ಬೆಂಗಳೂರು: ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನೊಬ್ಬ ಒಂದು ವರ್ಷದ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮಹದೇವಪುರ ಪೊಲೀಸರು ಒಂದು ವರ್ಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಚೇತನ್ ಕುಮಾರ್ ಬಂಧಿತ ಆರೋಪಿ.
ಈತ 2021ರಲ್ಲಿ ಹಾಡಹಗಲೇ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ. ಮಹದೇವಪುರ ಠಾಣಾ ವ್ಯಾಪ್ತಿಯ ಅಬ್ಬಯ್ಯ ಲೇಔಟ್ನಲ್ಲಿ ಮನೆಯ ಬಾಗಿಲಿನ ಲಾಕ್ ಮುರಿದು ಚಿನ್ನಾಭರಣ ದೋಚಿದ್ದ. ಈ ಹಿಂದೆ ಸಹಚರನ ಜೊತೆ ಸೇರಿ ಬಸ್ನಲ್ಲಿ ಚಿನ್ನದ ಸರ ಎಗರಿಸಿದ್ದ. ಆರೋಪಿಯನ್ನು ಪತ್ತೆ ಮಾಡಲು ಮಹದೇವಪುರ ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದ್ದರೂ ಪೊಲೀಸರ ಕಣ್ಣಿಗೆ ಬಿದ್ದಿರಲಿಲ್ಲ.
ಸದ್ಯ ಆರೋಪಿಯ ಬಂಧನದಿಂದ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತನಿಂದ 8 ಲಕ್ಷ ಮೌಲ್ಯದ 164 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 6 ವರ್ಷದ ಬಾಲಕನ ತಲೆ ಕಡಿದು ಬಲಿ ನೀಡಿದ ಕೀಚಕರು.. ಇದು ದೈವಾದೇಶವಂತೆ!