ETV Bharat / state

ದೊಡ್ಡಗೌಡರೆದುರು ಅತೃಪ್ತ ಜೆಡಿಎಸ್ ಎಂಎಲ್​ಸಿಗಳ ಕ್ಷಮೆಯಾಚಿಸಿದ ಎಚ್​ಡಿಕೆ... ಕಾರಣ ಏನು? - ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಸಫಲ

ಪದ್ಮನಾಭನಗರ ನಿವಾಸದಲ್ಲಿ ತಡರಾತ್ರಿವರೆಗೆ ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಸಫಲವಾಗಿದೆ. ಮಾಜಿ‌ ಸಿಎಂ ಕುಮಾರಸ್ವಾಮಿ ಅತೃಪ್ತ ಮೇಲ್ಮನೆ ಸದಸ್ಯರಲ್ಲಿ ಕ್ಷಮೆ ಕೋರಿದ್ದಾರೆ ಎನ್ನಲಾಗ್ತಿದೆ.

ಕ್ಷಮೆಯಾಚಿಸಿದ ಎಚ್​ಡಿಕೆ
author img

By

Published : Nov 12, 2019, 11:31 PM IST

ಬೆಂಗಳೂರು: ಪದ್ಮನಾಭನಗರ ನಿವಾಸದಲ್ಲಿ ತಡರಾತ್ರಿವರೆಗೆ ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅಸಮಾಧಾನಿತ ಜೆಡಿಎಸ್ ಪರಿಷತ್ ಸದಸ್ಯರಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗ್ತಿದೆ.

ಪದ್ಮನಾಭನಗರ ನಿವಾಸದಲ್ಲಿ ತಡರಾತ್ರಿವರೆಗೆ ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಸಫಲವಾಗಿದ್ದು, ಮಾಜಿ‌ ಸಿಎಂ ಕುಮಾರಸ್ವಾಮಿ ಅತೃಪ್ತ ಮೇಲ್ಮನೆ ಸದಸ್ಯರಲ್ಲಿ ಕ್ಷಮೆ ಕೋರಿದರು. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ. ಇನ್ನು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡೋಣ. ಕೆಲಸದ ಒತ್ತಡದಿಂದ ಹೀಗಾಗಿದೆ. ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿದ ದೇವೇಗೌಡರು, ಸಣ್ಣ ಪುಟ್ಟ ಮನಸ್ತಾಪದಿಂದ ಪಕ್ಷ ಹಾಳು ಮಾಡುವುದು ಬೇಡ. ಪಕ್ಷ ನಂಬಿ ಸಾವಿರಾರು ಕಾರ್ಯಕರ್ತರಿದ್ದಾರೆ. ಎಚ್​​ಡಿಕೆಗೆ ನಾನು ಬುದ್ಧಿವಾದ ಹೇಳುತ್ತೇನೆ ಎಂದು ಭಾವುಕರಾಗಿ ನುಡಿದರು‌. ದೊಡ್ಡಗೌಡರ ಭರವಸೆ ಮತ್ತು ಎಚ್​​ಡಿಕೆ ಕ್ಷಮೆ ಕೋರಿದ ಹಿನ್ನೆಲೆ ಅತೃಪ್ತ ಜೆಡಿಎಸ್ ಮೇಲ್ಮನೆ ಸದಸ್ಯರು ಪಕ್ಷ ಸಂಘಟನೆಗೆ ಒಪ್ಪಿಕೊಂಡಿದ್ದಾರೆ.

ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ

ಎಚ್​ಡಿಕೆ ವಿರುದ್ಧ ಅತೃಪ್ತರ ಅಸಮಾಧಾನ:

ಇದಕ್ಕೂ ಮುನ್ನ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಪರಿಷತ್ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದರು.

