ಬೆಂಗಳೂರು: ಶ್ರೀಲಂಕಾ ಮೂಲದ ಉಗ್ರರು ತಮಿಳುನಾಡಿಗೆ ಬಂದಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ.
ತಮಿಳುನಾಡಿನ ಕೊಯಂಬತ್ತೂರು ನಗರಕ್ಕೆ ಹೈ ಅಲರ್ಟ್ ಘೋಷಿಸಿರುವ ಕೇಂದ್ರ ಗುಪ್ತಚರ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಸಂಪೂರ್ಣ ಬಂದೋಬಸ್ತ್ ಏರ್ಪಡಿಸಿದ್ದಾರೆ. ತಮಿಳುನಾಡಿಗೆ ನಗರದ ಮೂಲಕ ಉಗ್ರರು ಪ್ರವೇಶದ ಶಂಕೆ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಹಾಗೂ ನಗರ ಆಂತರಿಕ ಭದ್ರತಾ ದಳ ಅಲರ್ಟ್ ಆಗಿದೆ.
ಎಂದಿನಂತೆ ಬೆಂಗಳೂರು ಹೊರವಲಯ ಪ್ರದೇಶಗಳಲ್ಲಿ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.