ETV Bharat / state

ಸಾಲ ವಸೂಲಾತಿ ಪ್ರಕರಣ: ಮಾನದಂಡಗಳನ್ನು ಪರಿಶೀಲಿಸಲು ಆರ್​​​ಬಿಐಗೆ ಹೈಕೋರ್ಟ್ ಸಲಹೆ - ಭಗವಾನ್ ಕಾಟನ್ ಗಿನ್ನರ್ಸ್ ಪ್ರೈ.ಲಿ

ಒಂದೇ ಕುಟುಂಬದವರು ಸೇರಿ ಸ್ಥಾಪಿಸಿದ್ದ ಭಗವಾನ್ ಕಾಟನ್ ಗಿನ್ನರ್ಸ್ ಪ್ರೈ.ಲಿ ಸಂಸ್ಥೆಗಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 2014ರ ಆ.30ರಂದು 1.87 ಕೋಟಿ ಹಾಗೂ ಸೆ.30ರಂದು 8 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಭದ್ರತೆಯಾಗಿ ರಾಯಚೂರಿನ ಕೈಗಾರಿಕಾ ಪ್ರದೇಶದಲ್ಲಿರುವ 2.9 ಎಕರೆ ಭೂಮಿ ಅಡಮಾನ ಇಡಲಾಗಿತ್ತು. ಸಾಲ ಮರುವಾಪತಿಯಾಗದ ಹಿನ್ನೆಲೆ 2016ರ ಡಿ. 21ರಂದು ಬ್ಯಾಂಕ್ ವಸೂಲಿ ಪ್ರಕ್ರಿಯೆ ಆರಂಭಿಸಿತ್ತು.

Karnataka high court
ಕರ್ನಾಟಕ ಹೈಕೋರ್ಟ್​
author img

By

Published : Mar 2, 2021, 10:03 PM IST

ಬೆಂಗಳೂರು: ಸಾಲ ವಸೂಲಿ ವೇಳೆ ಬ್ಯಾಂಕ್​ಗಳು ನೀಡುವ ಒನ್ ಟೈಮ್ ಸೆಟ್ಲ್ ಮೆಂಟ್ ಸ್ಕೀಮ್ (ಒಟಿಎಸ್) ನ ಮಾನದಂಡಗಳನ್ನು ಮರುಪರಿಶೀಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​​​ಬಿಐ)ಗೆ ಸಲಹೆ ನೀಡಿರುವ ಹೈಕೋರ್ಟ್, ಸಾಲ ಮರುಪಾವತಿಸಲು ರಿಯಾಯಿತಿ ಕೋರಿದ್ದ ಜಾಮೀನುದಾರನಿಗೆ 2 ಲಕ್ಷ ದಂಡ ವಿಧಿಸಿದೆ.

ಕಂಪನಿ ಪಡೆದುಕೊಂಡಿರುವ ಸಾಲವನ್ನು ಓಟಿಎಸ್ ಅಡಿ ಬ್ಯಾಂಕ್ ನಿರ್ಧರಿಸಿರುವ ಮೊತ್ತದ ಬದಲಿಗೆ ತಾವು ನಿರ್ಧರಿಸಿರುವ ಮೊತ್ತ ಮರುಪಾವತಿಸಲು ಸಿದ್ದರಿದ್ದು ಅದನ್ನು ಪರಿಗಣಿಸುವಂತೆ ಬ್ಯಾಂಕ್​ಗೆ ನಿರ್ದೇಶಿಸಬೇಕು ಎಂದು ಕೋರಿ ಜಾಮೀನುದಾರರಾದ ರಾಜಾಜಿನಗರ ನಿವಾಸಿ ಬಾಲಕಿಶನ್ ಬೂಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಸಾಲಗಾರನಿಗೆ ನೀಡಿರುವ ಸಾಲಕ್ಕೆ ಸೂಕ್ತ ಭದ್ರತೆ ಇದೆ ಎಂಬುದು ಸ್ಪಷ್ಟವಾಗಿ ತಿಳಿದ ನಂತರವೂ ಬ್ಯಾಂಕ್​ಗಳು ಏಕೆ ಶೇ.70 ರಷ್ಟನ್ನು ಮಾತ್ರ ಮರುಪಾವತಿಸಲು ಒಟಿಎಸ್ ಮೂಲಕ ಅವಕಾಶ ನೀಡುತ್ತವೆ ಎಂಬುದೇ ತಿಳಿಯುವುದಿಲ್ಲ. ಬ್ಯಾಂಕ್​ಗಳ ಇಂತಹ ಲೆಕ್ಕಾಚಾರ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಟಿಎಸ್ ಸೇರಿದಂತೆ ಯಾವುದೇ ವಿಧಾನದ ಮೂಲಕವೂ ಅನಗತ್ಯವಾಗಿ ಸಾಲ ಮನ್ನಾ ಮಾಡುವುದು ನೇರವಾಗಿ ಹಣದುಬ್ಬರಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ:

