ETV Bharat / state

ಖಾಸಗಿ ಕಂಪನಿಗಳ ನೌಕರರಿಗೂ ಬಿಹೆಚ್ ಸರಣಿ ಅಡಿ ವಾಹನಗಳ ನೋಂದಣಿಗೆ ಅವಕಾಶ ನೀಡಲು ಹೈಕೋರ್ಟ್ ಸೂಚನೆ - ಹೆಚ್ ಸರಣಿಯಡಿ ನೋಂದಣಿ

ಕೇಂದ್ರ ಸರ್ಕಾರಿ ನೌಕರರರು ಸೇರಿದಂತೆ ಕೆಲವು ವರ್ಗದ ಸಿಬ್ಬಂದಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾರಿಗೆಯೇತರ ವಾಹನಗಳ ಸುಗಮ ಸಂಚಾರಕ್ಕೆ ಬಿಹೆಚ್ ಸರಣಿಯಡಿ ನೋಂದಣಿಗೆ ಅವಕಾಶ ಕಲ್ಪಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಆ.16ರಂದು ಅಧಿಸೂಚನೆ ಹೊರಡಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Dec 18, 2022, 8:28 PM IST

ಬೆಂಗಳೂರು: ಆಯ್ದ ಖಾಸಗಿ ಕಂಪನಿಗಳ ನೌಕರರ ಹೊಸ ಸಾರಿಗೆಯೇತರ ವಾಹನಗಳನ್ನು ಬಿಹೆಚ್ (ಭಾರತ್) ಸರಣಿ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಬೆಂಗಳೂರಿನ ಸಾಫ್ಟ್​​ವೇರ್ ಕಂಪನಿಯ ಉದ್ಯೋಗಿ ಟಿ.ಶಾಲಿನಿ ಮತ್ತಿತರರ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ಕೇಂದ್ರದ ಮೋಟಾರು ವಾಹನಗಳ (20ನೇ ತಿದ್ದುಪಡಿ) ನಿಯಮ 2021 ಅಡಿಯಲ್ಲಿ ಇತರೆ ಕೇಂದ್ರ ಸರ್ಕಾರಿ ನೌಕರರಿಗೆ ಇರುವಂತೆ ಈ ಸೌಲಭ್ಯವನ್ನು ಕಲ್ಪಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರಿ ನೌಕರರರು ಸೇರಿದಂತೆ ಕೆಲವು ವರ್ಗದ ಸಿಬ್ಬಂದಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾರಿಗೆಯೇತರ ವಾಹನಗಳ ಸುಗಮ ಸಂಚಾರಕ್ಕೆ ಬಿಹೆಚ್ ಸರಣಿಯಡಿ ನೋಂದಣಿಗೆ ಅವಕಾಶ ಕಲ್ಪಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಆ.16ರಂದು ಅಧಿಸೂಚನೆ ಹೊರಡಿಸಿದೆ.

ಅದರಂತೆ ಆಗಾಗ ಬೇರೆ ರಾಜ್ಯಗಳಿಗೆ ವರ್ಗಾವಣೆಯಾಗುವ ಖಾಸಗಿ ವಲಯದ ಕಂಪನಿಗಳ ಸಿಬ್ಬಂದಿಗೂ ಅದು ಅನ್ವಯವಾಗಲಿದೆ. ಹಾಗಾಗಿ ಸರ್ಕಾರ ಖಾಸಗಿ ವಲಯದ ಕೆಲ ಸಿಬ್ಬಂದಿಗೆ ನಿಯಮದಂತೆ ಬಿಹೆಚ್ ನೋಂದಣಿ ಮಾಡಬೇಕು. ಅದಕ್ಕೆ ಸೂಕ್ತ ಆದೇಶವನ್ನು ಸಾರಿಗೆ ಇಲಾಖೆ ಹೊರಡಿಸಬೇಕು ಎಂದು ಸೂಚನೆ ನೀಡಿದೆ.

ಕೇಂದ್ರದ ಅಧಿಸೂಚನೆಯಂತೆ ಅಖಿಲ ಭಾರತ ಸೇವೆಗಳು, ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಅಂತರ ರಾಜ್ಯ ವರ್ಗಾವಣೆ ಹೊಂದಿರುವ ಖಾಸಗಿ ವಲಯದ ನೌಕರರಿಗೂ ಬಿಹೆಚ್ ಸರಣಿಯಡಿ ವಾಹನಗಳ ನೋಂದಣಿ ಮಾಡಬೇಕು. ಆದರೆ ಅದರಂತೆ ಸಾರಿಗೆ ಇಲಾಖೆ 2021ರ ಡಿ.20ರಂದು ಬಿಹೆಚ್ ಸರಣಿಯಡಿ ನೋಂದಣಿಗೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ, ಖಾಸಗಿ ಕಂಪನಿಗಳ ನೌಕರರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ, ಅವರು ಆಗಾಗ ಕಂಪನಿಗಳನ್ನು ಬದಲಾಯಿಸುತ್ತಾರೆ. ಹಾಗಾಗಿ ತೆರಿಗೆ ಅವಧಿ ಮುಗಿದ ನಂತರ ಅವರಿಂದ ತೆರಿಗೆ ಸಂಗ್ರಹ ಮಾಡಲು ಅವರು ಮೊದಲಿದ್ದ ಕಂಪನಿಯಲ್ಲಿಯೇ ಕೆಲಸ ಮಾಡಲಿದ್ದಾರೆ ಎಂಬುದು ಯಾವುದೇ ಖಾತ್ರಿ ಇಲ್ಲ ಎಂದು ವಾದ ಮಂಡಿಸಿತ್ತು.

ಆದರೆ ನ್ಯಾಯಾಲಯ, ಕೇಂದ್ರ ಸರ್ಕಾರ ತಿದ್ದುಪಡಿ ನಿಯಮಗಳನ್ನು 2021ರ ಆ.26ರಂದು ಜಾರಿಗೊಳಿಸಿರುವ ಪರಿಣಾಮ, ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

(ಓದಿ: ಎಂಟು ವರ್ಷ ಕಳೆದರೂ ಆದೇಶ ಪಾಲಿಸದ ತಹಶೀಲ್ದಾರ್​ಗೆ 3 ಲಕ್ಷ ರೂ ದಂಡ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.