ETV Bharat / state

ಮಗುವಿನ ಬೆಳವಣಿಗೆಗೆ ತಾತ ಅಜ್ಜಿಯ ಪ್ರೀತಿ ಅತ್ಯಗತ್ಯ, ಒಬ್ಬಂಟಿ ತಂದೆಯಿಂದ ಅದು ಸಿಗಲ್ಲ: ಹೈಕೋರ್ಟ್ ಅಭಿಪ್ರಾಯ - ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಮಗು ತಾಯಿ ಮತ್ತು ಅಜ್ಜ - ಅಜ್ಜಿಯೊಂದಿಗೆ ನೆಲೆಸಿದೆ. ಪತ್ನಿ ಮಗುವನ್ನು ನೋಡಿಕೊಳ್ಳಲು ಸೂಕ್ತರಾಗಿಲ್ಲ ಎಂಬ ಬಗ್ಗೆ ಪತಿ ಯಾವುದೇ ಆಕ್ಷೇಪ ಮಾಡಿಲ್ಲ. ತಾತ ಮತ್ತು ಅಜ್ಜಿಯ ಪ್ರೀತಿ ಮತ್ತು ವಾತ್ಸಲ್ಯವು ಮಗುವಿನ ಉತ್ತಮ ಮತ್ತು ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

highcourt
ಹೈಕೋರ್ಟ್​
author img

By

Published : Mar 13, 2023, 8:58 PM IST

ಬೆಂಗಳೂರು: ಮಾಹಿತಿ ನೀಡದೆ ಪತ್ನಿಯೊಬ್ಬರು ಮಗುವನ್ನು ಭಾರತಕ್ಕೆ ಕರೆತಂದಿರುವ ಕ್ರಮ ಪ್ರಶ್ನಿಸಿ ಪತಿಯೊಬ್ಬರು ತನ್ನ ಮಗುವನ್ನು ಹಿಂದಿರುಗಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ರದ್ದು ಪಡಿಸಿ ಆದೇಶಿಸಿದೆ. ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಶಂಕರ್ ವಿಶ್ವನಾಥನ್ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯ್​ಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಮಗು ತಾಯಿ ಮತ್ತು ಅಜ್ಜ-ಅಜ್ಜಿಯೊಂದಿಗೆ ನೆಲೆಸಿದೆ. ಪತ್ನಿ ಮಗುವನ್ನು ನೋಡಿಕೊಳ್ಳಲು ಸೂಕ್ತರಾಗಿಲ್ಲ ಎಂಬ ಬಗ್ಗೆ ಪತಿ ಯಾವುದೇ ಆಕ್ಷೇಪ ಮಾಡಿಲ್ಲ. ತಾತ ಮತ್ತು ಅಜ್ಜಿಯ ಪ್ರೀತಿ ಮತ್ತು ವಾತ್ಸಲ್ಯವು ಮಗುವಿನ ಉತ್ತಮ ಮತ್ತು ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಇದು ಜರ್ಮನಿಯಲ್ಲಿ ಕೆಲಸ ಮಾಡುತ್ತಾ, ಒಬ್ಬಂಟಿಯಾಗಿ ನೆಲೆಸಿರುವ ತಂದೆಯಿಂದ ಸಿಗುವುದಿಲ್ಲ. ಹಾಗಾಗಿ, ಈ ಹಂತದಲ್ಲಿ ಪತ್ನಿ ಜರ್ಮಿನಗೆ ತೆರಳಲು ಸೂಚಿಸಿದರೆ, ಮಗುವಿನ ವಾತಾವರಣ ದಿಢೀರ್ ಬದಲಾಗಲಿದೆ. ಮಗುವಿನ ದಿನನಿತ್ಯದ ಚಟುವಟಿಕೆ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಮಗುವನ್ನು ಜರ್ಮಿನ್​ಗೆ ಕಳುಹಿಸಿಕೊಡಲು ಅರ್ಜಿದಾರರ ಪತ್ನಿಗೆ ನಿರ್ದೇಶಿಸಲು ಸಾಧ್ಯವಿಲ್ಲ.

