ತಮಿಳುನಾಡು: ಹಾಡಹಗಲೇ ಮನೆ ಕಳ್ಳತನ ಮಾಡಿ ಇಬ್ಬರು ಖದೀಮರು ಪರಾರಿಯಾಗಿರುವ ಘಟನೆ ಇಲ್ಲಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ನಡೆದಿದೆ. ಯಾರು ಇಲ್ಲದ ಸಮಯದಲ್ಲಿ ಮನೆ ಬಾಗಿಲು ಮುರಿದು ಮನೆಗೆ ಕನ್ನ ಹಾಕಿದ್ದಾರೆ.
ಬೈಕ್ನಲ್ಲಿ ಬಂದಿದ್ದ ಇಬ್ಬರು ಖದೀಮರು, ಕಬ್ಬಿಣದ ಸರಳಿನಿಂದ ಮನೆ ಬಾಗಿಲು ಮುರಿದಿದ್ದಾರೆ. 30 ಗ್ರಾಂ ಚಿನ್ನ ಹಾಗೂ 5 ಲಕ್ಷ ನಗದು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಖದೀಮರ ಈ ಕೃತ್ಯ ಮನೆಯ ಹೊರಗಿದ್ದರಿಂದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಸೂಳಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.