ETV Bharat / state

ಕಟ್ಟಾ ಜಗದೀಶ್‌ಗೆ ಚೊಚ್ಚಲ ಗೆಲುವಿನ ನಿರೀಕ್ಷೆ; ಭೈರತಿಗೆ ಮತ್ತೆ ಚುಕ್ಕಾಣಿ ಹಿಡಿಯುವ ತವಕ - ಹೆಬ್ಬಾಳದಲ್ಲಿ ಮೂಲ ಸೌಕರ್ಯದ ಕೊರತೆ

ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಕಟ್ಟ ಜಗದೀಶ್ ನಾಯ್ಡು ಹಾಗು ಕಾಂಗ್ರೆಸ್‌ನಿಂದ ಭೈರತಿ ಸುರೇಶ್​ ಕಣದಲ್ಲಿದ್ದಾರೆ.

Direct competition between BJP and Congress  BJP and Congress in Hebbal constituency  competition between BJP and Congress in Hebbal  ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿ ಕಟ್ಟಾ ಜಗದೀಶ್  ಮತ್ತೆ ಕ್ಷೇತ್ರದ ಚುಕ್ಕಾಣಿ ಹಿಡಿಯಲು ಭೈರತಿ ಕಸರತ್ತು  ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ  ರಾಜ್ಯದಲ್ಲಿ ಚುನಾವರಣಾ ಪ್ರಚಾರದ ಕಾವು  ಪ್ರಸ್ತುತ ಕಾಂಗ್ರೆಸ್​ ಕೈಯಲ್ಲಿ ಹೆಬ್ಬಾಳ  ತ್ರಿಮೂರ್ತಿಗಳಿಂದ ಅಬ್ಬರದ ಪ್ರಚಾರ  ಹೆಬ್ಬಾಳದಲ್ಲಿ ಸಾಫ್ಟವೇರ್​ ಎಂಜಿನಿಯರ್​ಗಳೇ ಹೆಚ್ಚು  ಹೆಬ್ಬಾಳದಲ್ಲಿ ಮೂಲ ಸೌಕರ್ಯದ ಕೊರತೆ  ಹೆಬ್ಬಾಳ ಕ್ಷೇತ್ರದ ವ್ಯಾಪ್ತಿ
ಮತ್ತೆ ಕ್ಷೇತ್ರದ ಚುಕ್ಕಾಣಿ ಹಿಡಿಯಲು ಭೈರತಿ ಕಸರತ್ತು
author img

By

Published : May 5, 2023, 8:09 AM IST

Updated : May 7, 2023, 9:42 AM IST

ಬೆಂಗಳೂರಿನ ಹೆಬ್ಬಾಳ ವಿಧಾನಸಭೆ ಕ್ಷೇತ್ರ

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ. ಅಖಾಡದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಜಿದ್ದಿಗೆ ಬಿದ್ದು ಮತಬೇಟೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಹೆಬ್ಬಾಳ ಕ್ಷೇತ್ರ ವಿಶೇಷವಾಗಿ ಗಮನ ಸೆಳೆಯುತ್ತಿದೆ. ನಗರದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಹೆಬ್ಬಾಳದಲ್ಲಿ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಸದಸ್ಯರು ಮತದಾರರ ಮನವೊಲಿಕೆ ಕಸರತ್ತು ನಡೆಸುತ್ತಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನೇರ ಹಣಾಹಣಿ ಇದೆ. ಉಭಯ ಪಕ್ಷಗಳ ಸದಸ್ಯರಿಂದ ಸಮಬಲದಲ್ಲಿ ಪೈಪೋಟಿ ನಡೆಯುತ್ತಿದೆ.

