ಬೆಂಗಳೂರು: ಫ್ಲೆಕ್ಸ್ ಮತ್ತು ಬ್ಯಾನರ್ ವಿಚಾರವಾಗಿ ಮುನಿಸಿಪಾಲಿಟಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಫ್ಲೆಕ್ಸ್-ಬ್ಯಾನರ್ ವಿಚಾರವಾಗಿ ಸಪ್ಟೆಂಬರ್ ತಿಂಗಳಲ್ಲಿ ಆಂಗ್ಲ ಭಾಷೆಯಲ್ಲಿ ಬೈಲಾ ಪ್ರಕಟಿಸಲಾಗಿತ್ತು. ಆದರೆ, ಒಂದು ತಿಂಗಳಾಗಿದ್ರೂ ಕನ್ನಡದಲ್ಲಿ ಪ್ರಕಟಣೆ ಹೊರಡಿಸಿಲ್ಲ ಎಂದು ಮುಖ್ಯನ್ಯಾಯಾಧೀಶರು ಮುನಿಸಿಪಾಲಿಟಿ ಮೇಲೆ ಗರಂ ಆಗಿದ್ದು, ಈ ವಿಚಾರವನ್ನು ಬಿಬಿಎಂಪಿ ಆಯುಕ್ತರಿಗೆ ಒಪ್ಪಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಫ್ಲೆಕ್ಸ್ ವಿಚಾರವಾಗಿ ಏನೆಲ್ಲಾ ಕ್ರಮ ಕೈಗೊಂಡಿದ್ದೀರಾ ಎಂಬ ಹೈಕೋರ್ಟ್ ವಿಭಾಗೀಯ ಪೀಠದ ಪ್ರಶ್ನೆಗೆ, ಇಲ್ಲಿಯವರೆಗೂ 51 ಪ್ರಕರಣಗಳನ್ನು ದಾಖಲಿಸಿ ತಲಾ 500 ರೂಪಾಯಿ ದಂಡ ವಿಧಿಸಿದ್ದೇವೆ ಎಂದು ಬಿಬಿಎಂಪಿ ಉತ್ತರಿಸಿದೆ. ಆದರೆ, ಇದು ಕಡಿಮೆ ಪ್ರಮಾಣದ ಶಿಕ್ಷೆಯಾಗಿದ್ದು, ಶಿಕ್ಷಿ, ದಂಡ ಮತ್ತಷ್ಟು ಕಠಿಣವಾಗಬೇಕಿದೆ ಎಂದು ಅರ್ಜಿದಾರರ ಪರ ವಕೀಲರು ಈ ವೇಳೆ ವಾದ ಮಂಡಿಸಿದ್ದಾರೆ.