ETV Bharat / state

ವಿಚ್ಛೇದನ ಬಳಿಕ 8 ವರ್ಷ ನೋಡಲು ಬಾರದ ತಂದೆ: ಮಗುವಿನೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಲು ತಾಯಿಗೆ ಅನುಮತಿಸಿದ ಹೈಕೋರ್ಟ್

author img

By

Published : Jan 28, 2023, 3:07 PM IST

ಮೊದಲ ಪತಿಯಿಂದ ವಿಚ್ಛೇದನ ಪಡೆದ ಪತ್ನಿ ಎರಡನೇ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್​ ಅನುಮತಿ ನೀಡಿದೆ.

high-court-granted-permission-to-live-abroad
ಹೈಕೋರ್ಟ್

ಬೆಂಗಳೂರು: ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ತಂದೆಯಾದವರು ಮಗುವನ್ನು ಭೇಟಿ ಮಾಡಲು ಮುಂದಾಗಿರಲಿಲ್ಲ. ಅಷ್ಟೇ ಏಕೆ ಈ ಸಂಬಂಧ ದಾಖಲಾದ ಪ್ರಕರಣದ ವಿಚಾರವಾಗಿ ಕೋರ್ಟ್​​ಗೂ ಹಾಜರಾಗದ ಕಾರಣ ಮಗುವಿನೊಂದಿಗೆ ತಾಯಿ ಆಸ್ಟ್ರೇಲಿಯಾದಲ್ಲಿ ನೆಲೆಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ. ವಿಚ್ಛೇದನದ ಬಳಿಕ ಎರಡನೇ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ತಾನು ಮತ್ತು ತನ್ನ ಮಗುವಿಗೆ ಅಲ್ಲಿಯೇ ನೆಲೆಸಲು ಶಾಶ್ವತ ವಿಸಾ ಪಡೆಯಲು ಅನಮತಿಸುವಂತೆ ಕೋರಿ ರಶ್ಮಿಕಾ ಸಲ್ಲಿಸಿದ್ದ ಅರ್ಜಿಯನ್ನು ಮದ್ದೂರಿನ ಸಿವಿಲ್ ನ್ಯಾಯಾಲಯ ವಜಾಗೊಳಿಸಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಮಗುವಿನೊಂದಿಗೆ ತಾಯಿ ಆಸ್ಟ್ರೇಲಿಯಾದಲ್ಲಿ ನೆಲೆಸುವುದಕ್ಕಾಗಿ ಅವಕಾಶ ಕಲ್ಪಿಸಿದೆ. ಅಲ್ಲದೇ, ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ತಂದೆ ಮಗುವನ್ನು ನೋಡಲು ಆಗಮಿಸಿಲ್ಲ. ಮಗುವನ್ನು ಆಸ್ಟ್ರೇಲಿಯಾ ವೀಸಾ ಪಡೆಯುವ ಸಂಬಂಧ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೂ ಹಾಜರಾಗಿಲ್ಲ. ಈ ಅಂಶ ಗಮನಿಸಿದರೆ, ಪತಿ ಮುಂದಿನ ದಿನಗಳಲ್ಲಿ ಮಗುವನ್ನು ನೋಡುವ ಕುರಿತು ಆಸಕ್ತಿ ಕಳೆದು ಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ.

ಜೊತೆಗೆ, ಪತಿ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಪರಿಣಾಮ ಮತ್ತಷ್ಟು ದಾವೆಗಳು ದಾಖಲಿಸುವುದನ್ನು ತಪ್ಪಿಸುವುದಕ್ಕಾಗಿ ಅರ್ಜಿಯನ್ನು ಪುರಸ್ಕರಿಸಲಾಗುತ್ತಿದೆ ಎಂದು ತಿಳಿಸಿರುವ ನ್ಯಾಯಪೀಠ, ಮಗುವನ್ನು ಆಸ್ಟ್ರೇಲಿಯಾ ವೀಸಾ ಪಡೆಯಲು ಅನುಮತಿ ನೀಡಬಹುದು ಎಂದು ಅಭಿಪ್ರಾಯ ಪಟ್ಟಿದೆ. ಅಷ್ಟೇ ಅಲ್ಲದೇ, ಮಗುವನ್ನು ವಿದೇಶಕ್ಕೆ ಕರೆದೊಯ್ಯಲು ಅನುಮತಿಸಲು ಮತ್ತೊಂದು ಅರ್ಜಿ ಸಲ್ಲಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಮದ್ದೂರಿನ ರಶ್ಮಿಕಾ ಮತ್ತು ಕುಣಿಗಲ್‌ನ ಕಿಶೋರ್(ಎಲ್ಲರ ಹೆಸರುಗಳನ್ನು ಬದಲಾಯಿಸಲಾಗಿದೆ) 2006ರಲ್ಲಿ ವಿವಾಹವಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ಇಬ್ಬರ ನಡುವಿನ ವಿವಾದದಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪ್ರಾಪ್ತ ವಯಸ್ಸಿನ ಮಗನನ್ನು ತಾಯಿಯ ಆರೈಕೆಯಲ್ಲಿರಲು ಅವಕಾಶ ನೀಡಿತ್ತು. ಜತೆಗೆ, ತಿಂಗಳಿಗೆ ಒಮ್ಮೆ ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಿ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ವಿಚ್ಛೇದನದ ಬಳಿಕ ಪತಿ ಒಮ್ಮೆಯೂ ಮಗನನ್ನು ಭೇಟಿ ಮಾಡಲು ಆಗಮಿಸಿರಲಿಲ್ಲ.

