ETV Bharat / state

ಪಾಟಿ ಸವಾಲಿಗೆ ಅವಕಾಶ ನೀಡದೆ ಆರೋಪಿಯನ್ನ ಶಿಕ್ಷಿಸುವಂತಿಲ್ಲ : ಹೈಕೋರ್ಟ್​ - Patty challenge

ಕೆಲ ಪ್ರಕರಣಗಳಲ್ಲಿ ಆರೋಪಿ ಜೈಲಿನಲ್ಲಿದ್ದಾಗ, ಬಡನತದಲ್ಲಿದ್ದಾಗ ಆತನಿಗೆ ತನ್ನ ಪರ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯವೇ ಆರೋಪಿಗೆ ಉಚಿತ ಕಾನೂನು ಸೇವೆ ಸೌಲಭ್ಯ ಕಲ್ಪಿಸಿಕೊಡಬೇಕು..

dxasd
ಹೈಕೋರ್ಟ್​ ಮಹತ್ವದ ಆದೇಶ
author img

By

Published : Jan 9, 2021, 3:46 PM IST

ಬೆಂಗಳೂರು : ಪಾಟಿ ಸವಾಲಿಗೆ ಅವಕಾಶ ನೀಡದೇ ಶಿಕ್ಷೆ ವಿಧಿಸುವುದು ನ್ಯಾಯಸಮ್ಮತವಲ್ಲ ಎಂದಿರುವ ಹೈಕೋರ್ಟ್, ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.

2016ರಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಕ್ಸೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದ್ದ ನಗರದ 53ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಆರೋಪಿ ಗೋವಿಂದರಾಜು ಅಲಿಯಾಸ್ ಕುಟ್ಟಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ವಿಭಾಗೀಯ ಪೀಠ, ಆರೋಪಿಗೆ ಪಾಟಿ ಸವಾಲಿಗೆ ಅವಕಾಶ ನೀಡದೆ ಶಿಕ್ಷೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟು, ಶಿಕ್ಷೆ ರದ್ದುಪಡಿಸಿ ಆದೇಶಿಸಿದೆ. ಹಾಗೆಯೇ ಪ್ರಕರಣವನ್ನು 3 ತಿಂಗಳಲ್ಲಿ ಮರು ವಿಚಾರಣೆ ನಡೆಸಿ ನಿರ್ಧರಿಸುವಂತೆ ನಿರ್ದೇಶಿಸಿದೆ.

ಆರೋಪಿಗೆ ಆತನನ್ನು ಸಮರ್ಥಿಸಿಕೊಳ್ಳಲು, ಕಾನೂನು ಸೇವೆ ಬಳಸಿಕೊಳ್ಳಲು ಅವಕಾಶ ನೀಡದೇ ಆದೇಶಗಳನ್ನು ನೀಡುವುದು ಸಂವಿಧಾನದ ವಿಧಿ 21, 22 ಹಾಗೂ 39ಎ ನಿಯಮಗಳ ಉಲ್ಲಂಘನೆಯಾಗುತ್ತದೆ.

ಕೆಲ ಪ್ರಕರಣಗಳಲ್ಲಿ ಆರೋಪಿ ಜೈಲಿನಲ್ಲಿದ್ದಾಗ, ಬಡನತದಲ್ಲಿದ್ದಾಗ ಆತನಿಗೆ ತನ್ನ ಪರ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯವೇ ಆರೋಪಿಗೆ ಉಚಿತ ಕಾನೂನು ಸೇವೆ ಸೌಲಭ್ಯ ಕಲ್ಪಿಸಿಕೊಡಬೇಕು.

ಆದರೆ, ಈ ಪ್ರಕರಣದಲ್ಲಿಯೂ ಆರೋಪಿ ಪರ ವಕೀಲರು ವಿಚಾರಣೆ ಸಂದರ್ಭದಲ್ಲಿ ಗೈರು ಹಾಜರಾಗಿ, ಪ್ರಾಸಿಕ್ಯೂಷನ್ನಿನ ಸಾಕ್ಷಿಗಳನ್ನು ಪಾಟಿ ಸವಾಲಿಗೆ ಒಳಪಡಿಸದೇ ಇದ್ದರೂ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿರುವುದು ಸರಿ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.