ಬೆಂಗಳೂರು: ಬೇಸಿಗೆಯಲ್ಲೂ ರಾಜ್ಯದ ಹಲವೆಡೆ ವರುಣನ ಆರ್ಭಟ ಜೋರಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಮಳೆಯಾಗುತ್ತಿದ್ದು, ಪಾಲಿಕೆಯ ನಿಯಂತ್ರಣ ಕೊಠಡಿಗಳಿಗೆ ದೂರುಗಳು ಬಂದಿರುವ ಪ್ರಕಾರ ಎಲ್ಲಿಯೂ ಯಾವುದೇ ರೀತಿಯ ತೀವ್ರತರದ ಸಮಸ್ಯೆಯಾಗಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.
ಪಶ್ಚಿಮ ವಲಯ:ನಗರದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಕೆಲವೆಡೆ ನೀರು ನಿಂತಿದ್ದು, ವಾರ್ಡ್-100, 103, 105 ಪ್ರದೇಶದಲ್ಲಿ ಕೆಲ 5 ರಿಂದ 6 ಮನೆಗಳಿಗೆ ನೀರು ನುಗ್ಗಿದೆ. ಈ ಸಂಬಂಧ ಪಶ್ಚಿಮ ವಲಯದ ವಿಶೇಷ ಆಯುಕ್ತ ಡಾ. ದೀಪಕ್, ವಲಯ ಜಂಟಿ ಆಯುಕ್ತ ಶ್ರೀನಿವಾಸ್, ವಲಯ ಮುಖ್ಯ ಇಂಜಿನಿಯರ್ ವಿಶ್ವನಾಥ್ ಮೇಲುಸ್ತುವಾರಿ ವಹಿಸಿ ಮಳೆಯಿಂದಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯೋನ್ಮುಖರಾದ್ದಾರೆ ಎಂದು ಹೇಳಿದೆ.
ಪಶ್ಚಿಮ ವಲಯದ ಸಂಪಿಗೆ ಚಿತ್ರ ಮಂದಿರದ ಮುಂಭಾಗ, ಓಕಳೀಪುರಂ ಕೆಳಸೇತುವೆ ಸೇರಿದಂತೆ ಇನ್ನಿತರ ಕಡೆ ನಿಂತಿರುವ ನೀರು ಮಳೆ ನಿಂತ ಬಳಿಕ ಸರಾಗವಾಗಿ ಹರಿದು ಹೋಗಿದೆ. ಶಾರದಾ ಕಾಲೋನಿ, ನಾಗಪುರ, ಕಮಲಾನಗರ, ಕಾಟ
ನಿನ್ನೆಯಿಂದ ಎಡಬಿಡದ ಮಳೆ: ಯಾವುದೇ ತೀವ್ರ ತರಹದ ಸಮಸ್ಯೆ ಉಂಟಾಗಿಲ್ಲ ಎಂದ ಬಿಬಿಎಂಪಿ ನ್ ಪೇಟೆ, ತಿಮ್ಮಯ್ಯ ರಸ್ತೆ ಹಾಗೂ ಸುಗುಣಾ ಆಸ್ಪತ್ರೆ, ಶ್ರೀರಾಮ ಮಂದಿರ ಬಳಿ ಮರಗಳು ಬಿದ್ದಿದ್ದು, ತೆರವು ಕಾರ್ಯಾಚರಣೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಉಪ ಚುನಾವಣೆ.. ಐದೂ ಕಡೆ ಬಿಜೆಪಿಗೆ ಹಿನ್ನಡೆ : ಕಾಂಗ್ರೆಸ್, ಟಿಎಂಸಿ 2 ಕಡೆ, ಆರ್ಜೆಡಿ 1 ಕಡೆ ಗೆಲುವು
