ETV Bharat / state

ಬಿಜೆಪಿಯವರು ಆಪರೇಷನ್​ ಮಾಡ್ತಾನೇ ಇರಲಿ, ಅದು ಅವರ ಕರ್ತವ್ಯ: ಸಿಎಂ ಹೆಚ್​ಡಿಕೆ

author img

By

Published : Feb 4, 2019, 5:35 PM IST

ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ತನ್ನ ಕೆಲಸವನ್ನು ಮುಂದುವರೆಸಲಿ ಎಂದು ಕುಟುಕಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು: ಆಪರೇಷನ್ ಕಮಲದ ಸುಳಿಗೆ ಸಿಲುಕಿದ ಕಾಂಗ್ರೆಸ್ ಶಾಸಕರ ರಕ್ಷಣೆಗೆ ದೋಸ್ತಿ ನಾಯಕರ ಕಸರತ್ತು ಮುಂದುವರೆದಿದೆ. ಕುಮಾರಕೃಪಾ ಅತಿಥಿ ಗೃಹದಲ್ಲಿ ದೋಸ್ತಿ ಪಕ್ಷದ ನಾಯಕರು ಸಭೆ ನಡೆಸಿದ್ದು, ಇನ್ನೂ ಸಂಪರ್ಕಕ್ಕೆ ಸಿಗದ ಶಾಸಕರ ಸಂಪರ್ಕಕ್ಕೆ ಯತ್ನ ಮುಂದುವರೆಸಿದ್ದಾರೆ.

ನಗರದ ಕರಮಾರ ಕೃಪಾ ಅತಿಥಿ ಗೃಹಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೊತೆ ಸಿಎಂ ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು.

ಸಭೆಯಲ್ಲಿ ಬಿಜೆಪಿಯ ಆಪರೇಷನ್ ಕಮಲದ ಸುಳಿಗೆ ಸಿಲುಕಿರುವ ಕಾಂಗ್ರೆಸ್ ಶಾಸಕರ ರಕ್ಷಣೆ, ಕೆಲ ಬಂಡಾಯ ಶಾಸಕರನ್ನು ಸಮಾಧಾನ ಪಡಿಸುವುದು, ಆ ಶಾಸಕರನ್ನು ಬಿಜೆಪಿಯಿಂದ ದೂರು ಇರಿಸುವುದು, ಅಗತ್ಯ ಬಿದ್ದರೆ ಆ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್ ಮಾಡುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಯಿತು. ಈ ವೇಳೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಸಿಎಂಗೆ ವೇಣುಗೋಪಾಲ್ ಅಭಯ ನೀಡಿದರು. ನಮ್ಮ ಶಾಸಕರು ನಮ್ಮ ಜೊತೆಯಲ್ಲಿಯೇ ಇರಲಿದ್ದಾರೆ ಎಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಕೆ.ಸಿ.ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿದ ಸಿಎಂ‌ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರಿಗೆ ಕೆ.ಸಿ.ವೇಣುಗೋಪಾಲ್ ಬಂದಿದ್ದಾರೆ, ಅದಕ್ಕಾಗಿ ಬಂದೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನ್ನ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದರು.

ಮೊದಲ ದಿನದಿಂದ ಆತಂಕದಲ್ಲಿರುವುದು ಬಿಜೆಪಿ:

ಮೊದಲ ದಿನದಿಂದಲೂ ಆತಂತದಲ್ಲಿ ಇರುವುದು ಬಿಜೆಪಿ. ಬಿಜೆಪಿಯವರು ಆಪರೇಷನ್ ಮಾಡ್ತಾನೆ ಇರಲಿ. ಅದು ಬಿಜೆಪಿ ಕರ್ತವ್ಯ. ಅವು ಯಾವುದೂ ಯಶ್ವಸಿ ಆಗುವುದಿಲ್ಲ ಎಂದು ಬಿಎಸ್​​ವೈಗೆ ಸಿಎಂ ಟಾಂಗ್ ಕೊಟ್ಟರು. ಇವತ್ತಿನ ಕಾಂಗ್ರೆಸ್ ಶಾಸಕಾಂಗ ಸಭೆ ಎಲ್ಲರೂ ಬರ್ತಾರಾ ಅನ್ನುವ ಪ್ರಶ್ನೆಗೆ ಕಾದು ನೋಡಿ ಎಂದು ನಗು ನಗುತ್ತಲೇ ಹೇಳಿ ಹೊರಟರು.

