ಬೆಂಗಳೂರು : ಕುಮಾರಸ್ವಾಮಿ ಯಾವುದೇ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ. ಅವರ ಸುಳ್ಳುಗಳಿಗೆ ನಾನ್ಯಾಕೆ ರಿಯಾಕ್ಟ್ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಧರ್ಮೇಗೌಡ ಆತ್ಮಹತ್ಯೆ ರಾಜಕೀಯ ಕಗ್ಗೊಲೆ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಕುಮಾರಸ್ವಾಮಿ ದುರುದ್ದೇಶಪೂರಿತವಾಗಿ ಮಾತನಾಡ್ತಾರೆ. ಅದಕ್ಕೆಲ್ಲ ನಾನ್ಯಾಕೆ ರಿಯಾಕ್ಟ್ ಮಾಡಲಿ. ಧರ್ಮೇಗೌಡರನ್ನ ಬಲತ್ಕಾರವಾಗಿ ಬಿಜೆಪಿ-ಜೆಡಿಎಸ್‌ನವರು ಸಭಾಪತಿ ಪೀಠದಲ್ಲಿ ಕೂರಿಸಿದ್ರು. ಅದು ಅವರಿಗೆ ಇಷ್ಟ ಇರಲಿಲ್ಲ ಎಂದು ಆರೋಪಿಸಿದರು.
ಅವರ ಪಾರ್ಥೀವ ಶರೀರದ ದರ್ಶನಕ್ಕೆ ತೆರಳ್ತೇನೆ. ಅವರ ತಂದೆ ಎಸ್ ಆರ್ ಲಕ್ಷ್ಮಯ್ಯ ಆಪ್ತ ಸ್ನೇಹಿತರಾಗಿದ್ದರು. ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು. ಅವರ ತಂದೆ ಕಾಲದಿಂದ ಕುಟುಂಬದ ಪರಿಚಯವಿದೆ. ತಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ರೈತಪರ, ಜನಪರ ಕಾಳಜಿಯುಳ್ಳ ವ್ಯಕ್ತಿ. ಅವರ ಅಗಲಿಕೆ ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದರು.
ಕೊರೊನಾ ರೂಪಾಂತರ ವೈರಸ್ ಪತ್ತೆ ವಿಚಾರವಾಗಿ ಮಾತನಾಡಿದ ಅವರು, ಜನರಲ್ಲಿ ಇರೋ ಆತಂಕ ಸರ್ಕಾರ ದೂರ ಮಾಡಬೇಕು. ಬ್ರಿಟನ್ನಿಂದ ಬಂದ ಮೇಲೆ ಹುಡುಕೋದಲ್ಲ. ಬರೋ ಮೊದಲೇ ಪರೀಕ್ಷೆ ಮಾಡಬೇಕಿತ್ತು. ನಿಲ್ದಾಣದಲ್ಲಿ ಪರೀಕ್ಷೆ ಮಾಡಿ, ಕ್ವಾರಂಟೈನ್ ಮಾಡಬೇಕಿತ್ತು. ಬಂದ ಮೇಲೆ ಹುಡುಕುವುದಲ್ಲ. ಜನರ ಆತಂಕ ದೂರ ಮಾಡಬೇಕು ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹಿದರು.