ETV Bharat / state

ಪ್ರಧಾನಮಂತ್ರಿ ಆವಾಸ್ ಯೋಜನೆ: 2 ವರ್ಷದಲ್ಲಿ ಬಿಡುಗಡೆಯಾದ ಅನುದಾನ-ನಿರ್ಮಾಣವಾದ ಮನೆಗಳೆಷ್ಟು ಗೊತ್ತಾ?

author img

By

Published : Nov 28, 2020, 6:40 PM IST

2019-20 ಮತ್ತು 2020-21ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡಿರುವ ಮನೆಗಳು ಹಾಗೂ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

House built under Prime Minister Awas project
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ಮಾಹಿತಿ

ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕಳೆದೆರಡು ವರ್ಷದಲ್ಲಿ ಗ್ರಾಮೀಣ ಭಾಗಕ್ಕಿಂತಲೂ ನಗರ ಭಾಗದಲ್ಲಿ ಹೆಚ್ಚು ಮನೆಗಳ ನಿರ್ಮಾಣ ಆಗಿರುವುದು ಬೆಳಕಿಗೆ ಬಂದಿದೆ.

2019-20 ಹಾಗೂ 2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್​ (ಪಿಎಂಎವೈ) ಯೋಜನೆಯಡಿ ನಗರ ಭಾಗಕ್ಕೆ ಹೆಚ್ಚು ಮನೆಗಳನ್ನು ನೀಡಲಾಗಿದೆ. ಅಂಕಿ-ಅಂಶಗಳ ಪ್ರಕಾರ 2019-20ನೇ ಸಾಲಿನಲ್ಲಿ ನಗರ ಭಾಗಗಳಿಗೆ ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ ನಿರ್ಮಾಣ(ಎಎಚ್​​ಪಿ) ಯೋಜನೆಯಡಿ 279 ಮನೆಗಳನ್ನು ನೀಡಲಾಗಿದೆ. 40 ಮನೆಗಳು ಸಂಪೂರ್ಣ ನಿರ್ಮಾಣಗೊಂಡಿವೆ. ಇನ್ನು ಫಲಾನುಭವಿ ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣ ಅಥವಾ ವರ್ಧನೆ(ಬಿಎಲ್ಸಿ) ಅಡಿ ಒಟ್ಟು 59,779 ಮನೆ ಮಂಜೂರು ಮಾಡಲಾಗಿದ್ದು, ಇದರಲ್ಲಿ 3,163 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ.

ಅದೇ ಸಾಲಿನಲ್ಲಿ ಒಟ್ಟು 60,658 ಮನೆಗಳನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ ಕೇವಲ 3,203 ಮನೆಗಳು ಮಾತ್ರ ನಿರ್ಮಾಣಗೊಂಡಿವೆ. ಇದೇ ವಿಭಾಗದಲ್ಲಿ 2020- 21ರಲ್ಲಿ ಗಮನಿಸಿದಾಗ ಎಎಚ್​ಪಿ ಅಡಿ ಯಾವುದೇ ಮನೆ ಮಂಜೂರಾಗಿಲ್ಲ. ಬಿಎಲ್​ಸಿ ಅಡಿ ಒಟ್ಟು 6,170 ಮನೆಗಳನ್ನು ನೀಡಿದ್ದರೆ, ಅದರಲ್ಲಿ ಒಂದು ಮನೆಯ ನಿರ್ಮಾಣ ಕೂಡ ಆಗಿಲ್ಲ. ಒಟ್ಟಾರೆ ಎರಡು ವರ್ಷಗಳ ನೀಡಿಕೆ ಹಾಗೂ ನಿರ್ಮಾಣವನ್ನು ಗಮನಿಸಿದಾಗ ಒಟ್ಟು 66,828 ಮನೆಗಳನ್ನು ಮಂಜೂರು ಮಾಡಿದ್ದು, ಕೇವಲ 3,203 ಮನೆಗಳು ಮಾತ್ರ ನಿರ್ಮಾಣವಾಗಿವೆ.

ಗ್ರಾಮೀಣ ಭಾಗದ ಸ್ಥಿತಿ:

ನಗರ ಪ್ರದೇಶದಲ್ಲಿ ಈ ಸ್ಥಿತಿ ಇದ್ದರೆ, ಗ್ರಾಮೀಣ ಭಾಗದಲ್ಲಿನ ಮನೆಗಳ ನೀಡಿಕೆ ಸಹ ಕಡಿಮೆಯಾಗಿದೆ. ನಿರ್ಮಾಣ ಅದಕ್ಕಿಂತಲೂ ಹೀನವಾಗಿದೆ. 2019-20ರಲ್ಲಿ ಬಿಎಲ್​​ಸಿ ಅಡಿ 39,513 ಮನೆಗಳ ನೀಡಿಕೆಯಾಗಿದ್ದು, ಕೇವಲ 394 ಮಾತ್ರ ನಿರ್ಮಾಣವಾಗಿವೆ. 2020-21ರಲ್ಲಿ 1,51,715 ಮನೆಗಳನ್ನು ನೀಡಲಾಗಿದ್ದು, ಕಳೆದ ವಾರದವರೆಗೂ ಯಾವುದೇ ಮನೆಗಳ ಹಂಚಿಕೆ ಆಗಿರಲಿಲ್ಲ. ಆದರೆ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳಿಗೆ ತಲಾ 7,500 ಮನೆಗಳನ್ನು ಹಂಚಿಕೆ ಮಾಡಲಾಗಿದೆ.