undefined

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಉಮೇಶ್ ಜಾಧವ್ ಜೊತೆ ನಾನು ಮಾತಾಡಿದೀನಿ. ಕಾಂಗ್ರೆಸ್​​ನಲ್ಲಿಯೇ ಉಳಿತೀನಿ ಅಂತಾ ಜಾಧವ್ ಹೇಳಿದ್ದಾರೆ. ಜಾಧವ್ ಬಿಜೆಪಿಗೆ ಹೋಗಲ್ಲ ಅಂತ ನನಗೆ ನಂಬಿಕೆ ಇದೆ. ಅವರು ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲಿದ್ದಾರೆ. ಅವರ ಭವಿಷ್ಯ ಕಾ‌ಂಗ್ರೆಸ್​ನಲ್ಲಿದೆ. ಬಿಜೆಪಿಗೆ ಹೋದರೆ ಅವರ ಭವಿಷ್ಯ ಹಾಳಾಗುತ್ತೆ, ನಮ್ಮ ಹಿರಿಯ ಮುಖಂಡರು ರಮೇಶ್ ಜಾರಕಿಹೊಳಿ ಜತೆ ಸಂಪರ್ಕದಲ್ಲಿದ್ದಾರೆ. ಸಭೆಗೆ ಬರ್ತೀನಿ ಅಂತ ರಮೇಶ್ ಅಂದಿದಾರೆ. ರಮೇಶ್ ಜಾರಕಿಹೊಳಿ ಸೇರಿ ಎಲ್ಲರೂ ಸಭೆಗೆ ಬರ್ತಾರೆ ಎಂದರು.

ಕಾಂಗ್ರೆಸ್ ಬಣ್ಣ ಬಯಲಾಗುತ್ತೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ಬಿಜೆಪಿ ಬಣ್ಣ ಇನ್ನೆಷ್ಟು ಸಲ ಬಯಲಾಗ್ಬೇಕು? ಬಿಜೆಪಿ ಬಣ್ಣ ದಿನೇ ದಿನೇ ಬಯಲಾಗ್ತಿದೆ. ಇನ್ನೇನೂ ಉಳಿದಿಲ್ಲ ಬಯಲಾಗೋದಿಕ್ಕೆ ಎಂದು ಬಿಎಸ್​ವೈ ‌ಹೇಳಿಕೆಗೆ ತಿರುಗೇಟು ನೀಡಿದರು.

ಸಭೆಗೆ ಎಲ್ರೂ ಬರ್ತಾರೆ. ಬರ್ಲಿಲ್ಲ ಅಂದ್ರೆ ಮುಂದೆ ನೋಡೋಣ. ಯಾವ ಆಪರೇಷನ್ ಕಮಲವೂ‌ ನಡೆಯಲ್ಲ. ಇಡೀ ದೇಶದಿಂದ ಕಮಲ ಹೋಗ್ತಿದೆ. ದೇಶದಲ್ಲೇ ಕಮಲ ಅರಳಲ್ಲ. ಕಮಲದ ಅವಧಿ ಮುಗಿಯಿತು ಎಂದು ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಖಂಡ್ರೆ ವ್ಯಂಗ್ಯವಾಡಿದರು.

---------- Forwarded message ---------
From: G.MOHAN G.Mohan. <gmohanphotobg@gmail.com>
Date: Mon, Feb 4, 2019, 4:52 PM
Subject: HDK Interaction.
To:

Chief Minister H.D.Kumaraswamy interaction with All Media Editors at a private hotel in Bengaluru on Monday. Minister Bandeppa Kashampur and others were present on the occasion.

--
G.Mohan 
Photojournalist
Bengaluru.
 Mob: 9845021221
ETV Bharat Logo

Copyright © 2024 Ushodaya Enterprises Pvt. Ltd., All Rights Reserved.