ಅಲ್ಲದೆ, ಪ್ರಕರಣದಲ್ಲಿ ಶಂಕರ್ ಅವರ ಪುತ್ರನನ್ನು ಪತ್ನಿ ರಮ್ಯಾ ಅವರ ಮಧ್ಯಂತರ ಸುಪರ್ದಿಗೆ ನೀಡಿ 2017ರ ಜೂ.8ರಂದು ಬೆಂಗಳೂರಿನ 4ನೇ ಕೌಟುಂಬಿಕ ನ್ಯಾಯಾಲಯವು ಆದೇಶ ಮಾಡಿದೆ. ಈ ಆದೇಶವು ಇಂದಿಗೂ ಜಾರಿಯಲ್ಲಿದೆ. ಹಾಗೆಯೇ, ಜರ್ಮನಿ ನ್ಯಾಯಾಲಯದಲ್ಲಿ ಮಗುವಿನ ಸುಪರ್ದಿ ವ್ಯಾಜ್ಯವನ್ನು ಭಾರತದ ನ್ಯಾಯಾಲಯಕ್ಕೆ ಮುಂದುವರಿಸುವುದಾಗಿ ಪತಿ-ಪತ್ನಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು? ಶಂಕರ್ ಮತ್ತು ಪತ್ನಿ ರಮ್ಯಾ 2013ರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯ ನಂತರ ರಮ್ಯಾ ಪತಿಯೊಂದಿಗೆ ಜರ್ಮನಿಗೆ ತೆರಳಿ ಅಲ್ಲೇ ನೆಲೆಸಿದ್ದರು. 2016ರ ಅ.21ರಂದು ದಂಪತಿಗೆ ಜರ್ಮನಿಯಲ್ಲೇ ಗಂಡು ಮಗು ಜನಿಸಿತ್ತು. ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆಯಲ್ಲಿ 2017ರ ಮೇ 16ರಂದು ಮಗನೊಂದಿಗೆ ರಮ್ಯಾ ಬೆಂಗಳೂರಿಗೆ ಬಂದಿದ್ದರು. ನಂತರ ಶಂಕರ್ 2017ರ ಮೇ 17ರಂದು ಜರ್ಮನಿಯ ಸ್ಥಳೀಯ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿ, ಮಗುವನ್ನು ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿದ್ದರು. ಇದಾದ ನಂಂತರ ಜರ್ಮನಿ ನ್ಯಾಯಾಲಯವು ಮಗನನ್ನು ಶಂಕರ್ ಸುಪರ್ದಿಗೆ ನೀಡಿತ್ತು. ಜೊತೆಗೆ, ಮಗನನ್ನು ಜರ್ಮಿನಿ ಗಡಿಯಿಂದ ಹೊರಗಡೆ ಕರೆದೊಯ್ಯಬಾರದು ಎಂದು ನಿರ್ದೇಶಿಸಿ 2017ರ ಮೇ 17ರಂದು ಆದೇಶಿಸಿತ್ತು. ಆದರೆ, ಅಷ್ಟೊತ್ತಿಗಾಗಲೇ ರಮ್ಯಾ ಮಗನನ್ನು ಭಾರತಕ್ಕೆ ಕರೆತಂದಿದ್ದರು.

ನಂತರ 2017ರ ಜೂ.1ರಂದು ಜರ್ಮನಿ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ ಪತಿ, ಪತ್ನಿ ಭಾರತದಲ್ಲಿ ನೆಲೆಸಿದ್ದಾರೆ. ಆ ಮೂಲಕ 2017ರ ಮೇ 17ರಂದು ಹೊರಡಿಸಿದ ಆದೇಶವನ್ನು ಉಲ್ಲಂಘಿಸಲಾಗಿದೆ. ಮಗನ ವೀಸಾ ಅವಧಿ ಸಹ ಎರಡು ತಿಂಗಳಲ್ಲಿ ಮುಕ್ತಾಯವಾಗಲಿದೆ. ಮಗವನ್ನು ಜರ್ಮಿಗೆ ಕರೆತರಲು ಪತ್ನಿಗೆ ಆದೇಶಿಸುವಂತೆ ಕೋರಿದ್ದರು. ಈ ಮಧ್ಯೆ 2016ರ ಜೂ.1ರಂದು ಪತ್ನಿಯು ಮಗನ ವೀಸಾವನ್ನು ಭಾರತದಲ್ಲಿ ನೆಲೆಸುವುದಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಯಿಂದ ಪರಿವರ್ತಿಸಿಕೊಂಡಿದ್ದರು.

