ETV Bharat / state

ಸಚಿವರಲ್ಲಿ ಅಸಮಾಧಾನ ಸಹಜ, ಎಲ್ಲ ಸರಿಯಾಗುತ್ತದೆ; ಬೊಮ್ಮಾಯಿ ವಿಶ್ವಾಸ

ಮುಖ್ಯಮಂತ್ರಿಗಳು ನಿನ್ನೆ ಮತ್ತು ಇಂದು ತುಮಕೂರಿಗೆ ಹೋಗಿ ಬಂದ ನಂತರ ಸಚಿವರೊಂದಿಗೆ ಮಾತನಾಡಿದ್ದಾರೆ‌. ಅವರನ್ನು ಸಮಾಧಾನ ಪಡಿಸಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

home minister basavaraj bommayi talk
ಬಸವರಾಜ ಬೊಮ್ಮಾಯಿ
author img

By

Published : Jan 21, 2021, 8:38 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ನಂತರ ಇಂದು ಖಾತೆಗಳ ಹಂಚಿಕೆಯಾಗಿದ್ದು, ಕೆಲವರ ಖಾತೆಗಳು ಬದಲಾವಣೆಯಾಗಿವೆ.

ಬಸವರಾಜ ಬೊಮ್ಮಾಯಿ

ಓದಿ: ಖಾತೆ ಹಂಚಿಕೆಗೆ ಭುಗಿಲೆದ್ದ ಸಚಿವರ ಅಸಮಾಧಾನ: ಸಿಎಂ ಜೊತೆ ಸಚಿವರ ಚರ್ಚೆ ಏನು?

ಮುಖ್ಯಮಂತ್ರಿಗಳು ನಿನ್ನೆ ಮತ್ತು ಇಂದು ತುಮಕೂರಿಗೆ ಹೋಗಿ ಬಂದ ನಂತರ ಸಚಿವರೊಂದಿಗೆ ಮಾತನಾಡಿದ್ದಾರೆ‌. ಅವರನ್ನು ಸಮಾಧಾನ ಪಡಿಸಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಚಿವ ಸಂಪುಟಕ್ಕೆ ಗೈರು ಹಾಜರಾದವರು ಪೂರ್ವಾನುಮತಿ ಪಡೆದಿದ್ದರು ಎಂದು ಸಮಜಾಯಿಷಿ ನೀಡಿದರು.

ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ನಮ್ಮ ಮುಖ್ಯಮಂತ್ರಿಯವರಿಗೆ ಇದೆ. ಎಲ್ಲವೂ ಸುಗಮವಾಗಿದ್ದು, ಹಿಂದೆಯೂ ಇಂತಹ ಸಂದರ್ಭಗಳಾಗಿವೆ. ಆಗಲೂ ಸಹ ಸಿಎಂ ಕರೆಸಿ ಮಾತುಕತೆ ನಡೆಸಿದ್ದರು. ಈಗಲೂ ಮಾತುಕತೆ ನಡೆಸಿ ಸರಿ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕೆಲವು ಸಂದರ್ಭಗಳಲ್ಲಿ ಖಾತೆಗಳ ಬದಲಾವಣೆ ಆಗುತ್ತದೆ. ರಾಜಕಾರಣದಲ್ಲಿ ಮಾತುಕತೆ ವಿಚಾರ, ವಿನಿಮಯ ಸಮಯ ಸಂದರ್ಭಾನುಸಾರ ಆಗುತ್ತಲೇ ಇರುತ್ತದೆ. ಈಗಲೂ ಮಾತುಕತೆ ಮೂಲಕ ಸಿಎಂ ಯಡಿಯೂರಪ್ಪನವರು ಎಲ್ಲವನ್ನೂ ಸರಿಪಡಿಸುತ್ತಾರೆ. ಸಂಪುಟ ಸಭೆಯಲ್ಲಿ ಖಾತೆ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.