌‌ ಪ್ರಕಾರ ಆಯಾ ತಂಡಗಳು ಪಿಚ್ ವಾತಾವರಣಕ್ಕೆ ಹೊಂದಿ ಒತ್ತಡರಹಿತ ಆಡುವ ತಂಡವೇ ಚಾಂಪಿಯನ್ ಆಗಲಿದೆ ಎಂದರು.

ಇದನ್ನೂ ಓದಿ : ಸಿನಿಮಾ ರಂಗದಲ್ಲಿ ಇನ್ನು ಧೋನಿ ಎಂಟರ್​ಟೈನ್​ಮೆಂಟ್

Last Updated : Oct 11, 2022, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.