ETV Bharat / state

ವಿಲ್ಸನ್ ಗಾರ್ಡನ್‌ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ, ಸಮಗ್ರ ವರದಿ ನೀಡಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ - ಜನವಸತಿ ಪ್ರದೇಶಗಳಲ್ಲಿಅನಧಿಕೃತವಾಗಿ ವ್ಯಾಪಾರ

ಬಿಬಿಎಂಪಿ ವ್ಯಾಪ್ತಿ ಜನವಸತಿ ಪ್ರದೇಶಗಳಲ್ಲಿಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ವಾಣಿಜ್ಯ ಮಳಿಗೆಗಳ ಬಗ್ಗೆ ಮುಂದಿನ 8 ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ. ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಅರ್ಜಿಯಲ್ಲಿ ಕೋರಿತು.

banglore high court
ಬೆಂಗಳೂರು ಹೈಕೋರ್ಟ್​
author img

By

Published : Oct 22, 2022, 10:36 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿ ಜನವಸತಿ ಪ್ರದೇಶಗಳಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ವಾಣಿಜ್ಯ ಮಳಿಗೆಗಳ ಬಗ್ಗೆ ಮುಂದಿನ 8 ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.

ನಗರದ ವಿಲ್ಸನ್ ಗಾರ್ಡನ್‌ನ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಂಕೆಂದು ಕೋರಿ ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.

ಅಲ್ಲದೆ, ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಪ್ರತ್ಯೇಕ ನಿಯಮಗಳಿವೆಯೇ ಅಥವಾ ಸಂಪೂರ್ಣ ನಿಷೇಧವಿದೆಯೇ ? ಷರತ್ತುಬದ್ಧ ಅನುಮತಿ ನೀಡಲು ಅವಕಾಶವಿದೆಯೇ, ಒಂದು ವೇಳೆ ಷರತ್ತುಬದ್ಧ ಅನುಮತಿ ನೀಡಲು ಅವಕಾಶವಿದ್ದಲ್ಲಿ, ಯಾವೆಲ್ಲ ಷರತ್ತುಗಳನ್ನು ವಿಧಿಸಲಾಗುತ್ತದೆ. ಒಂದೊಮ್ಮೆ ಅಂಥ ಷರತ್ತುಗಳನ್ನು ಉಲ್ಲಂಘಿಸಿದವರು ವಿರುದ್ಧ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗಿದೆಯೇ ಎಂಬ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಜತೆಗೆ, ವಿಲ್ಸನ್‌ಗಾರ್ಡನ್‌ನ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವವರು, ಹೂವಿನ ವ್ಯಾಪಾರಿಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ಏನು ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ತಿಳಿಸಬೇಕು ಎಂದು ಸೂಚನೆಯಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು? - 143 ಮಳಿಗೆ, 8ಕ್ಕೆ ಬಿಬಿಎಂಪಿ ಅನುಮತಿ: ವಿಲ್ಸನ್ ಗಾರ್ಡನ್‌ನಲ್ಲಿ ಅಂದಾಜು 14 ಅಡ್ಡ ರಸ್ತೆಗಳು ಇವೆ. 4 ವರ್ಷಗಳಿಂದೀಚೆಗೆ ಬಹುತೇಕ ಎಲ್ಲ ರಸ್ತೆಗಳಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಅಲ್ಲಿ 143 ಮಳಿಗೆಗಳಿದ್ದು, ಅವುಗಳಲ್ಲಿ 8ಕ್ಕೆ ಮಾತ್ರ ಬಿಬಿಎಂಪಿ ಅನುಮತಿ ನೀಡಿದೆ.

ರಸ್ತೆಯ ಎರಡೂ ಬದಿಗಳಲ್ಲಿ ಅನಧಿಕೃತವಾಗಿ ಹೂ ಹಾಗೂ ದ್ರಾಕ್ಷಿ ಅಂಗಡಿ, ಟ್ಯಾಕ್ಸಿ ಕಚೇರಿಗಳನ್ನು ತೆರೆಯಲಾಗಿದೆ. ಚಾಲಕರು ಟ್ಯಾಕ್ಸಿಗಳನ್ನು ಮನೆಗಳ ಎದುರು ನಿಲ್ಲಿಸುತ್ತಿದ್ದಾರೆ. ಟ್ಯಾಕ್ಸಿಯಲ್ಲೇ ಮದ್ಯಪಾನ ಮಾಡುತ್ತ, ಇಸ್ಪೀಟು ಆಡುತ್ತಾರೆ ಎಂದು ಅರ್ಜಿಯಲ್ಲಿ ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಆಪಾದಿಸಿದೆ.

ಮಹಿಳೆಯರಿಗೆ ಕಾಡುತ್ತಿದೆ ಅಸುರಕ್ಷತೆ: ರಸ್ತೆಯಲ್ಲಿಯೇ ಅಂಗಡಿಗೆ ಸಂಬಂಧಿಸಿದ ವಸ್ತುಗಳನ್ನು ಇಡಲಾಗಿರುತ್ತಿದೆ. ತಡರಾತ್ರಿಯಾದರೂ ಮಳಿಗೆದಾರರು ಹಾಗೂ ಗ್ರಾಹಕರು ಇರುತ್ತಾರೆ. ಇದರಿಂದ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಮಹಿಳೆಯರು ಹಾಗೂ ಯುವತಿಯರು ಭಯದಿಂದ ಸಂಚರಿಸಬೇಕಿದೆ. ಮಹಿಳೆಯರಿಗೆ ಇಲ್ಲಿ ಅಸುರಕ್ಷತೆ ಕಾಡುತ್ತಿದೆ.

ಹೀಗಾಗಿ ಇಲ್ಲಿನ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಬೇಕು. ಇಲ್ಲವೇ ತೆರವಿಗೆ ವಿಫಲರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಬೇಕೆಂದು ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಅರ್ಜಿಯಲ್ಲಿ ಕೋರಿತು.

ಇದನ್ನು ಓದಿ:ಉಪಕುಲಪತಿ ಹುದ್ದೆ 40-50 ಕೋಟಿಗೆ ಮಾರಾಟ ಮಾಡಲಾಗಿದೆ; ಪಂಜಾಬ್​ ರಾಜ್ಯಪಾಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.