ಒಂದೇ ಕುಟುಂಬದರು ಸೇರಿ ಸ್ಥಾಪಿಸಿದ್ದ ಭಗವಾನ್ ಕಾಟನ್ ಗಿನ್ನರ್ಸ್ ಪ್ರೈ.ಲಿ ಸಂಸ್ಥೆಗಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 2014ರ ಆ.30ರಂದು 1.87 ಕೋಟಿ ಹಾಗೂ ಸೆ.30ರಂದು 8 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಭದ್ರತೆಯಾಗಿ ರಾಯಚೂರಿನ ಕೈಗಾರಿಕಾ ಪ್ರದೇಶದಲ್ಲಿರುವ 2.9 ಎಕರೆ ಭೂಮಿ ಅಡಮಾನ ಇಡಲಾಗಿತ್ತು. ಸಾಲ ಮರುವಾಪತಿಯಾಗದ ಹಿನ್ನೆಲೆ 2016ರ ಡಿ. 21ರಂದು ಎರಡೂ ಸಾಲದ ಖಾತೆಗಳನ್ನು ಒಗ್ಗೂಡಿಸಿ ಎನ್​ಪಿಎ ಎಂದು ಘೋಷಿಸಿದ್ದ ಬ್ಯಾಂಕ್ ವಸೂಲಿ ಪ್ರಕ್ರಿಯೆ ಆರಂಭಿಸಿತ್ತು.

ಅಡಮಾನ ಮಾಡಿದ್ದ ಆಸ್ತಿ ವಶಕ್ಕೆ ತೆಗೆದುಕೊಳ್ಳುವ ಬ್ಯಾಂಕ್ ನಿರ್ಧಾರ ಪ್ರಶ್ನಿಸಿದ್ದ ಕಂಪನಿಯ ಅರ್ಜಿಯನ್ನು 2019ರ ನ.18ರಂದು ಸಾಲ ವಸೂಲಾತಿ ಮಂಡಳಿ (ಡಿಆರ್ ಟಿ) ವಜಾ ಮಾಡಿತ್ತು.
2018ರ ಡಿ.24ರಂದು ಬ್ಯಾಂಕ್ ಒನ್ ಟೈಮ್ ಸೆಟ್ಲ್ ಮೆಂಟ್​​ಗೆ ಅವಕಾಶ ನೀಡಿ ಬಾಕಿ 8.57 ಕೋಟಿ ಸಾಲದಲ್ಲಿ 6.05 ಕೋಟಿ ಪಾವತಿಸುವಂತೆ ತಿಳಿಸಿತ್ತು. ಈ ವೇಳೆ ಶೇ. 10 ರಷ್ಟು ಸಾಲ ಪಾವತಿಸಿದ್ದ ಕಂಪನಿ ನಂತರ ಕೈಚೆಲ್ಲಿತ್ತು. 2019ರ ಮಾ.25ರಂದು ಅರ್ಜಿದಾರರು ಬ್ಯಾಂಕ್​​ಗೆ ಮನವಿ ಸಲ್ಲಿಸಿ ಒಟಿಎಸ್ ವಿಸ್ತರಿಸುವಂತೆ ಕೋರಿದ್ದರು. ಆದರೆ, ಬ್ಯಾಂಕ್ ಕೋರಿಕೆ ತಿರಸ್ಕರಿಸಿ ಮಾ.31ರೊಳಗೆ ಬಾಕಿ 5.44 ಕೋಟಿ ಪಾವತಿಸುವಂತೆ ಸೂಚಿಸಿತ್ತು.

