ETV Bharat / state

ಕುರುಕಲು ತಿಂಡಿ ಅಂದ್ರೆ ಮೂಗು ಮುರಿಯುವುದೇಕೆ?: ಮುಖ ಅರಳುವ ಸಂಗತಿ ಇಲ್ಲಿದೆ ನೋಡಿ

ಬೇಕಿಂಗ್ ಸೋಡಾ ಹಾಗೂ ಮೈದಾ ಬಳಕೆ ಬಿಟ್ಟರೆ ಇಂದಿನ ಕುರುಕಲು ತಿಂಡಿಯಲ್ಲಿ ಹೆಚ್ಚಿನ ಪದಾರ್ಥಗಳು ಇರುವುದಿಲ್ಲ. ಹಾಗಾಗಿ, ಯುವ ಜನತೆಯ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಆದ್ರೆ, ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಹೇಮಾದ್ರಿ ನ್ಯಾಚುರಲ್ ಫುಡ್ ಪ್ರಾಡಕ್ಟ್ ತಮ್ಮದೊಂದು ಮಳಿಗೆ ಸ್ಥಾಪಿಸಿದ್ದು, ಜನರಿಗೆ ನಿಜವಾದ ಕುರುಕಲು ತಿಂಡಿಯನ್ನು ಒದಗಿಸುವ ಯತ್ನ ಮಾಡುತ್ತಿದೆ.

author img

By

Published : Nov 4, 2022, 8:55 AM IST

Updated : Nov 4, 2022, 12:55 PM IST

healthy snacks
ಕುರುಕಲು ತಿಂಡಿ

ಬೆಂಗಳೂರು: ಕುರುಕಲು ತಿಂಡಿ ಅಂದಾಕ್ಷಣ ಮೂಗು ಮುರಿಯುವ ಜನರೇ ಹೆಚ್ಚು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ, ಈ ಹಿಂದೆಲ್ಲಾ ಇದೇ ಕುರುಕಲು ತಿಂಡಿ ಆರೋಗ್ಯವರ್ಧಕವೇ ಆಗಿತ್ತಲ್ವಾ?.

ಹೌದು, ಹಿಂದೆ ಮನೆಗಳಲ್ಲಿ ಕುರುಕಲು ತಿಂಡಿಗಳು ಸಾಕಷ್ಟು ಇರುತ್ತಿದ್ದವು. ಮನೆಯಲ್ಲೇ ಸಿದ್ಧಪಡಿಸಿದ ತಿಂಡಿಗಳು ಆರೋಗ್ಯಕ್ಕೆ ಹಾನಿಕಾರಕವಾಗಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಂಗಡಿ, ಬೇಕರಿ ಹಾಗೂ ಆನ್​ಲೈನ್​ ಪೂರೈಕೆದಾರರ ಬಳಿ ಸಿಗುತ್ತಿರುವ ಕೃತಕ ಬಣ್ಣ, ಸಿಹಿ, ರುಚಿ ಬಳಸಿದ ಕುರುಕಲು ತಿಂಡಿಗಳು ಮಕ್ಕಳು ಸೇರಿದಂತೆ ಎಲ್ಲರ ಆರೋಗ್ಯವನ್ನೂ ಕೆಡಿಸುತ್ತಿದೆ.

ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ

ಹಿಂದೆಲ್ಲಾ ಮನೆಗಳಲ್ಲಿ ಸಿದ್ಧಪಡಿಸುತ್ತಿದ್ದ ಕುರುಕಲು ತಿಂಡಿಯಲ್ಲಿ ಎಲ್ಲಾ ಪೋಷಕಾಂಶಗಳು ಸಿಗುತ್ತಿತ್ತು. ಚಕ್ಕುಲಿ, ನಿಪ್ಪಟ್ಟು, ಹಪ್ಪಳ, ಕೋಡುಬಳೆ, ಉಪ್ಪಿನಕಾಯಿ, ಹುರಿಹಿಟ್ಟು, ತಂಬಿಟ್ಟು ಸೇರಿದಂತೆ ಇತರೆ ಖಾದ್ಯಗಳನ್ನು ತಯಾರಿಸಿ ಮುಖ್ಯ ಆಹಾರದಲ್ಲಿ ಸಿಗದ ಪೋಷಕಾಂಶಕ್ಕಾಗಿ ಸೇವಿಸುತ್ತಿದ್ದರು. ಆದರೆ, ಇಂದು ಕುರುಕಲು ತಿಂಡಿಯೇ ಮುಖ್ಯ ಆಹಾರವಾಗಿದೆ. ರುಚಿಕರವಾಗಿರುವುದು ಹಾಗೂ ಬೇಕರಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಹಿನ್ನೆಲೆಯಲ್ಲಿ ಬೇಗ ಜನಪ್ರಿಯವಾಗಿದೆ.

