ಬೆಂಗಳೂರು: ನಟಿ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇದ್ದು, ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಸಾಂತ್ವನ ಕೇಂದ್ರದ ಗೇಟ್ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿ ಇದ್ದು, ಯಾರೂ ಜಮಾವಾಣೆಯಾಗದ ರೀತಿ ನೋಡಿಕೊಳ್ಳಲಾಗಿದೆ.
ನಿನ್ನೆ ರಾಗಿಣಿ ಸಿಸಿಬಿ ಕಚೇರಿಗೆ ಬಂದಾಗ ಕೆಲ ಅಭಿಮಾನಿಗಳು ಬಂದಿದ್ದರು. ಹಾಗಾಗಿ ಸಿಸಿಬಿ ಕಚೇರಿ ಬಳಿ ಹೈಡ್ರಾಮಾ ನಡೆದಿತ್ತು. ಇನ್ನು ಮುಂದಕ್ಕೆ ಆ ರೀತಿಯ ಬೆಳವಣಿಗೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಸದ್ಯ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ಟಿಫಿನ್ ಮಾಡಲಿದ್ದು, ನಂತರ 10:30ರ ಸುಮಾರಿಗೆ ಸಿಸಿಬಿ ಕಚೇರಿಗೆ ರಾಗಿಣಿಯನ್ನ ಕರೆದೊಯ್ಯಲು ಮಹಿಳಾ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಸಿಸಿಬಿ ಕಚೇರಿಯಲ್ಲಿ ಇಂದು ಹಿರಿಯಾಧಿಕಾರಿಗಳು ಸ್ಯಾಂಡಲ್ವುಡ್ಗಿರುವ ಡ್ರಗ್ ನಂಟಿನ ಕುರಿತು ನಟಿ ರಾಗಿಣಿ ಹಾಗೂ ಈಗಾಗಲೇ ಬಂಧಿತರಾಗಿರುವ ಆಪ್ತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಿದ್ದಾರೆ. ತುಪ್ಪದ ಹುಡುಗಿ ರಾಗಿಣಿ ಮೂರು ದಿನ ಸಿಸಿಬಿ ಕಸ್ಟಡಿಯಲ್ಲೇ ಇರಲಿದ್ದಾರೆ.