ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಒಂದು ತಿಂಗಳಿಂದ 130 ಕೋಟಿ ಜನ ಮನೆಯಲ್ಲೇ ಲಾಕ್ ಡೌನ್ಗೆ ಒಳಗಾಗಿದ್ದಾರೆ. ಈ ಸಮಯದಲ್ಲಿ ಸಿನಿಮಾ ಸೆಲೆಬ್ರಿಟಿಗಳು ಹೇಗೆ ಮನೆಯಲ್ಲಿ ಇರ್ತಾರೆ, ಅನ್ನೋ ಕುತೂಹಲ ಅವ್ರ ಅಭಿಮಾನಿಗಳಲ್ಲಿ ಮೂಡಿದೆ.
ಕೆಲ ಸೆಲೆಬ್ರಿಟಿಗಳು ಮನೆಯಲ್ಲೇ ಒಂದೊಂದು ರೀತಿ ಕೆಲಸಗಳನ್ನ ಮಾಡುತ್ತಿದ್ದಾರೆ. ಕೆಲವರು ಈ ಸಮಯದಲ್ಲಿ ಕೊರೊನಾ ಸೋಂಕಿತರಿಗೆ, ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಊಟದ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ರು. ಈಗ ಮನೆಯಲ್ಲಿ ಹೇಗೆ ವರ್ಕ್ ಔಟ್ ಮಾಡಬೇಕು ಎಂದು ಸ್ವತಃ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಮನೆಯಲ್ಲಿ ಕಸ ಗುಡಿಸುವುದರಿಂದ ಒಳ್ಳೆ ವರ್ಕ್ ಔಟ್ ಆಗುತ್ತೆ ಎಂದು ತಿಳಿಸಿದ್ದಾರೆ. ನೋಡಿ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಳ್ಳುತ್ತಿರುವ ಕಾರಣ ನನಗೆ ಒಳ್ಳೆ ವರ್ಕ್ ಔಟ್ ಆಗುತ್ತಿದೆ ಅಂತಾ ತಮ್ಮ ಅಭಿಮಾನಿಗಳಿಗೆ ಟಿಪ್ಸ್ ಕೊಟ್ಟಿದ್ದಾರೆ. ಸದ್ಯ ರಾಗಿಣಿ ದ್ವಿವೇದಿ ಕಸ ಗುಡಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.