ಪ್ರಸ್ತುತ 'ಕೈ'ಯಲ್ಲಿ ಹೆಬ್ಬಾಳ: ಕಾಂಗ್ರೆಸ್‌ನ ಭೈರತಿ ಸುರೇಶ್ ಹೆಬ್ಬಾಳದ ಹಾಲಿ ಶಾಸಕ. 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಮ್ಮ ಪರಿಷತ್ ಹುದ್ದೆಯನ್ನು ಇವರು ತೊರೆದಿದ್ದರು. ಚುನಾವಣೆಯಲ್ಲಿ 74,453 ಮತಗಳಿಂದ ಗೆದ್ದಿದ್ದರು. ಬಿಜೆಪಿಯ ಡಾ.ವೈ.ಎ.ನಾರಾಯಣಸ್ವಾಮಿ ಬಿಜೆಪಿಯಿಂದ ಸ್ಪರ್ಧಿಸಿ 53,313 ಮತಗಳನ್ನು ಪಡೆದು ಸೋತಿದ್ದರು. ಮೂರನೇ ಸ್ಥಾನಕ್ಕೆ ಕುಸಿದಿದ್ದ ಜೆಡಿಎಸ್‌ನ ಹನುಮಂತೇಗೌಡ 14,092 ಮತಗಳನ್ನಷ್ಟೇ ಗಳಿಸುವಲ್ಲಿ ಸಫಲರಾಗಿದ್ದರು.

ತ್ರಿಮೂರ್ತಿಗಳ ಅಬ್ಬರ: ಈ ಬಾರಿ ಕಾಂಗ್ರೆಸ್​ನಿಂದ ಹಾಲಿ ಶಾಸಕ ಭೈರತಿ ಸುರೇಶ್‌, ಬಿಜೆಪಿಯಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್ ನಾಯ್ಡು ಮತ್ತು ಜೆಡಿಎಸ್​ನಿಂದ ಮೋಹಿದ್ ಅಲ್ತಾಫ್ ಅವರಿಗೆ ಟಿಕೆಟ್ ನೀಡಲಾಗಿದೆ. ಮೂವರೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಟೆಕ್ಕಿಗಳೇ ಹೆಚ್ಚು: ಹೆಬ್ಬಾಳ ಕ್ಷೇತ್ರದಲ್ಲಿ ಹಲವು ಕೆರೆಗಳು, ಲುಂಬಿನಿ ಗಾರ್ಡನ್, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಹಲವು ಟೆಕ್ ಪಾರ್ಕ್​ಗಳಿವೆ. ಮಾಹಿತಿ ತಂತ್ರಜ್ಞಾನ ವಿಭಾಗದ ಕಂಪನಿಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ದೇಶದ ವಿವಿಧ ಭಾಗಗಳಿಂದ ಬಂದಿರುವ ಲಕ್ಷಾಂತರ ಸಾಫ್ಟ್‌ವೇರ್ ಎಂಜಿನಿಯರ್​ಗಳು ಇಲ್ಲಿ ನೆಲೆಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಹೆಬ್ಬಾಳ ಕ್ಷೇತ್ರದಲ್ಲಿಯೇ ಹಾದು ಹೋಗುತ್ತದೆ.

ಸಮಸ್ಯೆಗಳೇನು?: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಳಿಕ ಈ ಮಾರ್ಗದ ರಸ್ತೆಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ಹೆಬ್ಬಾಳ ರಸ್ತೆ ಮಾರ್ಗ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಇದಕ್ಕೆ ಪರಿಹಾರವಾಗಿ ಮತ್ತೊಂದು ಮೇಲ್ಸೇತುವೆ ಮಾಡಬೇಕು ಎಂಬುದು ಸಾರ್ವಜನಿಕರಿಗೆ ಬೇಡಿಕೆ. ವಿಧಾನಸೌಧಕ್ಕೆ ಬಂದು ಹೋಗುವವರಿಗಾಗಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ ಉಕ್ಕಿನ ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯೂ ಇತ್ತು. ಆದರೆ, ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆ ಕೈಬಿಟ್ಟಿತ್ತು.

