ETV Bharat / state

ಟಿಪ್ಪು ಜಯಂತಿ ವಿವಾದಕ್ಕೆ ಮಹತ್ವದ ತಿರುವು.! ವಿವರಣೆ ಕೇಳಿದ ಹೈಕೋರ್ಟ್​​​ - Tipu Jayanti controversy news

ರಾಜ್ಯದಲ್ಲಿ ಉಂಟಾಗಿರುವ ಟಿಪ್ಪು ಜಯಂತಿ ವಿವಾದಕ್ಕೆ ಹೈಕೋರ್ಟ್ ಮಹತ್ವದ ತಿರುವು ನೀಡಿದೆ. ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದಿರುವ ಟಿಪ್ಪು ಜಯಂತಿ ಆಚರಣೆ ಇದೇ ವರ್ಷ ಏಕೆ ನಿಲ್ಲಿಸಿದ್ದೀರಿ ಎಂದು ಕೋರ್ಟ್ ಪ್ರಶ್ನಿಸಿದೆ. ಈ ಕುರಿತು​ ವಿವರಣೆ ಕೇಳಿರುವ ನ್ಯಾಯಮೂರ್ತಿಗಳು, ವಿಚಾರಣೆ ಮುಂದೂಡಿದ್ದಾರೆ.

ಹೈಕೋರ್ಟ್
author img

By

Published : Nov 6, 2019, 7:52 AM IST

ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ಟಿಪ್ಪು ಜಯಂತಿ ವಿವಾದ ಹೈಕೋರ್ಟ್​​​​ ಮೆಟ್ಟಿಲೇರಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದಂತೆ ಟಿಪ್ಪು ಜಯಂತಿ ನಿಲ್ಲಿಸಲು ಕಾರಣ ಏನು ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನ ಪ್ರಶ್ನಿಸಿದೆ.

ಟಿಪ್ಪು ಜಯಂತಿ ಕುರಿತು ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಅಲಿ ಶಾ, ಟಿಪ್ಪುವಿನ ರಾಷ್ಟ್ರೀಯ ಸೇವಾ ಸಂಘ ಮತ್ತು ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು

ಸರ್ಕಾರದ ಪರ ವಕೀಲ ಪ್ರಭುಲಿಂಗ್ ನಾವಡಗಿ, ಟಿಪ್ಪು ಸುಲ್ತಾನ್ ಜಯಂತಿಯ ಹಿಂದಿನ ಘಟನೆಗಳನ್ನು ನ್ಯಾಯ ಪೀಠದ ಮುಂದೆ ವಿವರಿಸಿದರು. ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವುದಾಗಿ ತಿಳಿಸಿತ್ತು. ಆದರೆ, ಮೊದಲ ವರ್ಷದ ಜಯಂತಿಯಲ್ಲಿಯೇ ಕೋಮುಗಲಭೆ ಜರುಗಿತು. ಆ ಗಲಭೆಯಲ್ಲಿ ಒಬ್ಬ ಅಮಾಯಕನೊಬ್ಬ ಮೃತಪಟ್ಟಿದ್ದ. ಎರಡನೇ ವರ್ಷದ ಜಯಂತಿಯನ್ನು ಪೊಲೀಸ್ ಭದ್ರತೆಯಲ್ಲೆ ನಡೆಸಲಾಯಿತು. ಅನೇಕ ಸಮಸ್ಯೆಗಳನ್ನ ಇಟ್ಟುಕೊಂಡು ಜಯಂತಿ ಆಚರಿಸಲಾಗುತ್ತಿರುವುದರಿಂದ ಪ್ರಸ್ತುತ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸುವ ಕುರಿತು ಆದೇಶಿಸಿದೆ ಎಂದು ಕೋರ್ಟ್​ಗೆ ಮಾಹಿತಿ ನೀಡಿದರು.

ವಾದ ಆಲಿಸಿದ ನ್ಯಾಯಮೂರ್ತಿ ಎ.ಎಸ್.ಓಕಾ, ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದಿರುವ ಟಿಪ್ಪು ಜಯಂತಿ ಆಚರಣೆ ಇದೇ ವರ್ಷ ಏಕೆ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಈ ಕುರಿತು​ ಸಮಗ್ರ ವಿವರಣೆ ಕೇಳಿರುವ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಮುಂದೂಡಿದ್ದಾರೆ.

