ETV Bharat / state

ಮಗುವನ್ನು ಸುಪರ್ದಿಗೆ ನೀಡದ ತಂದೆಗೆ 25 ಸಾವಿರ ದಂಡ; ತಾಯಿ ಮಡಿಲಿಗೆ ಮಗು ಸೇರಿಸಿದ ಹೈಕೋರ್ಟ್​ - High Court

ಕೋರ್ಟ್​ನಲ್ಲಿ ಒಪ್ಪಂದದ ನಂತರವು ಮಗುವನ್ನು ತಾಯಿಯ ಸುಪರ್ದಿಗೆ ನೀಡದ ತಂದೆಗೆ ಹೈಕೋರ್ಟ್​ 25 ಸಾವಿರ ದಂಡ ಹಾಕಿ ಮಗುವನ್ನು ತಾಯಿಗೆ ನೀಡಿದೆ.

High Court
ಹೈಕೋರ್ಟ್​
author img

By

Published : Jan 21, 2023, 1:43 PM IST

ಬೆಂಗಳೂರು : ಮಗುವನ್ನು ತಿಂಗಳಲ್ಲಿ 15 ದಿನಗಳಂತೆ ತಾಯಿ ಹಾಗೂ ತಂದೆಯೊಂದಿಗೆ ಇರಿಸುವುದಾಗಿ ನ್ಯಾಯಾಲಯಕ್ಕೆ ನೀಡಿದ್ದ ಮುಚ್ಚಳಿಕೆ ಉಲ್ಲಂಘಿಸಿದ್ದಲ್ಲದೇ, ವಾರಂಟ್ ಜಾರಿಯಾದರೂ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದ ಪತಿಗೆ 25 ಸಾವಿರ ರೂ. ದಂಡ ವಿಧಿಸಿರುವ ಹೈಕೋರ್ಟ್, ಮಗುವನ್ನು ತಾಯಿಯ ಸುಪರ್ದಿಗೆ ನೀಡಲು ನಿರ್ದೇಶನ ನೀಡಿದೆ.

ನ್ಯಾಯಾಲಯದ ಆದೇಶಂತೆ ನಡೆದು ಕೊಳ್ಳದ ಪತಿಯ ಕ್ರಮವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಮಗುವಿನ ತಂದೆ ವಕೀಲರಾಗಿದ್ದರೂ ಕೋರ್ಟ್​ ಆದೇಶವನ್ನು ದಿಕ್ಕರಿಸಿದ್ದರು. ಈ ವಿಷಯ ಗಮನಿಸಿದ ನ್ಯಾಯಪೀಠ ಕಠಿಣ ಆದೇಶದ ಮೂಲಕ ವಿಚಾರಣೆಗೆ ಹಾಜರಾಗುವಂತೆ ಮಾಡಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ: ವೃತ್ತಿಯಲ್ಲಿ ವಕೀಲನಾಗಿರುವ ಚೆನೈನ್ನ ನವೀನ್​ಗೂ ಮೈಸೂರಿನ ನೇತ್ರಾಳಿಗೂ ವಿವಾಹವಾಗಿತ್ತು. ಇವರಿಗೆ ಗಂಡು ಮಗುವು ಜನಿಸಿತ್ತು. ಆದರೆ, ಈ ದಂಪತಿ ಕೆಲವು ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದರು. 2022ರ ಏ.27ರಂದು ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಪತ್ನಿ, ಅಪ್ರಾಪ್ತ ಪುತ್ರನನ್ನು ಪತಿ ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಆದರೆ, 2022ರ ಮೇ 25ರಂದು ಕೋರ್ಟ್ ಮುಂದೆ ಹಾಜರಾಗಿದ್ದ ಪತಿ, ಪುತ್ರನನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಬಳಿಕ ಪ್ರತಿ ತಿಂಗಳ ಮೊದಲ 15 ದಿನ ಮಗನನ್ನು ಪತ್ನಿ ಸುಪರ್ದಿಯಲ್ಲಿ ಮತ್ತು ನಂತರದ 15 ದಿನ ತನ್ನಲ್ಲಿ ಇರಿಸಿಕೊಳ್ಳಲು ಒಪ್ಪಿ ನವೀನ್ ಜಂಟಿ ಮೆಮೊ ಸಲ್ಲಿಸಿ ಒಪ್ಪಂದವನ್ನು ಉಲ್ಲಂಘಿಸುವುದಿಲ್ಲ ಎಂದು ವಾಗ್ದಾನವನ್ನೂ ನೀಡಿದ್ದರು. ಅದನ್ನು ಒಪ್ಪಿ ಪ್ರಕರಣವನ್ನು ಹೈಕೋರ್ಟ್ ಇತ್ಯರ್ಥಪಡಿಸಿತ್ತು.