ಪದ್ಮನಾಭನಗರದ ನಿವಾಸದಲ್ಲಿ ಅತೃಪ್ತ ಪರಿಷತ್ ಸದಸ್ಯರ ಜತೆ ನಡೆದ ಸುದೀರ್ಘ ಸಭೆಯಲ್ಲಿ ದೇವೇಗೌಡರ ಸಮ್ಮುಖದಲ್ಲೇ ಎಚ್​ಡಿಕೆ ವರ್ತನೆಗೆ ಪರಿಷತ್ ಸದಸ್ಯರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ನಮ್ಮ ಕೆಲಸಗಳನ್ನು ಕುಮಾರಸ್ವಾಮಿ ಮಾಡಿಕೊಟ್ಟಿಲ್ಲ. ನಿಗಮ-ಮಂಡಳಿ ಸ್ಥಾನ ಕೇಳಿದ್ರು ಕೊಟ್ಟಿಲ್ಲ. ವರ್ಗಾವಣೆಗಾಗಿ ನಾವು ಮಾಡಿದ್ದ ಶಿಫಾರಸುಗಳನ್ನು ಅಧಿಕಾರಿಗಳು ಮಾಡಿಕೊಟ್ಟಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತಾಡುವುದಕ್ಕೆ ಅವರು ನಮಗೆ ಸಮಯವೇ ಕೊಡುತ್ತಿರಲಿಲ್ಲ ಎಂದು ದೂರುಗಳ ಸುರಿಮಳೆ ಗೈದರು ಎನ್ನಲಾಗಿದೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದ ವೇಳೆ ಎಚ್​ಡಿಕೆ ಹೇಳಿಕೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅತೃಪ್ತರು, ಅವರ ರೋಗ ಏನು ಅಂತ ಹೇಳಿಕೊಂಡರೆ ತಾನೇ ಚಿಕಿತ್ಸೆ ನೀಡುವುದಕ್ಕೆ ಸಾಧ್ಯ ಅಂತ ಕುಮಾರಸ್ವಾಮಿ ಹೇಳಿದ್ದರು. ಇಂತಹ ಹೇಳಿಕೆ ಕೊಟ್ರೆ ಹೇಗೆ?. ನೀವು ಸಮಾಧಾನ ಮಾಡುತ್ತೀರಾ. ಕುಮಾರಸ್ವಾಮಿ ಬೈತಾರೆ. ಹೀಗಿದ್ದರೆ ನಾವು ಹೇಗೆ ನಿಮ್ಮ ಜೊತೆ ಇರೋದು? ಎಂದು ದೇವೇಗೌಡರ ಮುಂದೆ ಮೇಲ್ಮನೆ ಸದಸ್ಯರು ಅಳಲು ತೋಡಿಕೊಂಡರು.

Intro:Body:KN_BNG_05_JDSMLCMEETING_HDKAPOLOGY_SCRIPT_7201951

ಅತೃಪ್ತ ಜೆಡಿಎಸ್ ಎಂಎಲ್ ಸಿಗಳ ಜತೆಗಿನ ಸಂಧಾನ ಸಭೆ ಸಫಲ: ಕ್ಷಮೆಯಾಚಿಸಿದ ಎಚ್ ಡಿಕೆ

ಬೆಂಗಳೂರು: ಅಸಮಾಧಾನಿತ ಜೆಡಿಎಸ್ ಪರಿಷತ್ ಸದಸ್ಯರಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕ್ಷಮೆಯಾಚಿಸಿದ್ದಾರೆ.

ಪದ್ಮನಾಭನಗರ ನಿವಾಸದಲ್ಲಿ ತಡರಾತ್ರಿವರೆಗೆ ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಸಫಲವಾಗಿದ್ದು, ಮಾಜಿ‌ ಸಿಎಂ ಕುಮಾರಸ್ವಾಮಿ ಅತೃಪ್ತ ಮೇಲ್ಮನೆ ಸದಸ್ಯರಲ್ಲಿ ಕ್ಷಮೆ ಕೋರಿದರು. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಇನ್ನು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡೋಣ. ಕೆಲಸದ ಒತ್ತಡದಿಂದ ಹೀಗಾಗಿದೆ. ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿದ ದೇವೇಗೌಡರು, ಸಣ್ಣ ಪುಟ್ಟ ಮನಸ್ತಾಪದಿಂದ ಪಕ್ಷ ಹಾಳು ಮಾಡುವುದು ಬೇಡ. ಪಕ್ಷ ನಂಬಿ ಸಾವಿರಾರು ಕಾರ್ಯಕರ್ತರಿದ್ದಾರೆ. ಎಚ್ ಡಿಕೆಗೆ ನಾನು ಬುದ್ಧಿವಾದ ಹೇಳುತ್ತೇನೆ ಎಂದು ಭಾವುಕರಾಗಿ ನುಡಿದರು‌. ದೊಡ್ಡಗೌಡರ ಭರವಸೆ ಮತ್ತು ಎಚ್ ಡಿಕೆ ಕ್ಷಮೆ ಕೋರಿದ ಹಿನ್ನೆಲೆ ಅತೃಪ್ತ ಜೆಡಿಎಸ್ ಮೇಲ್ಮನೆ ಸದಸ್ಯರು ಪಕ್ಷ ಸಂಘಟನೆಗೆ ಒಪ್ಪಿಕೊಂಡಿದ್ದಾರೆ.