Intro:Tippu Jayanthi twistBody:ರಾಜ್ಯದಲ್ಲಿ ಉಂಟಾಗಿರುವ ಟಿಪ್ಪು ಸುಲ್ತಾನ್ ಜಯಂತಿ ವಿವಾದಕ್ಕೆ, ಹೈ ಕೋರ್ಟ್ ಮಹತ್ವದ ತಿರುವು ನೀಡಿದೆ,

ಇಂದು‌ ಟಿಪ್ಪು ಸುಲ್ತಾನ್ ಜಯಂತಿ ಕುರಿತು ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಅಲಿ ಶಾ, ಟಿಪ್ಪುವಿನ ರಾಷ್ಟ್ರೀಯ ಸೇವಾ ಸಂಘ ಮತ್ತು ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ, ಎ.ಎಸ್ ಓಕಾ ನೇತೃತ್ವದ ವಿಭಾಗಿಯ ನ್ಯಾಯ ಪೀಠ ವಿಚಾರಣೆ ನೆಡೆಸಿದ್ದು.

ಸರ್ಕಾರದ ಪರ ವಾದಿಸಿದ ವಕೀಲ ಜನರಲ್ ಪ್ರಭುಲಿಂಗ್ ನಾವದಗಿ, ಟಿಪ್ಪು ಸುಲ್ತಾನ್ ಜಯಂತಿಯ ಹಿಂದಿನ ಘಟನೆಗಳನ್ಮು ನ್ಯಾಯ ಪೀಠದ ಮುಂದೆ ವಾದಿಸಿದ್ದು, ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವುದಾಗಿ ತಿಳಿಸಿತ್ತು, ಆದರೆ ಮೊದಲ ವರ್ಷದ ಜಯಂತಿಯಲ್ಲೆ ಕೋಮುಗಲಭೆ ಸೃಷ್ಟಿಸಿದೆ, ಆ ಗಲಭೆಯಲ್ಲಿ ಒಬ್ಬ ಅಮಾಯಕ ಸಾವನಪ್ಪಿದ್ದ, ಎರಡನೇ ವರ್ಷದ ಜಯಂತಿಯನ್ನು ಪೊಲೀಸ್ ಭದ್ರತೆಯಲ್ಲೆ ನಡೆಸಲಾಯಿತು, ಇಷ್ಟು ಸಮಸ್ಯೆಗಳಿಂದ ಜಯಂತಿ ಆಚರಿಸಲಾಗುತ್ತಿರುವುದರಿಂದ, ಪ್ರಸ್ತುತ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸುವ ಆದೇಶಿಸಿದೆ ಎಂದು ವಾದ ಮಂಡಿಸಿದ್ದಾರೆ.

ವಾದ ಆಲಿಸಿದ ನ್ಯಾಯಮೂರ್ತಿ ಎ.ಎಸ್ ಓಕಾ, 14 ಮತ್ತು 15 ನೇ ಅನುಚ್ಛೇದದ ಅನ್ವಯ ರದ್ದು ಗೊಳಿಸುವುದು ವಿರುದ್ಧವಾಗಿದೆ‌ ಎಂದು‌ ಅರ್ಜಿಯಲ್ಲಿ ತಿಳಿಸಲಾಗಿದೆ, ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದಿರುವ ಟಿಪ್ಪು ಜಯಂತಿ ಆಚರಣೆ ಇದೇ ವರ್ಷ ಏಕೆ ನಿಲ್ಲಿಸಿದ್ದೀರಿ, ಎಂದು ಜಯಂತಿ ರದ್ದುಗೊಳಿಸಿ ನೀಡಿರುವ ಆದೇಶ ಪ್ರಶ್ನಿಸಿದ್ದು, ವಿವರಣೆ ಕೇಳಿರುವ ನ್ಯಾಯಮೂರ್ತಿಗಳು, ವಿಚಾರಣೆ ಮುಂದೂಡಿದ್ದಾರೆConclusion:Use photos
ETV Bharat Logo

Copyright © 2025 Ushodaya Enterprises Pvt. Ltd., All Rights Reserved.