ETV Bharat / state

ಕೋವಿಡ್​​ ಕಾರಣ ಕುಂಟುತ್ತಾ ಸಾಗುತ್ತಿದೆ ವಸತಿ ಯೋಜನೆ ಅನುಷ್ಠಾನ - Chief minister B.S.Yadiyurappa

ನೆರೆಹಾವಳಿ, ಲಾಕ್​​ಡೌನ್ ಕಾರಣದಿಂದ ನಿರೀಕ್ಷಿತ ಮಟ್ಟದಲ್ಲಿ ವಸತಿ ಯೋಜನೆ ಅನುಷ್ಠಾನದಲ್ಲಿ ವಸತಿ ಇಲಾಖೆಗೆ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಇದೆಲ್ಲವನ್ನೂ ಸರಿದೂಗಿಸುವ ವಿಶ್ವಾಸವನ್ನು ವಸತಿ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Housing schemes
ವಸತಿ ಯೋಜನೆ
author img

By

Published : Oct 10, 2020, 7:08 PM IST

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ನೆರೆ ಹಾವಳಿ ಹಾಗೂ ಕೊರೊನಾ ಸೋಂಕಿನಿಂದಾಗಿ ವಸತಿ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಯಾವ ಯೋಜನೆಯಡಿ ಎಷ್ಟು ಮನೆಗಳ ನಿರ್ಮಾಣವಾಗುತ್ತಿದೆ. ಎಷ್ಟು ಹಸ್ತಾಂತರವಾಗಿದೆ ಎನ್ನುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸೂರಿಲ್ಲದವರಿಗೆ ಆಸರೆಯಾಗಲು ಹತ್ತು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇರಿಸಿಕೊಂಡಿದೆ. ಆದರೆ, ಇದರ ಅನುಷ್ಠಾನ ಮಾತ್ರ ನಿರೀಕ್ಷಿತ ರೀತಿಯಲ್ಲಿ ಸಾಗುತ್ತಿಲ್ಲ. ವಸತಿ ಇಲಾಖೆಗೆ ಸಚಿವರಾಗಿ ವಿ.ಸೋಮಣ್ಣ ಅಧಿಕಾರ ಸ್ವೀಕರಿಸಿದ ವೇಳೆ, ರಾಜ್ಯದಲ್ಲಿ ನೆರೆಹಾನಿ ವ್ಯಾಪಕವಾಗಿ ಸಂಭವಿಸಿದ ಕಾರಣ ವಸತಿ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿತು.

ನಂತರದ ದಿನಗಳಲ್ಲಿ ಯೋಜನೆಗಳಿಗೆ ವೇಗ ನೀಡುವ ವೇಳೆ ರಾಜ್ಯದಲ್ಲಿ ಕೊರೊನಾ ಕಾಲಿಟ್ಟು ಲಾಕ್​ಡೌನ್ ಘೋಷಣೆ ಮಾಡಲಾಯಿತು. ಇದರಿಂದಾಗಿ ನಾಲ್ಕು ತಿಂಗಳ ಕಾಲ ಸಂಪೂರ್ಣವಾಗಿ ನಿರ್ಮಾಣ ಕಾಮಗಾರಿಗಳೇ ಸ್ಥಗಿತವಾದ ಹಿನ್ನೆಲೆಯಲ್ಲಿ ವಸತಿ ಯೋಜನೆಗಳೂ ಸ್ಥಬ್ಧಗೊಂಡಿದ್ದವು. ಇದೀಗ ಅನ್​​ಲಾಕ್ ಪ್ರಕ್ರಿಯೆ ಆರಂಭಗೊಂಡ ನಂತರ ಮತ್ತೆ ವಸತಿ ಯೋಜನೆಗಳ ಅನುಷ್ಠಾನ ಕಾರ್ಯವನ್ನು ಆರಂಭಿಸಲಾಗಿದೆ.

