ETV Bharat / state

ಒಂದೂವರೆ ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಹೆಡ್‌ಕಾನ್​ಸ್ಟೇಬಲ್‌ - ಕಾನ್​ಸ್ಟೇಬಲ್‌ ಲೋಕಾ ಬಲೆಗೆ

ಹೆಡ್​ಕಾನ್​ಸ್ಟೇಬಲ್ ಮಾರೇಗೌಡ ಅವರು ಒಂದೂವರೆ ಲಕ್ಷ ರೂ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಹೆಡ್​ಕಾನ್​ಸ್ಟೇಬಲ್ ಮಾರೇಗೌಡ
ಹೆಡ್​ಕಾನ್​ಸ್ಟೇಬಲ್ ಮಾರೇಗೌಡ
author img

By

Published : Jun 30, 2023, 10:21 PM IST

ಬೆಂಗಳೂರು : ಮನೆ ನಿರ್ಮಾಣಕ್ಕೆ ಪೊಲೀಸ್ ರಕ್ಷಣೆ ನೀಡಲು 3 ಲಕ್ಷ ರೂ ಲಂಚದ ಬೇಡಿಕೆಯಿಟ್ಟಿದ್ದ ಹೆಡ್‌ಕಾನ್‌ಸ್ಟೇಬಲ್‌ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಮಾರೇಗೌಡ ಬಂಧಿತ ಆರೋಪಿ.

ನೆಲಗದರನಹಳ್ಳಿ ನಿವಾಸಿ ಗವಿರಾಜ್‌ ಗೌಡ ತಮ್ಮ ಹೆಸರಿನ ಯಶವಂತಪುರ ಹೋಬಳಿಯ ಬಿಬಿಎಂಪಿ ವಾರ್ಡ್‌ವೊಂದರ ಮೂಲೆ ನಿವೇಶನದ ಪೈಕಿ 20x40 ಅಳತೆಯುಳ್ಳ ಖಾಲಿ ನಿವೇಶನವನ್ನು ದಿನೇಶ್‌ ಎಬವರಿಗೆ ಮಾರಾಟ ಮಾಡಿದ್ದರು. ನಿವೇಶನದಲ್ಲಿ ದಿನೇಶ್ ಮನೆ ನಿರ್ಮಿಸುತ್ತಿದ್ದರು. ಕೋಕಿಲಾ ಹಾಗೂ ಲಕ್ಷ್ಮಣ್ ರೆಡ್ಡಿ ನಿವೇಶನ ತಮ್ಮದೆಂದು ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ತೊಂದರೆ ನೀಡುತ್ತಿದ್ದರಂತೆ. ಈ ಬಗ್ಗೆ ಸಿವಿಲ್ ನ್ಯಾಯಾಲಯ ದಿನೇಶ್ ಪರ ತಾತ್ಕಾಲಿಕ ಇಂಜೆಕ್ಷನ್ ಆರ್ಡರ್ ನೀಡಿತ್ತು. ಇಷ್ಟಾದರೂ ಕಟ್ಟಡ ನಿರ್ಮಾಣಕ್ಕೆ ತೊಂದರೆ ನೀಡುತ್ತಿದ್ದರಂತೆ.

ತಮಗೆ ಸೂಕ್ತ ರಕ್ಷಣೆ ನೀಡುವಂತೆ ದಿನೇಶ್ ಜೂ. 25ರಂದು ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದರು. ಹೆಡ್‌ಕಾನ್‌ಸ್ಟೆಬಲ್ ಮಾರೇಗೌಡ ಪೊಲೀಸ್ ರಕ್ಷಣೆಗೆ 3 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಅಂತಿಮವಾಗಿ 1.5 ಲಕ್ಷ ರೂ. ಲಂಚ ನೀಡುವಂತೆ ಕೇಳಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದಾಗ ಮಾರೇಗೌಡ ಬಲೆಗೆ: ಲಂಚ ಕೊಡಲಿಚ್ಛಿಸದ ದಿನೇಶ್ ಈ ವಿಚಾರವನ್ನು ಗವಿರಾಜ್‌ಗೌಡ ಗಮನಕ್ಕೆ ತಂದಿದ್ದರು. ಗವಿರಾಜ್‌ಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದರು. ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಶುಕ್ರವಾರ ದಿನೇಶ್ ಅವರಿಂದ 1.5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಮಾರೇಗೌಡ ಅವರಿಗೆ ಬಲೆ ಬೀಸಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದ​ ಪಿಡಿಒ : ಜಮೀನು ಖಾತೆ ಬದಲಾವಣೆ ಮಾಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕೌಕ್ರಾಡಿ ಗ್ರಾಮ ಪಂಚಾಯತ್​ ಪಿಡಿಒ (ಜೂನ್​ 22-2023) ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ವ್ಯಕ್ತಿಯೊಬ್ಬರಿಂದ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್​ ಪಿಡಿಒ ಮಹೇಶ್ ಜಿ.ಎನ್. ಲೋಕಾಯುಕ್ತ ಬಲೆಗೆ ಬಿದ್ದಿರುವ ಪಿಡಿಒ.

2017ರಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿಯಲ್ಲಿರುವ ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿ ತಮ್ಮ ಹೆಸರಿಗೆ ಮಾಡಿಸಲು ಇಲ್ಲಿನ ಪಂಚಾಯತ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಖಾತೆ ಬದಲಾವಣೆ ಆಗದಿರುವುದರಿಂದ 2021ರಲ್ಲಿ ಮತ್ತೆ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದ ಅವರು ಶುಲ್ಕವನ್ನು ಸಂದಾಯ ಮಾಡಿದ್ದರು. ಆದರೂ ಖಾತೆ ಬದಲಾವಣೆ ಆಗಿರಲಿಲ್ಲವಂತೆ.

ಹೀಗಾಗಿ ಕಳೆದ ಜೂನ್ 20ರಂದು ಈ ವ್ಯಕ್ತಿಯು ಕೌಕ್ರಾಡಿ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ ಎನ್ ಖಾತೆ ಬದಲಾವಣೆಗೆ 20 ಸಾವಿರ ರೂ ಲಂಚದ ಬೇಡಿಕೆಯಿಟ್ಟಿದ್ದರು. ಅದರಂತೆ ಜೂನ್ 22ರಂದು ದೂರುದಾರರಿಂದ ಆರೋಪಿ ಪಿಡಿಒ ಮಹೇಶ್ ಜಿ ಎನ್ 20 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆಸಿ ಬಂಧಿಸಿದ್ದರು. ಜೊತೆಗೆ ಲಂಚದ ಹಣವನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಮಂಗಳೂರು : ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ​ ಪಿಡಿಒ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.