ಆದೇಶದ ಬಳಿಕ ಒಪ್ಪಂದ ಉಲ್ಲಂಘನೆ: ಆದರೆ ಜೂ.22ರಂದು ಹೈಕೋರ್ಟ್​ಗೆ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನೇತ್ರಾ, ಪತಿ ಒಪ್ಪಿದಂತೆ ಮಗನನ್ನು ತಮ್ಮ ಸುಪರ್ದಿಗೆ ನೀಡುತ್ತಿಲ್ಲ ಎಂದು ದೂರಿದ್ದರು. ಅರ್ಜಿ ಸಂಬಂಧ ಹೈಕೋರ್ಟ್ ಮೊದಲಿಗೆ ಜು.13 ರಂದು ನೋಟಿಸ್ ಜಾರಿ ಮಾಡಿತ್ತು. ಅದಕ್ಕೆ ನವೀನ್ ಉತ್ತರಿಸದೇ ಇದ್ದಾಗ ನೋಟಿಸ್ ಅನ್ನು ಮರು ಜಾರಿಗೊಳಿಸಲು ತಮಿಳುನಾಡು ಡಿಜಿಪಿಗೆ ಸೆ.1ರಂದು ಸೂಚಿಸಿತ್ತು. ಸೆ.10ರಂದು ವಿಚಾರಣೆಗೆ ನವೀನ್ ಪರ ಯಾರೂ ಹಾಜರಾಗಿರಲಿಲ್ಲ. ಇದರಿಂದ 20 ಸಾವಿರ ರೂ. ಮೊತ್ತದ ಜಾಮೀನು ಸಹಿತ ವಾರಂಟ್​ ಜಾರಿ ಮಾಡಿತ್ತು.

ವಾರಂಟ್​ ಜಾರಿಯಾದರೂ ಆತನಿಂದ ಯಾವುದೇ ಉತ್ತರ ಬರಲಿಲ್ಲ. ಹಾಗಾಗಿ ಆಕ್ರೋಶಗೊಂಡ ಹೈಕೋರ್ಟ್, 2023ರ ಜ.11ರಂದು ವಿಚಾರಣೆಗೆ ಹಾಜರಾಗದಿದ್ದರೆ ಜಾಮೀನು ರಹಿತ ಬಂಧನ ವಾರಂಟ್​ ಜಾರಿಗೊಳಿಸುವದಾಗಿ ಎಚ್ಚರಿಸಿತು. ಈ ಮಧ್ಯೆ ಸುಪ್ರೀಂ ಕೋಟ್​ರ್ಗೆ ಮೇಲ್ಮನವಿ ಸಲ್ಲಿಸಿದ್ದ ನವೀನ್, ಹೈಕೋರ್ಟ್ ಒತ್ತಡದಿಂದ ಪತ್ನಿಯೊಂದಿಗೆ ಜಂಟಿ ಮೆಮೊಗೆ ಸಹಿ ಹಾಕಿದೆ. ಮೆಮೋಗೆ ಸಹಿ ಹಾಕದಿದ್ದರೆ ತನ್ನ ವಕೀಲಿಕೆಯ ಸನ್ನದ್ದು ಅಮಾನತುಗೊಳಿಸುವುದಾಗಿ ಹೈಕೋರ್ಟ್ ಬೆದರಿಕೆ ಹಾಕಿತ್ತು ಎಂದು ಆರೋಪಿಸಿದ್ದರು. ಆದರೆ, ಮೇಲ್ಮನವಿಯನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್, ಹೈಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿತ್ತು.

