ಬೆಂಗಳೂರು : ಮೆಟ್ರೋ ರೈಲು ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂದು ಬಿಎಂಆರ್ಸಿಎಲ್ಗೆ ಪ್ರಶ್ನಿಸಿರುವ ಹೈಕೋರ್ಟ್ ಈ ಸಂಬಂಧ ಐಐಟಿ ಅಥವಾ ಐಐಎಂನಿಂದ ವರದಿ ಪಡೆದುಕೊಳ್ಳುವ ವಿಚಾರವಾಗಿ ನಿಲುವು ತಿಳಿಸುವಂತೆ ಮೆಟ್ರೋ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.
ಇದನ್ನೂ ಓದಿ: ದಿನಗೂಲಿ ನೌಕರರು, ಬ್ಯಾಂಕ್ ಖಾತೆ ಇಲ್ಲದ ಪ್ರಯಾಣಿಕರಿಗೆ ಸಮಸ್ಯೆಯಾದ ಮೆಟ್ರೋ ಪ್ರಯಾಣ
ಮೆಟ್ರೋ ರೈಲು ಯೋಜನೆ ಹಂತ 1 ಮತ್ತು ಹಂತ 2 ನುಷ್ಠಾನಗೊಳಿಸುವಾಗ ಬಿಎಂಆರ್ಸಿಎಲ್ ಕೇಂದ್ರ ವಿಧಿಸಿದ್ದ ಕಾಂಪ್ರಹೆನ್ಸಿವ್ ಮೊಬಿಲಿಟಿ ಪ್ಲಾನ್ (ಸಿಎಂಪಿ) ಹಾಗೂ ಇಂಟಿಗ್ರೇಟೆಡ್ ಟ್ರಾಫಿಕ್ ರೇಷಿಯೋ ರೊಟೇಷನಲೈಸೇಶನ್ ಪ್ಲಾನ್(ಐಟಿಆರ್ಆರ್ಪಿ)ಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ನಗರದ ಡಿಟಿ ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಅಡ್ಡದಾರಿ ಹಿಡಿದ ಚಾಲಕ.. ಮೆಟ್ರೋ ನಿಲ್ದಾಣದ ಅಂಡರ್ಪಾಸ್ನಲ್ಲಿ ಸಿಲುಕಿದ್ದ ವಾಹನ ತೆರವು
ವಿಚಾರಣೆ ವೇಳೆ ಷರತ್ತುಗಳನ್ನು ಪಾಲಿಸಿರುವ ಕುರಿತು ಬಿಎಂಆರ್ಸಿಎಲ್ ಸ್ಪಷ್ಟನೆ ನೀಡದ ಕುರಿತು ಬೇಸರ ವ್ಯಕ್ತಪಡಿಸಿದ ಪೀಠ, ಷರತ್ತುಗಳನ್ನು ಪಾಲಿಸಿರುವ ಕುರಿತು ಪರಿಶೀಲಿಸಿ ವರದಿ ನೀಡಲು ಐಐಟಿ ಅಥವಾ ಐಐಎಂ ಸಂಸ್ಥೆಗಳನ್ನು ನಿಯೋಜಿಸಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸುವಂತೆ ಮೆಟ್ರೋ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.