ಇದಾದ ಬಳಿಕ ರಶ್ಮಿಕಾ ಮತ್ತೊಂದು ವಿವಾಹವಾಗಿದ್ದು ಪ್ರವಾಸಿ ವಿಸಾ ಪಡೆದು ಮಗುವಿನೊಂದಿಗೆ ತನ್ನ ಎರಡನೇ ಪತಿಯ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಆ ನಂತರ ಮಗುವನ್ನು ನೋಡಲು ಪತಿ ಬಾರದ ಹಿನ್ನೆಲೆ ತಿಂಗಳಿಗೊಮ್ಮೆ ಭೇಟಿ ಮಾಡುವುದಕ್ಕೆ ನೀಡಿರುವ ಷರತ್ತನ್ನು ಸಡಿಲಗೊಳಿಸುವಂತೆ ರಶ್ಮಿಕಾ 2022ರ ಫೆಬ್ರವರಿ 19ರಂದು ಮಂದ್ದೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಮೊದಲ ಪತಿ ಕಿಶೋರ್‌ಗೆ ನೋಟಿಸ್ ಜಾರಿಯಾದರೂ ಹಾಜರಾಗಿರುವುದಿಲ್ಲ. ಹೀಗಾಗಿ ಮಗುವಿನ ಭೇಟಿಗೆ ನೀಡಿದ್ದ ಅವಕಾಶವನ್ನು ನ್ಯಾಯಾಲಯ ರದ್ದುಗೊಳಿಸಿತ್ತು.

ಆಸ್ಟ್ರೇಲಿಯಾ ವಲಸೆ ನಿಯಮಗಳ ಪ್ರಕಾರ ಅನುಮತಿ ಕಡ್ಡಾಯ : ಪ್ರವಾಸಿ ವಿಸಾದೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ರಶ್ಮಿಕಾ ಮತ್ತು ಆಕೆಯ ಮಗನಿಗೆ ಶಾಶ್ವತವಾಗಿ ನೆಲೆಸಲು ವೀಸಾ ಕೋರಿ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಅಪ್ರಾಪ್ತ ಮಕ್ಕಳನ್ನು ಆಸ್ಟ್ರೇಲಿಯಾದಲ್ಲಿ ನೆಲೆಸಲ ಅವಕಾಶ ಪಡೆಯಬೇಕಾದರೆ ಅಲ್ಲಿನ ವಲಸೆ ನಿಯಮಗಳ ಪ್ರಕಾರ ಮೂಲ ದೇಶದ ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ರಶ್ಮಿಕಾ ತನ್ನ ತಂದೆಯ ಮೂಲಕ ಅನುಮತಿ ಪಡೆಯಲು ಮತ್ತೆ ಮದ್ದೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅನುಮತಿ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2014ರಲ್ಲಿ ವಿಚ್ಛೇದನ ಮಂಜೂರಾಗಿ ಮಗುವಿನ ಭೇಟಿಗೆ ಅವಕಾಶವಿದ್ದರೂ ಒಂದು ದಿನವೂ ಭೇಟಿಯಾಗಿಲ್ಲ. ಹೀಗಾಗಿ ಭೇಟಿ ಹಕ್ಕನ್ನು ವಿಚಾರಣೆ ನ್ಯಾಯಾಲಯ ಈಗಾಗಲೇ ಸಡಿಲಗೊಳಿಸಿದೆ. ಇದೀಗ ತಾಯಿ ಮತ್ತು ಮಗು ಆಸ್ಟ್ರೇಲಿಯಾಗೆ ತೆರಳಿದ್ದು, ಅಲ್ಲಿನ ವಲಸೆ ನಿಯಮಗಳ ಪ್ರಕಾರ ಮಗುವನ್ನು ಮೂಲ ದೇಶದಿಂದ ಕರೆದೊಯ್ಯಲು ನ್ಯಾಯಾಲಯದ ಅನುಮತಿ ಅಗತ್ಯವಿದೆ.

ಆದರೆ, ಅನುಮತಿಗಾಗಿ ವಿಚಾರಣಾ ನ್ಯಾಯಾಲಯ ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದನ್ನು ನ್ಯಾಯಪೀಠ ಪರಿಗಣಿಸಿ ಅನುಮತಿ ನೀಡಿದೆ.

ಇದನ್ನೂ ಓದಿ: ವಿಚ್ಛೇದಿತ ಪತ್ನಿಯ ಸುಪರ್ದಿಯಲ್ಲಿರುವ ಎರಡನೇ ಮಗ: ವಿದ್ಯಾಭ್ಯಾಸಕ್ಕಾಗಿ 40 ಲಕ್ಷ ಜೀವನಾಂಶ ನೀಡುವಂತೆ ಹೈಕೋರ್ಟ್​ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.