ETV Bharat / state

ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಕ್ರಿಯಾ ಯೋಜನೆ ಸಲ್ಲಿಸಿ: ಹೈಕೋರ್ಟ್ - High Court notice to Govt

ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಒತ್ತುವರಿ ಸಮೀಕ್ಷೆ ನಡೆಸಿ, ತೆರವುಗೊಳಿಸುವ ಕ್ರಿಯಾ ಯೋಜನೆ ಹಾಗೂ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಸೂಚಿಸಿದೆ.

high-court-notice-to-govt
ಹೈಕೋರ್ಟ್
author img

By

Published : Jun 2, 2021, 10:29 PM IST

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಒತ್ತುವರಿ ಸಮೀಕ್ಷೆ ನಡೆಸಿ, ತೆರವುಗೊಳಿಸುವ ಕ್ರಿಯಾ ಯೋಜನೆ ಸಲ್ಲಿಸುವಂತೆ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶದ ಅನುಪಾಲನಾ ವರದಿಯನ್ನು ಮುಂದಿನ ಆರು ವಾರಗಳಲ್ಲಿ ಸಲ್ಲಿಸುವಂತೆ ಹೈಕೋರ್ಟ್, ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿದೆ.

ರಾಜಕಾಲುವೆಗಳ ಒತ್ತುವರೆ ತೆರವು ಸಂಬಂಧ ಸಿಟಿಜನ್ ಆ್ಯಕ್ಷನ್ ಗ್ರೂಪ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನ್ಯಾಯಾಲಯ 2019ರ ಜೂ.18ರಂದು ರಾಜಕಾಲುವೆ ಒತ್ತುವರಿ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಹಾಗೂ ಪಾಲಿಕೆಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶ ನೀಡಿ ಎರಡು ವರ್ಷ ಕಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಅರ್ಜಿದಾರರ ಪರ ಮತ್ತೋರ್ವ ವಕೀಲ ಜಿ.ಆರ್. ಮೋಹನ್ ವಾದಿಸಿ, ಮುಂಗಾರು ಮಳೆ ಸಮೀಪಿಸುತ್ತಿದೆ. ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ. ಆದರೆ, ಪಾಲಿಕೆ ನ್ಯಾಯಾಲಯದ ಆದೇಶವನ್ನೇ ಪಾಲಿಸಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜಕಾಲುವೆಗಳ ಒತ್ತುವರಿ ಸಮೀಕ್ಷೆ ನಡೆಸುವ ಮತ್ತು ಒತ್ತುವರಿಯನ್ನು ತೆರವುಗೊಳಿಸಲು ಹಾಗೂ ಮುಂದಿನ ದಿನಗಳಲ್ಲಿ ಮತ್ತೆ ಒತ್ತುವರಿ ಆಗದಂತೆ ನೋಡಿಕೊಳ್ಳುವ ಕ್ರಿಯಾ ಯೋಜನೆಯನ್ನು ಆರು ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಪಾಲಿಕೆ ಪ್ರಮಾಣ ಪತ್ರ
ಬಿಬಿಎಂಪಿ ಮುಖ್ಯ ಇಂಜಿನಿಯರ್ ನಗರದ ಅರೆಹಳ್ಳಿ, ಕಾಮಾಕ್ಷಿಪಾಳ್ಯ ಮತ್ತು ತಾವರೆಕೆರೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಪ್ರಮಾಣ ಪತ್ರ ಪರಿಶೀಲಿಸಿದ ಪೀಠ ಅಚ್ಚರಿ ವ್ಯಕ್ತಪಡಿಸಿತು. ನ್ಯಾಯಾಲಯದ ನಿರ್ದೇಶದನಂತೆ ನೀರಿ ಸಂಸ್ಥೆ ಈ ಮೂರು ಕೆರೆಗಳ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ಏ.15ರಂದು ತನ್ನ ವರದಿ ಸಲ್ಲಿಸಿದೆ. ನಂತರದ ನಾಲ್ಕು ದಿನಗಳಲ್ಲೇ ಪ್ರಮಾಣಪತ್ರ ಸಲ್ಲಿಸಿರುವ ಪಾಲಿಕೆ, ಮಾ.31ರಂದು ಕೆರೆಯೊಂದರ ಅಭಿವೃದ್ಧಿ ಸಂಬಂಧ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಟೆಂಡರ್ ಕರೆದು, ಅದಕ್ಕಾಗಿ ಹಣ ಮೀಸಲಿಟ್ಟಿದ್ದೇವೆ ಎಂದು ಹೇಳಿದೆ.

