ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮುಂಜಾನೆ 6 ರಿಂದಲೇ ಬಸ್ ನಿರೀಕ್ಷೆಯಲ್ಲಿ, ಸಾಮಾಜಿಕ ಅಂತರವಿಲ್ಲದೆ ಕಾಯುತ್ತಿದ್ದ ಕಾರ್ಮಿಕರಿಗೆ ಈಗ ಆರೋಗ್ಯ ತಪಾಸಣೆಯನ್ನು ಬಸ್ ಹತ್ತುವ ಮುನ್ನ ಪ್ರಾರಂಭಿಸಲಾಗಿದೆ.
ಬಡ ಕಾರ್ಮಿಕ ವರ್ಗ ಮಾತ್ರವಲ್ಲದೆ ಕೆಲ ಮಧ್ಯಮ ವರ್ಗದ ಜನರು ಈಗ ಸ್ವಂತ ಊರುಗಳಿಗೆ ಹೋಗಲು ಮುಂದಾಗಿದ್ದಾರೆ. ಕೆಲಸವಿಲ್ಲದ ಕಾರಣ ಬೆಂಗಳೂರು ನಗರದಲ್ಲಿ ಬದುಕು ನಡೆಸುವುದು ಕಷ್ಟವಾಗುತ್ತದೆ. ಇದರ ಜೊತೆಗೆ ಮಕ್ಕಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಶಾಲೆಗಳು ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಊರಿಗೆ ಹೋಗಲು ಜನರು ನಿರ್ಧಾರ ಮಾಡಿದ್ದಾರೆ.