ಬ್ಯಾಂಕ್​ನ ಈ ಕ್ರಮ ಪ್ರಶ್ನಿಸಿ ಕಂಪನಿ ಹೈಕೋರ್ಟ್​​ನ ಕಲಬುರಗಿ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ, ನ್ಯಾಯಾಲಯ ಮನವಿ ತಿರಸ್ಕರಿಸಿತ್ತು. ಈ ನಡುವೆ ಬ್ಯಾಂಕ್ ಒಟಿಎಸ್ ಸಮಯವನ್ನು ಒಂದು ತಿಂಗಳು ವಿಸ್ತರಿಸಿಕೊಟ್ಟರೂ ಸಾಲ ಪಾವತಿಯಾಗಲಿಲ್ಲ. ಬ್ಯಾಂಕ್ ಮತ್ತೊಮ್ಮೆ ಒಟಿಎಸ್ ಅವಕಾಶ ನೀಡಿ ಬಾಕಿ ಇರುವ 7.97 ಕೋಟಿಯಲ್ಲಿ 5.64 ಕೋಟಿ ಪಾವತಿಸಲು ಸೂಚಿಸಿತ್ತು. ಆದರೆ, ಕಂಪನಿ ಹಣ ಪಾವತಿಸದ ಹಿನ್ನೆಲೆ ಅಡಮಾನ ಇಟ್ಟಿದ್ದ ಆಸ್ತಿ ಮಾರಾಟ ಮಾಡಲು 2020ರ ಡಿ. 19ರಂದು ಸೇಲ್ ನೋಟಿಸ್ ಜಾರಿ ಮಾಡಿ 2021ರ ಜ.28ರಂದು ಆಸ್ತಿ ಹರಾಜು ನಡೆಸುವುದಾಗಿ ತಿಳಿಸಿತ್ತು.

ಹರಾಜು ಸನ್ನಿಹಿತವಾದ ನಂತರ 2021ರ ಜ.16ರಂದು ಕಂಪನಿ ಒಟಿಎಸ್ ಅಡಿ 4.40 ಕೋಟಿ ಪಾವತಿಸುವ ಪ್ರಸಾಪವನ್ನು ಬ್ಯಾಂಕ್ ಮುಂದಿಟ್ಟಿತ್ತು. ಆದರೆ, ಬ್ಯಾಂಕ್ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಬಳಿಕ ಅರ್ಜಿದಾರರು ತಮ್ಮ ಪ್ರಸ್ತಾಪವನ್ನು ಬ್ಯಾಂಕ್ ಒಪ್ಪಿಕೊಳ್ಳುವಂತೆ ನಿರ್ದೇಶಿಸಲು ಕೋರಿ ಹೈಕೋರ್ಟ್​​​ನ ಬೆಂಗಳೂರು ಪೀಠದಲ್ಲಿ ರಿಟ್ ದಾಖಲಿಸಿದ್ದರು.

ವಿಚಾರಣೆ ವೇಳೆ ಬ್ಯಾಂಕ್ ತಮಗೆ ಕಂಪನಿಯಿಂದ ಒಟ್ಟು 14.50 ಕೋಟಿ ರೂಪಾಯಿ ಬರಬೇಕಿದೆ. ಅರ್ಜಿದಾರರು ಬೆಂಗಳೂರು ಮತ್ತು ರಾಯಚೂರಿನಲ್ಲಿ 50 ಕೋಟಿ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವಾದಿಸಿತ್ತು.

ಇದನ್ನೂ ಓದಿ: ಪಶ್ಚಿಮ ವಿಭಾಗ ಪೊಲೀಸ್​ ತಂಡಕ್ಕೆ 1.15 ಲಕ್ಷ ರೂ. ಬಹುಮಾನ ವಿತರಿಸಿದ ಕಮಿಷನರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.