ಇದನ್ನೂ ಓದಿ: ಹಲಸು ಬೆಳೆಸಿ ಹಣ್ಣು ತಿನ್ನಲು ಹೆಚ್ಚು ಕಾಯಬೇಕಿಲ್ಲ; ಒಂದೆರಡು ವರ್ಷಕ್ಕೆಲ್ಲ ಫಲಕೊಡಲಿವೆ ಈ ಕಸಿಗಿಡಗಳು

ನೋಡಲು ಆಕರ್ಷಕವಾಗಿರಬೇಕು, ಕರಂಕರುಂ ಅನ್ನುತ್ತಿರಬೇಕು, ಕ್ರಿಸ್ಪಿ ಆಗಿರಬೇಕು, ನೋಡಿದ ತಕ್ಷಣ ಆಕರ್ಷಕವಾಗಿ ಕಾಣಬೇಕು ಎಂದು ಈಗಿನ ಜನ ಬಯಸುತ್ತಾರೆ. ಹಿಂದೆ ಜೋಳ, ರಾಗಿ, ತೆಂಗಿನ ಕಾಯಿ ಬಳಸಿ ಕುರುಕಲು ತಿಂಡಿ ಮಾಡುತ್ತಿದ್ದರು. ಆದರೆ, ಅಂದು ಬಳಸದ ಮೈದಾ ಹಿಟ್ಟನ್ನು ಇಂದು ಬಳಸಲಾಗುತ್ತಿದೆ. ಮನೆಯಲ್ಲಿ ಸಿದ್ಧಪಡಿಸುವ ಕುರುಕಲು ತಿಂಡಿ ಮಾಡುವುದೇ ಕಡಿಮೆಯಾಗಿದೆ. ಬೇಕರಿ ಹಾಗೂ ಅಂಗಡಿ ತಿಂಡಿ ಅನಿವಾರ್ಯವಾಗಿದೆ. ಬೇಕಿಂಗ್ ಸೋಡಾ ಹಾಗೂ ಮೈದಾ ಬಳಕೆ ಬಿಟ್ಟರೆ ಇಂದಿನ ಕುರುಕಲು ತಿಂಡಿಯಲ್ಲಿ ಹೆಚ್ಚಿನ ಪದಾರ್ಥ ಇರುವುದಿಲ್ಲ. ಹಾಗಾಗಿ, ಯುವ ಜನತೆಯ ಆರೋಗ್ಯದಲ್ಲಿ ಏರುಪೇರಾಗುತ್ತಿದೆ.

ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಹೇಮಾದ್ರಿ ನ್ಯಾಚುರಲ್ ಫುಡ್ ಪ್ರಾಡಕ್ಟ್ ತಮ್ಮದೊಂದು ಮಳಿಗೆ ಸ್ಥಾಪಿಸಿದೆ. ಜನರಿಗೆ ನಿಜವಾದ ಕುರುಕಲು ತಿಂಡಿಯನ್ನು ಒದಗಿಸುವ ಯತ್ನ ಮಾಡುತ್ತಿದೆ. ಸಂಸ್ಥೆಯ ಮಾಲೀಕ ಮೋಹನ್ ಕುಮಾರ್ ಬಿ.ಎಸ್. ಪ್ರತಿಕ್ರಿಯಿಸಿ, "ಸಾಂಪ್ರದಾಯಿಕ ವಿಧಾನದಲ್ಲಿ ಸಿದ್ಧಪಡಿಸುವ ಉತ್ಪನ್ನದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ನಾವು ಸಹ ರಾಸಾಯನಿಕ ಹಾಗೂ ಅದರ ಉಪ ಉತ್ಪನ್ನ, ಸೋಡಾ, ಮೈದಾ, ಸಕ್ಕರೆ, ಬಿಳಿಉಪ್ಪು ಬಳಸುವುದಿಲ್ಲ.

ಇದನ್ನೂ ಓದಿ: ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿದೆ ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕೆ..!

ರಾಗಿ ಹುರಿಹಿಟ್ಟು ಅತ್ಯಂತ ಜನಪ್ರಿಯ. ರಾಗಿ ನಿಪ್ಪಟ್ಟು, ಮುರುಕು, ಒಣಹಣ್ಣುಗಳ ಲಡ್ಡು, ಕಡ್ಲೆ ಮಿಠಾಯಿ (ಚಿಕ್ಕಿ) ಮತ್ತಿತರೆ ಉತ್ಪನ್ನ ಮಾಡಿ ಮಾರುತ್ತೇವೆ. ಮನೆಯಲ್ಲೇ ಸಿದ್ಧಪಡಿಸಿಕೊಳ್ಳಲು ಆಗದವರಿಗಾಗಿ ನಾವು ಈ ಸೇವೆ ಆರಂಭಿಸಿದ್ದೇವೆ. ನಾನು ದೇಸಿ ಆಕಳ ಸಗಣಿಯಿಂದ ವಿಭೂತಿ ತಯಾರಿಸಲು ಮುಂದಾದೆ. ಆದರೆ, ನಷ್ಟವಾದ ಹಿನ್ನೆಲೆ ಅದನ್ನು ನಿಲ್ಲಿಸಿ, ಈ ಕುರುಕಲು ತಿಂಡಿ ಸಿದ್ಧಪಡಿಸುವ ಕಾರ್ಯಕ್ಕೆ ಮುಂದಾದೆ. ತುಂಬಾ ಕಡೆ ನಮ್ಮ ಉತ್ಪನ್ನಕ್ಕೆ ಬೆಲೆ ಇದೆ. ನಾನು ಸಾಕಷ್ಟು ಜನರಿಗೆ ಉಚಿತವಾಗಿ ತರಬೇತಿ ನೀಡಿದ್ದೇನೆ. ನಮ್ಮ ತುಮಕೂರು ಜಿಲ್ಲೆಯ ತಿಪಟೂರಿನ ಭೀಮಸಂದ್ರ ಮನೆಗೆ ಬಂದರೆ ಅಗತ್ಯ ತರಬೇತಿ ನೀಡುತ್ತೇನೆ" ಎಂದರು.

Last Updated : Nov 4, 2022, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.