ETV Bharat / state

ಆನೆಗಳ ಅಸಹಜ ಸಾವು ಪ್ರಕರಣ: ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿದ ಹೈಕೋರ್ಟ್ - ರಾಜ್ಯದ ಆನೆ ಶಿಬಿರಗಳು

ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳ ಅಸಹಜ ಸಾವು ಹಿನ್ನೆಲೆ ಆನೆ ಶಿಬಿರಗಳ ಸ್ಥಿತಿಗತಿ, ಅಲ್ಲಿ‌ನ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್​ ತಜ್ಞರ ಸಮಿತಿ ರಚಿಸಿದೆ.

ಆನೆಗಳ ಸಾವು ಪ್ರಕರಣ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ
author img

By

Published : Sep 11, 2019, 7:55 PM IST

ಬೆಂಗಳೂರು: ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳು ಅಸಹಜವಾಗಿ ಸಾವನ್ನಪ್ಪುತ್ತಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಆನೆ ಶಿಬಿರಗಳ ಸ್ಥಿತಿಗತಿ, ಅಲ್ಲಿ‌ನ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸಿದೆ.

ವಕೀಲ ಎನ್.ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾ. ಮೊಹಮ್ಮದ್ ನವಾಜ್​ ಅವರಿದ್ದ ವಿಭಾಗೀಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು.

ಅರ್ಜಿದಾರರು ಕಳೆದ ಬಾರಿ ವಿಚಾರಣೆ ವೇಳೆ ಆನೆಗಳ ಸಾವು ಕುರಿತು ನಿಖರವಾದ ಕಾರಣ ತಿಳಿಯಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕೆಂದು ನ್ಯಾಯಾಲಯಕ್ಕೆ ‌ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಕೋರ್ಟ್ ಅರ್ಜಿದಾರರಿಗೆ ನೀವೆೇ ತಜ್ಞರ ಆಯ್ಕೆ ಮಾಡಿ ಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಅಮೃತೇಶ್ ನಾಲ್ವರು ತಜ್ಞರ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಿದ್ರು. ಇದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ನಾಲ್ವರು ಸಮಿತಿ ನೇಮಕ ಮಾಡಿದೆ.

ಅರ್ಜಿಯಲ್ಲಿ ಏನಿದೆ?
ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಸರಿ ಇಲ್ಲದೆ ಆನೆಗಳು ಸಾವನ್ನಪ್ಪುತ್ತಿವೆ. ಆನೆಗಳ ಶಿಬಿರಗಳಲ್ಲಿ ರೌಡಿ ರಂಗ ಸೇರಿ ಒಟ್ಟು 11 ಆನೆಗಳು ಆರೋಗ್ಯ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಹೀಗಾಗಿ ತಜ್ಞರ ಸಮಿತಿ ಮಾಡಿ ತನಿಖೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ರು.

Intro:ಆನೆಗಳ ಸಾವು ಪ್ರಕರಣ ಅಧ್ಯಯನಕ್ಕೆ ತಜ್ಞ ರ ಸಮಿತಿ ರಚಿಸಿದ ಹೈಕೋರ್ಟ್

ಬೆಂಗಳೂರು

ರಾಜ್ಯದಲ್ಲಿನ ಆನೆ ಶಿಬಿರಗಳಲ್ಲಿ ಆನೆಗಳು ಅಸಹಜವಾಗಿ ಸಾವನ್ನಪ್ಪುತ್ತಿರುವುದನ್ನ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ‌ ಆನೆ ಶಿಬಿರಗಳಲ್ಲಿ ಆನೆ ಶಿಬಿರ ಸ್ಥಿತಿಗತಿ ಅಲ್ಲಿ‌ನ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ತಜ್ಞ ರ ಸಮಿತಿ ಹೈಕೋರ್ಟ್ ರಚನೆ ಮಾಡಿದೆ

ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ಪೀಠದಲ್ಲಿ ಇಂದು ನಡೆಯಿತು.

ಅರ್ಜಿದಾರ ಕಳೆದ ಬಾರಿ ವಿಚಾರಣೆ ವೇಳೆ ಆನೆಗಳ ಸಾವು ಕುರಿತು ನಿಖರವಾದ ಕಾರಣ ತಿಳಿಯಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕೆಂದು ನ್ಯಾಯಲಯಕ್ಕೆ ‌ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಕೋರ್ಟ್ ಅರ್ಜಿದಾರರಿಗೆ ನೀವೆ ತಜ್ಞ ರ ಆಯ್ಕೆ ಮಾಡಿ ಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಅಮೃತೇಶ್ ನಾಲ್ವರು ತಜ್ಞ ರ ಪಟ್ಟಿಯನ್ನ ನ್ಯಾಯಲಯಕ್ಕೆ ಸಲ್ಲಿಸಿದ್ರುಮ ಇದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಲಯ ನಾಲ್ವರು ತಜ್ಞ ರನ್ನ ಹೈಕೋರ್ಟ್ ನೇಮಕ ಮಾಡಿದೆ.

ಅರ್ಜಿಯಲ್ಲಿ ಏನಿದೆ:

ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಇಲ್ಲದೆ ಆನೆಗಳು ಸಾವನ್ನಪ್ಪುತ್ತಿವೆ. ಆನೆಗಳ ಶಿಬಿರಗಳಲ್ಲಿ ರೌಡಿ ರಂಗ ಸೇರಿ ಒಟ್ಟು 11 ಆನೆಗಳು ಆರೋಗ್ಯ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದಾಗಿ ಸಾವನ್ನಪ್ಪಿವೆ ಹೀಗಾಗಿ ತಜ್ಞರ ಸಮಿತಿ ಮಾಡಿ ತನೀಕೆ ನಡೆಸಬೇಕು ಎಂದು ಕೋರಿದ್ದರು.Body:KN_BNG_07_ELEPANT_7204498Conclusion:KN_BNG_07_ELEPANT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.