ಎಚ್ ಡಿಕೆ ವಿರುದ್ಧ ಅತೃಪ್ತರ ಅಸಮಾಧಾನ:

ಇದಕ್ಕೂ ಮುನ್ನ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಪರಿಷತ್ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದರು.

ಪದ್ಮನಾಭನಗರದ ನಿವಾಸದಲ್ಲಿ ಅತೃಪ್ತ ಪರಿಷತ್ ಸದಸ್ಯರ ಜತೆ ನಡೆದ ಸುದೀರ್ಘ ಸಭೆಯಲ್ಲಿ ದೇವೇಗೌಡರ ಸಮ್ಮುಖದಲ್ಲೇ ಎಚ್ ಡಿಕೆ ವರ್ತನೆಗೆ ಪರಿಷತ್ ಸದಸ್ಯರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ನಮ್ಮ ಕೆಲಸಗಳನ್ನು ಕುಮಾರಸ್ವಾಮಿ ಮಾಡಿಕೊಟ್ಟಿಲ್ಲ. ನಿಗಮ-ಮಂಡಳಿ ಸ್ಥಾನ ಕೇಳಿದ್ರು ಕೊಟ್ಟಿಲ್ಲ. ವರ್ಗಾವಣೆಗಾಗಿ ನಾವು ಮಾಡಿದ್ದ ಶಿಫಾರಸ್ಸುಗಳನ್ನು ಅಧಿಕಾರಿಗಳು ಮಾಡಿಕೊಟ್ಟಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತಾಡುವುದಕ್ಕೆ ಅವರು ನಮಗೆ ಸಮಯವೇ ಕೊಡುತ್ತಿರಲಿಲ್ಲ ಎಂದು ದೂರುಗಳ ಸುರಿಮಳೆ ಗೈದರು ಎನ್ನಲಾಗಿದೆ.

ಎಚ್ ಡಿಕೆ ಸಿಎಂ ಆಗಿದ್ದಾಗ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸರ್ಕಾರ ಇದ್ದಾಗಲು ಸರಿಯಾಗಿ ನಡೆಸಿಕೊಂಡಿಲ್ಲ. ಸರ್ಕಾರ ಹೋದ ಮೇಲೂ ಸರಿಯಾಗಿ ನಡೆಸಿಕೊಂಡಿಲ್ಲ. ಎಲ್ಲ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಷತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದ ವೇಳೆ ಎಚ್ ಡಿಕೆ ಹೇಳಿಕೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅತೃಪ್ತರು, ಅವರ ರೋಗ ಏನು ಅಂತ ಹೇಳಿಕೊಂಡರೆ ತಾನೇ ಚಿಕಿತ್ಸೆ ನೀಡುವುದಕ್ಕೆ ಸಾಧ್ಯ ಅಂತ ಕುಮಾರಸ್ವಾಮಿ ಹೇಳಿದ್ದರು. ಇಂತಹ ಹೇಳಿಕೆ ಕೊಟ್ರೆ ಹೇಗೆ?. ನೀವು ಸಮಾಧಾನ ಮಾಡುತ್ತೀರಾ. ಕುಮಾರಸ್ವಾಮಿ ಬೈತಾರೆ. ಹೀಗಿದ್ದರೆ ನಾವು ಹೇಗೆ ನಿಮ್ಮ ಜೊತೆ ಇರೋದು? ಎಂದು ದೇವೇಗೌಡರ ಮುಂದೆ ಮೇಲ್ಮನೆ ಸದಸ್ಯರು ಅಳಲು ತೋಡಿಕೊಂಡರು.

ಸಭೆಯಲ್ಲಿ ಮೇಲ್ಮನೆ ಸದಸ್ಯರಾದ ಬಸವರಾಜ್ ಹೊರಟ್ಟಿ, ಶರವಣ, ಭೋಜೇಗೌಡ, ಕಾಂತರಾಜು, ಅಪ್ಪಾಜಿಗೌಡ, ಮರಿ ತಿಬ್ಬೇಗೌಡ, ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಅಸಮಾಧಾನಿತ ಪರಿಷತ್ ಸದಸ್ಯರು ಭಾಗಿಯಾಗಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.