ಅನುದಾನ ಬಿಡುಗಡೆ ವಿವರ:

ಎರಡು ವರ್ಷಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಿಡುಗಡೆ ಮಾಡಿರುವ ಅನುದಾನಗಳ ಕುರಿತು ಗಮನ ಹರಿಸಿದಾಗ ಸಿಗುವ ಮಾಹಿತಿ ಕೂಡ ಅಚ್ಚರಿ ಮೂಡಿಸುತ್ತದೆ. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಗಮನ ಹರಿಸಿದಾಗ 2019-20ನೇ ಸಾಲಿನಲ್ಲಿ ಎಎಚ್​​ಪಿ ಅಡಿ 198 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, 8,760 ಲಕ್ಷ ರೂ. ಬಿಡುಗಡೆ ಆಗಬೇಕಿದೆ. ಬಿಎಲ್​​ಸಿ ಅಡಿ 98,923.50 ಲಕ್ಷ ರೂ. ಬಿಡುಗಡೆಯಾಗಬೇಕಿದ್ದ ಅನುದಾನ ಬಿಡುಗಡೆ ಆಗಿಲ್ಲ. 2020-21ರಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ, ನೀಡಿಕೆಯೂ ಆಗಿಲ್ಲ.

Minister Somanna
ವಸತಿ ಸಚಿವ ಸೋಮಣ್ಣ ಮಾಹಿತಿ ಪಡೆಯುತ್ತಿರುವುದು

ಇನ್ನು ಗ್ರಾಮೀಣ ಭಾಗದ ವಿಚಾರಕ್ಕೆ ಬಂದರೆ 2019-20ರಲ್ಲಿ ಬಿಎಲ್​ಸಿ ಅಡಿ 133.08 ಲಕ್ಷ ರೂ. ಬಿಡುಗಡೆಯಾಗಿದ್ದು, 478.15.08 ಲಕ್ಷ ರೂ. ಬಿಡುಗಡೆಯಾಗಬೇಕಿದೆ. 2020-21ನೇ ಸಾಲಿನಲ್ಲಿ ಯಾವುದೇ ಹಣ ಬಿಡುಗಡೆ ಆಗಿಲ್ಲ. ಮನೆ ಹಾಗೂ ಅನುದಾನವನ್ನು ಜಾತಿವಾರು, ಕ್ಷೇತ್ರವಾರು ವಿಭಾಗಿಸಿ ವಿಂಗಡಿಸಲಾಗಿದೆ ಎನ್ನುವುದು ಗಮನಾರ್ಹ ಸಂಗತಿ.

ವಿಳಂಬಕ್ಕೆ ಕಾರಣ ಕೊರೊನಾ:

ರಾಜ್ಯ ಸರ್ಕಾರ ಮನೆಗಳ ಹಂಚಿಕೆಯಲ್ಲಿ ಉಂಟಾಗಿರುವ ವಿಳಂಬಕ್ಕೆ ಮಹಾಮಾರಿ ಕೊರೊನಾವನ್ನು ಗುರಿ ಮಾಡಿ ತೋರಿಸುತ್ತಿದೆ. ಕಳೆದ 10 ತಿಂಗಳಿಂದ ರಾಜ್ಯದಲ್ಲಿ ಯಾವುದೇ ಚಟುವಟಿಕೆ ನಡೆಯದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಲವು ವಸತಿ ಯೋಜನೆಗಳು ಇದ್ದರೂ ಹಂಚಿಕೆಯಾಗದ ಸ್ಥಿತಿ ನಿರ್ಮಾಣವಾಗಿದೆ. ಫಲಾನುಭವಿಗಳನ್ನು ಹುಡುಕಿ ಮನೆ ವಿತರಿಸುವುದು ಇದುವರೆಗೂ ದೊಡ್ಡ ಸವಾಲಿನ ಸಂಗತಿಯಾಗಿತ್ತು. ಇದೀಗ ಕೋವಿಡ್ ಅಬ್ಬರ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮರ್ಥವಾಗಿ ಹಾಗೂ ತ್ವರಿತವಾಗಿ ಮನೆಗಳನ್ನು ಹಂಚಿಕೆ ಮಾಡುವ ಕಾರ್ಯ ಕೈಗೆತ್ತಿಕೊಳ್ಳುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.