ETV Bharat / state

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ.. ರಾಜ್ಯಪಾಲರನ್ನ ಭೇಟಿಯಾದ ಸಂಸದೆ ಸುಮಲತಾ.. - ಕರ್ನಾಟಕ ಸುದ್ದಿ

ಸಂದೇಶ್ ಪ್ರಿನ್ಸ್​ ಹೋಟೆಲ್​ ಗಲಾಟೆ ಸಂಬಂಧ ತನಿಖೆ ನಡಿತಿದೆ. ಸತ್ಯಾಂಶ ಹೊರ ಬರಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ತಿಳಿಸಿದರು..

ಸುಮಲತಾ
ಸುಮಲತಾ
author img

By

Published : Jul 17, 2021, 5:16 PM IST

ಬೆಂಗಳೂರು : ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ರಾಜಭವನದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನ ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ, ರಾಜ್ಯಪಾಲರು ಹೊಸದಾಗಿ ಬಂದಿದ್ದು ಭೇಟಿ ಮಾಡಿ ಶುಭಾಶಯ ಕೋರಿದ್ದೇನೆ.

ಸುಮಲತಾ
ರಾಜ್ಯಪಾಲರನ್ನ ಭೇಟಿ ಮಾಡಿದ ಸಂಸದೆ ಸುಮಲತಾ ಅಂಬರೀಶ್

ಇದೇ ವೇಳೆ ಅಕ್ರಮ ಗಣಿಗಾರಿಕೆ ಕುರಿತ ಮಾಹಿತಿಯನ್ನೂ ನೀಡಿದ್ದು, ಇದನ್ನು ನಿಯಂತ್ರಿಸಲು ಸೂಚಿಸುವಂತೆ ಮನವಿ ಮಾಡಿದ್ದೇನೆ. ಈ ವೇಳೆ ಕೆಲವು ಸಲಹೆಗಳನ್ನು ರಾಜ್ಯಪಾಲರು ಕೊಟ್ಟಿದ್ದಾರೆ ಎಂದು ತಿಳಿಸಿದರು. ಅಕ್ರಮ ಗಣಿಗಾರಿಕೆಯ ಪರಿಣಾಮಗಳ ಬಗ್ಗೆ ತಿಳಿಸಿದ್ದೇನೆ. ಮೆಮೋರಾಂಡಮ್ ಕೊಟ್ಟಿದ್ದೇನೆ. ಸರ್ಕಾರಕ್ಕೆ ಮಾಹಿತಿ ತಿಳಿಸೋದಾಗಿ ರಾಜ್ಯಪಾಲರು ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು. (ಮೇಕೆದಾಟು ವಿಚಾರವಾಗಿ ಕೇಂದ್ರ ನೀರಾವರಿ ಸಚಿವರು ರಾಜ್ಯಕ್ಕೆ ಬಂದಿಲ್ಲ: HDK ಅಸಮಾಧಾನ)

ದರ್ಶನ್-ಉಮಾಪತಿ ನಡುವೆ ಆಸ್ತಿ ಜಟಾಪಟಿ ವಿಚಾರ ಮಾತನಾಡಿ, ಪ್ರಕರಣದ ಬಗ್ಗೆ ನಾನು ಮಾತಾಡೋಕೆ ಇಷ್ಟಪಡಲ್ಲ. ನಾನು ಅನಾವಶ್ಯಕ ಹೇಳಿಕೆ ಕೊಡೋದು ಸರಿಯಲ್ಲ. ಹೋಟೆಲ್‌​ನಲ್ಲಿ ನಡೆದ ಹಲ್ಲೆ ಬಗ್ಗೆ ತನಿಖೆ ನಡೀತಿದೆ. ಸತ್ಯಾಂಶ ಹೊರಗೆ ಬರಲಿ ಎಂದರು. (ಈಗಲೂ ಒನ್‌ ಅಂಡ್‌ ಒನ್ಲಿ ಯಡಿಯೂರಪ್ಪ.. ದಿಲ್ಲಿಯೊಳಗೆ 'ಬಾಹುಬಲಿ'ಯಂತಾದ ಬಿಎಸ್‌ವೈ.. ಆದರೂ ನಿಲ್ಲದ 'ಭಿನ್ನ'ರಾಗ!)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.