ETV Bharat / state

ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್​​ಟಾಪ್ ವಿತರಣೆ ಬಾಕಿ ವಿಚಾರ: ಸಮಗ್ರ ವರದಿ ಕೇಳಿದ ಹೈಕೋರ್ಟ್

author img

By

Published : Dec 2, 2020, 8:33 PM IST

ಅಂಧ ವಿದ್ಯಾರ್ಥಿಗಳಿಗೆ ಕಳೆದ 2 ವರ್ಷಗಳಿಂದ ಉಚಿತ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಿಲ್ಲ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಬಗ್ಗೆ ಸಮಗ್ರ ವರದಿ ನೀಡಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿತು.

High Court heard a comprehensive report about free Talking Laptop
ಹೈಕೋರ್ಟ್

ಬೆಂಗಳೂರು: ರಾಜ್ಯದ ಅಂಧ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಟಾಕಿಂಗ್ ಲ್ಯಾಪ್‌ ಟಾಪ್ ವಿತರಿಸಲು ಸರ್ಕಾರ ರೂಪಿಸಿರುವ ನೀತಿ ನಿಮಯಗಳು ಯಾವವು ಹಾಗೂ ಎರಡು ವರ್ಷಗಳಿಂದ ಲ್ಯಾಪ್ ಟಾಪ್​ಗಳನ್ನೇಕೆ ವಿತರಿಸಿಲ್ಲ ಎಂಬುದರ ಕುರಿತು ಜನವರಿ 8ರೊಳಗೆ ಸಮಗ್ರ ಮಾಹಿತಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಅಂಧ ವಿದ್ಯಾರ್ಥಿಗಳಿಗೆ ಕಳೆದ 2 ವರ್ಷಗಳಿಂದ ಉಚಿತ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಿಲ್ಲ ಎಂದು ಆರೋಪಿಸಿ ನಗರದ ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ವಾದಿಸಿ, ಸರ್ಕಾರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿಲ್ಲ. ಉಚಿತ ಲ್ಯಾಪ್ ಟಾಪ್ ಹಂಚುವ ಕುರಿತು ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನೂ ತಿಳಿಸಿಲ್ಲ ಎಂದರು.

ಇದನ್ನೂ ಓದಿ: ಟಾಕಿಂಗ್ ಲ್ಯಾಪ್​​ಟಾಪ್ ನೀಡದ ವಿಚಾರ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಸರ್ಕಾರದ ಪರ ವಕೀಲರು ವಾದಿಸಿ, ಕಾರಣಾಂತರಗಳಿಂದ ಕಳೆದ ವರ್ಷ ಲ್ಯಾಪ್ ಟಾಪ್ ನೀಡಲು ಸಾಧ್ಯವಾಗಿಲ್ಲ. ಇದೀಗ ಸರ್ಕಾರ ಲ್ಯಾಪ್ ಟಾಪ್ ಹಂಚಿಕೆಗೆ ಟೆಂಡರ್ ಕರೆದಿದೆ. ಸದ್ಯದಲ್ಲೇ ಎರಡೂ ವರ್ಷಗಳ ಲ್ಯಾಪ್ ಟಾಪ್​​ಗಳನ್ನು ಒಟ್ಟಿಗೆ ವಿತರಿಸಲಾಗುವುದು ಎಂದರು.

ಮಧ್ಯಪ್ರವೇಶಿಸಿದ ಪೀಠ, ಈ ಟಾಕಿಂಗ್ ಲ್ಯಾಪ್‌ಟಾಪ್​​ಗಳ ವಿತರಣೆ ಸಂಬಂಧ ಯಾವ ನೀತಿಯನ್ನು ಸರ್ಕಾರ ಪಾಲನೆ ಮಾಡುತ್ತಿದೆ? ಹಂಚಿಕೆಗೆ ಯಾವ ನಿಯಮಗಳಿವೆ? ಮಾನದಂಡಗಳೇನು? ಸದ್ಯ ಬಾಕಿ ಇರುವ ಲ್ಯಾಪ್ ಟಾಪ್​​ಗಳನ್ನು ವಿತರಿಸಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂಬುದರ ಸಮಗ್ರ ವರದಿ ನೀಡಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.