ಇದಾದ ಬಳಿಕ 2017ರ ಜೂ.7ರಂದು ವಿವಾಹ ವಿಚ್ಛೇದನ ಮಂಜೂರಾತಿಗೆ ಮತ್ತು ಶಾಶ್ವತ ಜೀವನಾಂಶವಾಗಿ 4 ಕೋಟಿ ರೂ. ನೀಡಲು ಪತಿಗೆ ಆದೇಶಿಸುವಂತೆ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಪೋಷಕರು ಮತ್ತು ಪಾಲಕರ ಕಾಯ್ದೆಯಡಿ 2017ರ ಜೂ.13ರಂದು ಮತ್ತೊಂದು ಅರ್ಜಿ ಸಲ್ಲಿಸಿ, ತಾಯಿಯೇ ಮಗುವಿನ ನೈಸರ್ಗಿಕ ಪೋಷಕರು ಎಂಬುದಾಗಿ ಘೊಷಿಸಬೇಕು. ಮಗನನ್ನು ತನ್ನ ಸುಪರ್ದಿಯಲ್ಲಿಯೇ ಇರಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು.

ನಂತರ 2017ರ ನ.7ರಂದು ರಮ್ಯಾ ಅವರು ಜರ್ಮನಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಮಗುವಿನ ಸುಪರ್ದಿ ವ್ಯಾಜ್ಯವನ್ನು ಭಾರತದಲ್ಲಿ ಮುಂದುವರಿಸುವುದಕ್ಕೆ ರಮ್ಯಾ ಮತ್ತು ಶಂಕರ್ ಒಪ್ಪಿದ್ದರು. ಇದಾದ ನಂತರ 2017ರ ನ.13ರಿಂದ 2019ರ ಜ.28ರವರೆಗೆ ಅರ್ಜಿದಾರರು ಮಗನ ಭೇಟಿ ಹಕ್ಕುಕೋರಿ ಅರ್ಜಿ ಸಲ್ಲಿಸಿದ್ದರು. 2022ರ ಮೇ 27ರಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತನ್ನ ಅನುಮತಿ ಹಾಗೂ ಒಪ್ಪಿಗೆ ಪಡೆಯದೇ ಪತ್ನಿಯು ಮಗನನ್ನು ಭಾರತಕ್ಕೆ ಕರೆತಂದಿದ್ದಾರೆ. ಮಗನು ಜರ್ಮನಿ ಪ್ರಜೆಯಾಗಿರುವುದರಿಂದ ಆತನ ಬೆಳವಣಿಗೆ ಜರ್ಮನಿ ವ್ಯವಸ್ಥೆಯಲ್ಲಿ ಉತ್ತಮವಾಗಿರುತ್ತದೆ. ಹಾಗಾಗಿ, ಮಗನನ್ನು ಜರ್ಮಿನಿಗೆ ಕಳುಹಿಸಿಕೊಡಲು ಪತ್ನಿಗೆ ಆದೇಶಿಸುವಂತೆ ಕೋರಿದ್ದರು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತ್ನಿಯು ಮಗುವನ್ನು ತಾನು ಅಕ್ರಮವಾಗಿ ವಶದಲ್ಲಿ ಇಟ್ಟುಕೊಂಡಿಲ್ಲ. ಬೆಂಗಳೂರಿನ 4ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯವು 2017ರ ಜೂ.8ರಂದು ಮಗುವನ್ನು ತನ್ನ ಸುಪರ್ದಿಗೆ ನೀಡಿ ಮಧ್ಯಂತರ ಆದೇಶ ಮಾಡಿದೆ. ಅಲ್ಲದೇ, ಶಂಕರ್ (ಮಗುವಿನ ತಂದೆ) ಅಥವಾ ಅವರ ಏಜೆಂಟ್ ಮಗುವಿನ 500 ಮೀಟರ್ ಸಮೀಪಕ್ಕೆ ಬರಬಾರದು ಎಂದು ನಿರ್ಬಂಧ ಹೇರಿದೆ. ಮಗುವಿನ ಸುಪರ್ದಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು. ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡಲಾಗಿದೆ. ಮಗುವನ ಸುಪರ್ದಿ ವಿಚಾರಣೆಯನ್ನು ನಿರ್ಧರಿಸಲು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವೇ ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಮದುವೆ ಭರವಸೆ ನೀಡಿ ಐದು ವರ್ಷ ಲೈಂಗಿಕ ಸಂಪರ್ಕ ಆರೋಪ: ಅತ್ಯಾಚಾರ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.