ದಕ್ಷಿಣ ವಲಯ: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಾಗಡಿ ರಸ್ತೆ ಕೆ ಪಿ ಅಗ್ರಹಾರದಲ್ಲಿ 1 ಮನೆಗೆ ನೀರು ನುಗ್ಗಿದೆ. ವಿಜಯ ನಗರ ವಾರ್ಡ್ ಮನುವನದ ಬಳಿ ಬೃಹತ್ ನೀರುಗಾಲುವೆ ತುಂಬಿ ರಸ್ತೆ ತುಂಬಿ ಹರಿದು ಕೆಲ ಮನೆಗಳಿಗೆ ನೀರು ನುಗ್ಗಿದೆ. ಇದೀಗ ನೀರು ಕ್ರಮೇಣ ತಗ್ಗುತ್ತಿದ್ದು, ಹೊರತೆಗೆಯುವ ಕಾರ್ಯ ಮಾಡಲಾಗುತ್ತಿದೆ. 7 ಕಡೆ ಮರಗಳು ಬಿದ್ದಿದ್ದು, ವಿಜಯನಗರ, ಅತ್ತಿಗುಪ್ಪೆ, ಕೆ.ಆರ್. ರಸ್ತೆ, ತ್ಯಾಗರಾಜನಗರದಲ್ಲಿ ಮರಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಆರ್.ಆರ್.ನಗರದಲ್ಲಿ 7 ಮರ, ಮಹದೇವಪುರದಲ್ಲಿ 1 ಮರ ಬಿದ್ದಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪೂರ್ವ ವಲಯ ವ್ಯಾಪ್ತಿಯ ಚಾಲುಕ್ಯ ವೃತ್ತ, ವಿಧಾನಸೌಧ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳಲ್ಲಿ ನೀರು ನಿಂತಿದ್ದರೂ ಸರಾಗವಾಗಿ ಹರಿದು ಹೋಗುತ್ತಿದೆ. ಕಾಮಾಕ್ಯ ಪ್ರದೇಶದ ಸುತ್ತಮುತ್ತ ಯಾವುದೇ ಅಪಾಯವಿಲ್ಲದೇ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿದ್ದು, ಯಾವುದೇ ಸಮಸ್ಯೆ ಉಂಟಾಗಲ್ಲ.
ಎಲ್ಲೆಲ್ಲಿ ಎಷ್ಟು ಮಳೆ: ಬಸವೇಶ್ವರ ನಗರ 92 ಮಿ.ಮೀ, ಕೊಟ್ಟಿಗೆಪಾಳ್ಯ 87.5 ಮಿ.ಮೀ, ರಾಜಾಜಿನಗರ 67 ಮಿ.ಮೀ, ಮಾರುತಿ ಮಂದಿರ ವಾರ್ಡ್ 60 ಮಿ.ಮೀ, ಹೆಗ್ಗನಹಳ್ಳಿ ಹಾಗೂ ಕೊಡಿಗೆಹಳ್ಳಿ ತಲಾ 41 ಮಿ.ಮೀ, ಶಿವನಗರ 70 ಮಿ.ಮೀ, ಕಾಟನ್ ಪೇಟೆ 61 ಮಿ.ಮೀ, ನಾಗಪುರ 69.5 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 69 ಮಿ.ಮೀ, ಚಾಮರಾಜಪೇಟೆ 51 ಮಿ.ಮೀ, ಅಗ್ರಹಾರ ದಾಸರಹಳ್ಳಿ 52 ಮಿ.ಮೀ, ಹೆಚ್.ಗೊಲ್ಲಹಳ್ಳಿ 59.5 ಮಿ.ಮೀ, ಕೆ.ಜೆ.ಹಳ್ಳಿ 48 ಮಿ.ಮೀ, ಹೆಮ್ಮಿಗೆ ಪುರ 39 ಮಿ.ಮೀ, ಆರ್.ಆರ್ ನಗರ 34.5 ಮಿ.ಮೀ, ನಾಯಂಡಹಳ್ಳಿ 39.5 ಮಿ.ಮೀ, ಕಗ್ಗಲಿಪುರ 51 ಮಿ.ಮೀ, ವಿದ್ಯಾಪೀಠ 17 ಮಿ.ಮೀ ಮಳೆಯಾಗಿದೆ.