ಮೂಲ ಸೌಕರ್ಯದ ಕೊರತೆ: ಕ್ಷೇತ್ರದಲ್ಲಿ ಕಿರಿದಾದ ಗುಂಡಿ ಬಿದ್ದ ರಸ್ತೆಗಳು, ಸಂಚಾರ ದಟ್ಟಣೆ, ಮೂಲ ಸೌಕರ್ಯಗಳ ಕೊರತೆ ಕಾಣುತ್ತಿದೆ. ಯಶವಂತಪುರದಿಂದ ಕೆ.ಆರ್.ಪುರದವರೆಗೂ ರೈಲುಮಾರ್ಗವಿದೆ. ಆದರೆ ಇಲ್ಲಿ ರಸ್ತೆ ದಾಟುವುದಕ್ಕೆ ಜನ ಪರದಾಡುತ್ತಿದ್ದಾರೆ. ಕ್ಷೇತ್ರದ ವೀರಣ್ಣಪಾಳ್ಯದಲ್ಲಿ ರೈಲು ಮಾರ್ಗಕ್ಕೆ ಮೇಲ್ಸೇತುವೆಯ ಅಗತ್ಯವಿದೆ. ಆಂಧ್ರದ ಕೆಲ ಭಾಗಗಳಿಂದ ಬೆಂಗಳೂರಿಗೆ ಬಂದಿರುವ ಬಹುತೇಕರು ಹೆಬ್ಬಾಳದಲ್ಲಿಯೇ ನೆಲೆಸಿದ್ದಾರೆ.

ಕ್ಷೇತ್ರ ವ್ಯಾಪ್ತಿ: ರಾಧಾಕೃಷ್ಣ ದೇವಸ್ಥಾನ ವಾರ್ಡ್, ಸಂಜಯ ನಗರ, ಗಂಗಾನಗರ, ಹೆಬ್ಬಾಳ, ವಿಶ್ವನಾಥ ನಾಗೇನಹಳ್ಳಿ, ಮನೋರಾಯನಪಾಳ್ಯ, ಆರ್.ಟಿ.ನಗರದ ಕೆಲವು ವಾರ್ಡ್​ಗಳು, ಗಂಗೇನಹಳ್ಳಿ, ಜೆ.ಸಿ. ನಗರ ವಾರ್ಡ್​ಗಳನ್ನು ಹೆಬ್ಬಾಳ ವಿಧಾನಸಭಾ ಕ್ಷೇತ್ರ ಹೊಂದಿದೆ.

Direct competition between BJP and Congress  BJP and Congress in Hebbal constituency  competition between BJP and Congress in Hebbal  ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿ ಕಟ್ಟಾ ಜಗದೀಶ್  ಮತ್ತೆ ಕ್ಷೇತ್ರದ ಚುಕ್ಕಾಣಿ ಹಿಡಿಯಲು ಭೈರತಿ ಕಸರತ್ತು  ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ  ರಾಜ್ಯದಲ್ಲಿ ಚುನಾವರಣಾ ಪ್ರಚಾರದ ಕಾವು  ಪ್ರಸ್ತುತ ಕಾಂಗ್ರೆಸ್​ ಕೈಯಲ್ಲಿ ಹೆಬ್ಬಾಳ  ತ್ರಿಮೂರ್ತಿಗಳಿಂದ ಅಬ್ಬರದ ಪ್ರಚಾರ  ಹೆಬ್ಬಾಳದಲ್ಲಿ ಸಾಫ್ಟವೇರ್​ ಎಂಜಿನಿಯರ್​ಗಳೇ ಹೆಚ್ಚು  ಹೆಬ್ಬಾಳದಲ್ಲಿ ಮೂಲ ಸೌಕರ್ಯದ ಕೊರತೆ  ಹೆಬ್ಬಾಳ ಕ್ಷೇತ್ರದ ವ್ಯಾಪ್ತಿ
ಹೆಬ್ಬಾಳ ಕ್ಷೇತ್ರದ ಮತದಾರರ ವಿವರ

