ETV Bharat / state

ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಚೇಸ್ ಮಾಡಿ ಬಂಧಿಸಿದ ಹೆಡ್ ಕಾನ್ಸ್​​ಟೇಬಲ್​​!

ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪುಲಿಕೇಶಿನಗರ ಸಂಚಾರ ಠಾಣಾ ವ್ಯಾಪ್ತಿಯ ಬಂಬೂ ಬಜಾರ್ ಸಿಗ್ನಲ್ ಬಳಿ ಈ ಘಟನೆ‌ ನಡೆದಿದೆ.‌ ಪುಲಕೇಶಿ ನಗರ ಸಂಚಾರ ಠಾಣೆಯ ಹೆಡ್ ಕಾನ್ಸ್​​ಟೇಬಲ್​ ನಾಗೇಂದ್ರ, ಖದೀಮನನ್ನು ಚೇಸ್ ಮಾಡಿ ಬಂಧಿಸಿದ್ದಾರೆ.

ಕಳ್ಳನನ್ನು ಚೇಸ್ ಮಾಡಿ ಬಂಧಿಸಿದ ಹೆಡ್ ಕಾನ್​​​ಸ್ಟೇಬಲ್

author img

By

Published : Aug 28, 2020, 8:25 AM IST

ಬೆಂಗಳೂರು: ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಹೆಡ್ ಕಾನ್ಸ್​​ಟೇಬಲ್​ವೊಬ್ಬರು ಬಂಧಿಸಿದ್ದಾರೆ.‌

ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪುಲಿಕೇಶಿನಗರ ಸಂಚಾರ ಠಾಣಾ ವ್ಯಾಪ್ತಿಯ ಬಂಬೂ ಬಜಾರ್ ಸಿಗ್ನಲ್ ಬಳಿ ಈ ಘಟನೆ‌ ನಡೆದಿದೆ.‌ ಪುಲಕೇಶಿ ನಗರ ಸಂಚಾರ ಠಾಣೆಯ ಹೆಡ್ ಕಾನ್ಸ್​ಟೇಬಲ್​​ ನಾಗೇಂದ್ರ, ಖದೀಮನನ್ನು ಚೇಸ್ ಮಾಡಿ ಬಂಧಿಸಿದ್ದಾರೆ.

ಬಂಬೂ ಬಜಾರ್ ಬಳಿ‌ ನಡೆದುಕೊಂಡು ಹೋಗುತ್ತಿದ್ದ ಸತೀಶ್ ಎಂಬಾತನನ್ನ ಹೊಂಡಾ ಆ್ಯಕ್ಟಿವಾದಲ್ಲಿ ಬಂದ ಕಳ್ಳರು, ಸತೀಶನನ್ನು ಥಳಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಇದೇ ವೇಳೆ ರಾತ್ರಿ ಕರ್ತವ್ಯಕ್ಕೆ ಹಾಜರಾಗಲು ಠಾಣೆಗೆ ಬರುತ್ತಿದ್ದ ಹೆಡ್ ಕಾನ್ಸ್​ಟೇಬಲ್​ ನಾಗೇಂದ್ರ ಕಳ್ಳತನದ ದೃಶ್ಯ ಕಂಡಿದ್ದಾರೆ. ಎಸ್ಕೇಪ್ ಆಗುತ್ತಿದ್ದ ಖದೀಮರ ಬೈಕ್ ಚೇಸ್ ಮಾಡಿ ಚಾರ್ಲ್ಸ್ ಎಂಬ ಕಳ್ಳನನ್ನ ವಶಕ್ಕೆ ಪಡೆದು ಭಾರತೀನಗರ ಠಾಣೆಗೆ ಒಪ್ಪಿಸಿದ್ದಾರೆ.

ಮೊಬೈಲ್ ಮಾಲೀಕ ಸತೀಶ್ ದೂರಿನನ್ವಯ ಪ್ರಕರಣ ದಾಖಲಾಗಿದೆ. ಹೆಡ್ ಕಾನ್ಸ್​ಟೇಬಲ್​ ನಾಗೇಂದ್ರರ ಧೈರ್ಯ, ಸಮಯ ಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.