ಕೊನೆಗೆ ಜ.12 ರಂದು ಹೈಕೋರ್ಟ್ ವಿಚಾರಣೆಗೆ ನವೀನ್ ಹಾಜರಾಗಿ ಮಗ ಅನಾರೋಗ್ಯಕ್ಕೆ ಒಳಗಾಗಿದ್ದನು. ಪತ್ನಿಯ ಸುಪರ್ದಿಗೆ ಮಗನನ್ನು ನೀಡಬೇಕಾದರೆ ಚೆನ್ನೈಯಿಂದ ಮೈಸೂರಿಗೆ ಪ್ರಯಾಣಿಸಬೇಕು. ಹೀಗೆ ನಾಲ್ಕು ಸಲ ಪ್ರಯಾಣಿಸಿದರೆ ಮಗ ಅನಾರೋಗ್ಯಕ್ಕೆ ಒಳಗಾಗಬಹುದು. ಅವನ ಹಿತಾಸಕ್ತಿಯಿಂದ ತಾಯಿ ಬಳಿಗೆ ಕರೆದುಕೊಂಡು ಹೋಗಿಲ್ಲ ಎಂದು ಸಮಜಾಯಿಸಿ ನೀಡಿದರು. ಜೊತೆಗೆ, ಕೋರ್ಟ್ ಆದೇಶ ಪಾಲಿಸದಕ್ಕೆ ಕ್ಷಮೆ ಕೋರಿ, ನ್ಯಾಯಾಲಯದ ಮುಂದಿನ ಒಪ್ಪಂದದಂತೆ ಮಗನನ್ನು ಪತ್ನಿ ಸುಪರ್ದಿಗೆ ನೀಡಲು ಸಿದ್ಧವಾಗಿರುವುದಾಗಿ ತಿಳಿಸಿದರು.

ನವೀನ್ ವಿವರಣೆಯನ್ನು ಒಪ್ಪಲು ಹಾಗೂ ಕ್ಷಮೆ ನೀಡಲು ನಿರಾಕರಿಸಿದ ಹೈಕೋರ್ಟ್, ಜ.17ರಂದು ಕೋರ್ಟ್​ಗೆ ಮಗುವಿನೊಂದಿಗೆ ಹಾಜರಾಗಬೇಕು. ಅಂದು ಮಗನನ್ನು ತಾಯಿಗೆ ಸುಪರ್ದಿಗೆ ನೀಡಬೇಕು ಹಾಗೂ ಆಕೆಗೆ 25 ಸಾವಿರ ರೂ. ದಂಡ ಪಾವತಿಸಬೇಕು ಎಂದು ನಿರ್ದೇಶಿಸಿತ್ತು. ಅದರಂತೆ ಜ.17ರಂದು ವಿಚಾರಣೆಗೆ ಹಾಜರಾದ ನವೀನ್, ಪುತ್ರನನ್ನು ಪತ್ನಿಗೆ ಒಪ್ಪಿಸಿದರು. ನ್ಯಾಯಮೂರ್ತಿಗಳ ಮುಂದೆಯೇ 25 ಸಾವಿರ ದಂಡವನ್ನು ಪತ್ನಿಗೆ ಪಾವತಿಸಿದರು. ಈ ಎಲ್ಲಾ ಪ್ರಕ್ರಿಯೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಕ್ತಾಯಗೊಳಿಸಿತು.

ಇದನ್ನೂ ಓದಿ: ಹೈಕೋರ್ಟ್ ಆದೇಶ ಪಾಲಿಸದ ಕಾರಣ 50 ಸಾವಿರ ದಂಡ ಪಾವತಿಸಿದ ಅಧಿಕಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.