ರಾಜಕೀಯ ಇತಿಹಾಸವೇನು?: ಕ್ಷೇತ್ರ ಮರುವಿಂಗಡಣೆಯಾದ ಬಳಿಕ ನಡೆದ ಚುನಾವಣಿಯಲ್ಲಿ ಬಿಜೆಪಿ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಪಾಲಿಗೆ ಪ್ರಭಾವಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು ಕ್ಷೇತ್ರ ಪ್ರತಿನಿಧಿಸಿದ್ದರು. ಮೊದಲ ಚುನಾವಣೆಯಲ್ಲಿ 46,715 ಮತ ಪಡೆದು ಕಾಂಗ್ರೆಸ್‌ನ ಎಚ್.ಎಂ.ರೇವಣ್ಣರನ್ನು 4,952 ಮತಗಳ ಅಂತರದಿಂದ ಇವರು ಸೋಲಿಸಿದ್ದರು. ಜೆಡಿಎಸ್ ಕೇವಲ 4,149 ಮತ ಗಳಿಸಿ ಠೇವಣಿ ಕಳೆದುಕೊಂಡಿತ್ತು. 2013ರ ಚುನಾವಣೆಯಲ್ಲಿ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಂಡಿತು. 38,162 ಮತ ಪಡೆದರೂ ಕಾಂಗ್ರೆಸ್‌ ಅಭ್ಯರ್ಥಿಯನ್ನು 5,136 ಮತಗಳಿಂದ ಸೋಲಿಸಿತ್ತು. 2013ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿತ್ತು.ಕಾಂಗ್ರೆಸ್ 33,026 ಮತ ಗಳಿಸಿದ್ದರೆ, ಜೆಡಿಎಸ್ 25,073 ಮತಗಳೊಂದಿಗೆ ಪೈಪೋಟಿ ನಡೆಸಿತ್ತು. ವಿಶೇಷವೆಂದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಎಸ್‌ಡಿಪಿಐ ಕೂಡ 1,473 ಮತ ಗಳಿಸಿ ಅಸ್ತಿತ್ವ ತೋರಿಸಿತ್ತು. ಈ ನಡುವೆ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ್‌ ಅಕಾಲಿಕ ನಿಧನದಿಂದ ನಡೆದ ಉಪಚುನಾವಣೆಯಲ್ಲಿ ವೈ.ಎ. ನಾರಾಯಣಸ್ವಾಮಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ನಾರಾಯಣ ಸ್ವಾಮಿ 60,367 ಮತ ಗಳಿಸಿ ಆ ಕ್ಷೇತ್ರದ ಮಟ್ಟಿಗೆ ದೊಡ್ಡ ಗೆಲುವು ದಾಖಲಿಸಿದ್ದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಬೇಕಾಯಿತು.

ಮತದಾರರ ವಿವರ: ಹೆಬ್ಬಾಳ ಕ್ಷೇತ್ರದಲ್ಲಿ 2.65 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಮುಸ್ಲಿಂ ಸಮುದಾಯದ ಸಂಖ್ಯೆ ಹೆಚ್ಚಿದೆ. 55 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಉಳಿದಂತೆ ಒಕ್ಕಲಿಗರು 38 ಸಾವಿರ, ಎಸ್​ಸಿ-ಎಸ್​ಟಿ 34 ಸಾವಿರ, ಬ್ರಾಹ್ಮಣರು 25 ಸಾವಿರ, ಕುರುಬ ಮತದಾರರು 5 ಸಾವಿರ, ಯಾದವ ಮತ್ತು ದೇವಾಂಗ ಮತದಾರರು 9 ಸಾವಿರ ಇದ್ದಾರೆ.

ಇದನ್ನೂ ಓದಿ: ಹೆಬ್ಬಾಳ ವಿಧಾನಸಭಾ ಮತಕ್ಷೇತ್ರ: ಹೇಗಿದೆ ಈ ಬಾರಿ ಜಿದ್ದಾಜಿದ್ದು?

Last Updated : May 7, 2023, 9:42 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.