ನೀರಿ ಏನು ವರದಿ ನೀಡುತ್ತದೆ ಎಂಬುದು ಪಾಲಿಕೆಗೆ ಮೊದಲೇ ತಿಳಿದಿತ್ತೇ? ಎಂದು ಪೀಠ ಖಾರವಾಗಿ ಪ್ರಶ್ನಿಸಿತು.
ಅಲ್ಲದೆ, ನೀರಿ ವರದಿ ಪರಿಶೀಲಿಸದೇ ಪ್ರಮಾಣಪತ್ರ ಹೇಗೆ ಸಲ್ಲಿಸಿದಿರಿ ಎಂಬ ಬಗ್ಗೆ ಪಾಲಿಕೆ ವಿವರಣೆ ನೀಡಬೇಕು ಎಂದ ಪೀಠ, ಪಾಲಿಕೆಯ ಇಂತಹ ಕ್ರಮಗಳಿಂದ ಸಾರ್ವಜನಿಕ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲವೇ, ಬಿಬಿಎಂಪಿಯಲ್ಲಿ ನೀರಿ ಸಂಸ್ಥೆಗಿಂತಲೂ ಪರಿಣಿತರಿದ್ದಾರೆಯೇ, ಹಾಗಿದ್ದರೆ ಕೋರ್ಟ್ ನೀರಿಯ ತಜ್ಞರನ್ನು ಏಕೆ ನೇಮಿಸಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿತು.

ಪಾಲಿಕೆ ವಕೀಲರು ನೀಡಿದ ಸಮಜಾಯಿಷಿ ಒಪ್ಪದ ಪೀಠ ಹೊಸದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿ, ಜೂನ್ 15ಕ್ಕೆ ವಿಚಾರಣೆ ಮುಂದೂಡಿತು. ಇದೇ ವೇಳೆ, ಈ ಮೂರು ಕೆರೆಗಳ ರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ನೀರಿ ಸಲ್ಲಿಸಿರುವ ವರದಿ ಅಧ್ಯಯನ ಮಾಡಿ ಅರ್ಜಿದಾರರು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಿತು.

ಕೆ.ಆರ್. ಪುರಂ ಕೆರೆ ಸಮೀಕ್ಷೆ
ಅರ್ಜಿದಾರ ಲಿಯೋ ಸಲ್ಡಾನಾ ಕೆ.ಆರ್ ಪುರ ಕೆರೆ ಒತ್ತುವರಿ ತೆರವು ಕೋರಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದ ಆದೇಶದಂತೆ ಸಮೀಕ್ಷೆಯನ್ನೂ ನಡೆಸಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬೆಂಗಳೂರು ಗ್ರಾಮಾಂತರ ಡಿಸಿ ಕೆರೆ ಮತ್ತು ಬಫರ್ ಜೋನ್ ಸಮೀಕ್ಷೆ ನಡೆಸಿ, ಒತ್ತುವರಿಯಾಗಿದ್ದಲ್ಲಿ ಕೂಡಲೇ ಕಾನೂನು ಪ್ರಕಾರ ತೆರವುಗೊಳಿಸಬೇಕು ಎಂದು ಆದೇಶಿಸಿತು. ಹಾಗೆಯೇ, ಸುಬ್ರಮಣ್ಯ ಪುರ ಕೆರೆ ಸಮೀಕ್ಷಾ ಕಾರ್ಯವನ್ನೂ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.