ಬೆಂಗಳೂರು : ಭಾನುವಾರ ಮೈಸೂರು ರಸ್ತೆಯ ಪೂರ್ಣಿಮ ಕನ್ವೆಷನ್ ಸೆಂಟರ್‌ನಲ್ಲಿ ಎಚ್.ಎಂ. ರೇವಣ್ಣನವರಿಗೆ ಅಭಿನಂದನೆ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಎಚ್.ಎಂ. ರೇವಣ್ಣ ಮತ್ತು ವತ್ಸಲಾ ರೇವಣ್ಣ ದಂಪತಿಯನ್ನು ಸನ್ಮಾನಿಸಲಾಯಿತು.
ಎಚ್.ಎಂ. ರೇವಣ್ಣ ಅವರನ್ನು ಕುರಿತ ಸಂಗತ ಗ್ರಂಥ ಮತ್ತು ದೃಶ್ಯಯಾನ ಎಂಬ ಚಿತ್ರಗುಚ್ಛವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಜಾತಿ ವ್ಯವಸ್ಥೆ ಆಳವಾಗಿ ಸಮಾಜದಲ್ಲಿ ಬೇರೂರಿದ್ದು ಜಾತಿಯು ಹೋಗದೆ ಬದಲಾವಣೆ ಅಸಾಧ್ಯ. ಜಾತಿಯನ್ನು ಕಿತ್ತು ಎಲ್ಲರಿಗೂ ಸಮಾನ ಅವಕಾಶ ನೀಡಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಎಲ್ಲರಿಗೂ ಸಮಾನತೆ ದೊರೆಯುವಂತೆ ಮಾಡಬೇಕು ಎಂದರು.
ಭ್ರಷ್ಟಾಚಾರವು ಗಂಭೀರ ವಿಷಯವಾಗಿದ್ದು ರಾಜಕೀಯದಲ್ಲಿ ಹಾಸುಹೊಕ್ಕಾಗಿ ಮೌಲ್ಯಗಳನ್ನು ಕಸಿಯುತ್ತಿದೆ. ಇದರಿಂದ ಗುಣಾತ್ಮಕ ರಾಜಕಾರಣ ಮರೆಯಾಗುತ್ತಿದೆ. ದೇಶ ಅರಾಜಕತೆಗೆ ಸಿಲುಕುವ ಮುನ್ನ ಜನತೆ ಎಚ್ಚೆತ್ತುಕೊಳ್ಳಬೇಕಿದೆ. ಜನರು ಮೌಲ್ಯಯುತ ರಾಜಕಾರಣಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕ ಲಕ್ಷ್ಮಣ ಕೊಡಸೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕಮ್ಯುನಿಟಿ ಸೆಂಟರ್ ಕಾಲೇಜಿನ ಅಧ್ಯಕ್ಷ ಕೆ.ಎಂ. ನಾಗರಾಜ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ಉತ್ತರಾಖಂಡ್ನಲ್ಲಿ ಬೆಟ್ಟದ ಜೀವಗಳ ಅಕ್ಷರಕ್ರಾಂತಿ.. ಇಳಿ ವಯಸ್ಸಲ್ಲೂ ಪೆನ್ನು-ಪೆನ್ಸಿಲ್ ಹಿಡಿದ ವೃದ್ಧರು..