ರಾಜೀವ್ ಗಾಂಧಿ ವಸತಿ ನಿಗಮ ಯೋಜನೆ ನಿಯಮಿತ ಕುರಿತು ಮಾಹಿತಿ

2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರ 1.65 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು,‌ 8,846 ಮನೆಗಳನ್ನು ನಿರ್ಮಿಸಲಾಗಿದೆ. 2019ರ ಆಗಸ್ಟ್​​ನಿಂದ 2020ರ ಜೂನ್​​ವರೆಗೆ ಒಟ್ಟಾರೆ 86,258 ಮನೆಗಳನ್ನು ನಿರ್ಮಿಸಲಾಗಿದ್ದು, 4,298 ಮನೆಗಳ ಹಂಚಿಕೆ ಮಾಡಲಾಗಿದೆ. ಆಗಸ್ಟ್ 2019 ರಿಂದ ಜೂನ್ 2020ರವರೆಗೆ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆ ಮತ್ತು ವಾಜಪೇಯಿ ನಗರ ನಿವೇಶನ ಯೋಜನೆಗಳ ಅಡಿ ರಾಜ್ಯಾದ್ಯಂತ 54.57 ಎಕರೆ ಖಾಸಗಿ ಭೂಮಿ ಖರೀದಿಸಲಾಗಿದ್ದು, ಗ್ರಾಮೀಣ ನಿವೇಶನ ಯೋಜನೆಯಡಿ 2,185 ಎಕರೆ ಸರ್ಕಾರಿ ಜಮೀನನ್ನು ನಿವೇಶನ ಹಂಚಿಕೆಗಾಗಿ ಕಾಯ್ದಿರಿಸಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಕೇಂದ್ರದಿಂದ 60,658 ಮನೆಗಳ ಅನುಮೋದನೆ ಅನುಮೋದನೆ ಪಡೆದಿದ್ದು, 47,577 ಫಲಾನುಭವಿಗಳಿಗೆ ಸಿಎಲ್​ಎಸ್ಎಸ್ ಘಟಕದಡಿ ಮನೆ ಸಾಲದ ಮೇಲೆ ಬಡ್ಡಿ ವಿನಾಯಿತಿ ನೀಡಿದೆ. 2018-19ರಲ್ಲಿ ಕೊಡಗು ಜಿಲ್ಲೆ ಭೂ ಕುಸಿತದಿಂದ ಹಾನಿಗೊಳಗಾದವರಿಗೆ 840 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, 520 ಮನೆ ನಿರ್ಮಾಣ ಪೂರ್ಣಗೊಂಡು 498 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಆರು ಪ್ಯಾಕೇಜ್​​​ಗಳಲ್ಲಿ 28,754 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೇ 10,500 ಫಲಾನುಭವಿಗಳು ಮನೆಗಳ ಬೇಡಿಕೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.

ವಸತಿ ಯೋಜನೆ ಅನುಷ್ಠಾನ ಕುರಿತ ವಿವರವಾದ ವರದಿ

ಕರ್ನಾಟಕ ಗೃಹ ಮಂಡಳಿಯಿಂದ ಬಿಡುಗಡೆಯಾದ ನಿವೇಶನಗಳ ಸಂಖ್ಯೆ

ಪ್ರಸ್ತುತ 9 ವಸತಿ ಯೋಜನೆಗಳು ಪ್ರಗತಿ/ಮುಕ್ತಾಯದ ಹಂತದಲ್ಲಿದ್ದು, 781 ಕೋಟಿ ವೆಚ್ಚದಲ್ಲಿ 454 ಮನೆಗಳ ನಿರ್ಮಾಣ ಮತ್ತು 9671 ನಿವೇಶನಗಳನ್ನ ಮಾಡಲಾಗುತ್ತಿದೆ. ವಿವಿಧ ಯೋಜನೆಗಳಿಂದ ವಿವಿಧ ವರ್ಗಗಳ 1134 ವಸತಿ ನಿವೇಶನ, 380 ಫ್ಲಾಟ್, 16 ಸಿಎ ನಿವೇಶನ, 6 ವಾಣಿಜ್ಯ ನಿವೇಶನ ಸೇರಿ ಒಟ್ಟು 1,536 ಸ್ವತ್ತುಗಳನ್ನು 201 ಕೋಟಿ ವೆಚ್ಚದಲ್ಲಿ ಹಂಚಿಕೆ ಮಾಡಲಾಗಿದೆ.

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ವಸತಿ ನಿರ್ಮಾಣ

ರಾಜೀವ್ ಆವಾಸ್ ಯೋಜನೆಯಡಿ 1030.55 ಕೋಟಿ ಮೊತ್ತದಲ್ಲಿ 19,897 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 1,750 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ 10,975 ಕೋಟಿ ವೆಚ್ಚದಲ್ಲಿ ‌1,80,253 ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಬಿಜೆಪಿ ಸರ್ಕಾರ ಬಂದ ನಂತರ 693.32 ಕೋಟಿ ವೆಚ್ಚದಲ್ಲಿ 13,346 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. 238 ಹೊಸ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ.

ವಸತಿ ಯೋಜನೆಗಳ ಅನುಷ್ಠಾನಕ್ಕೆ ಸದ್ಯದ ಮಟ್ಟಿಗೆ ಹಣಕಾಸು ಸಮಸ್ಯೆ ಇಲ್ಲ. ಆದರೆ, ಈ ಬಾರಿ ಲಾಕ್​ಡೌನ್ ಕಾರಣದಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಾದ ಆದಾಯ ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇದರಿಂದ ವಸತಿ ಯೋಜನೆಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ‌ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.