ಬೆಂಗಳೂರು : ಕಾಸರಗೋಡು ಮತ್ತು ಮಂಜೇಶ್ವರದಲ್ಲಿರುವ ಕನ್ನಡ ಭಾಷೆಯ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಮಾಧ್ಯಮಗಳ ಮೂಲಕ ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಭಾಷೆಯಲ್ಲಿನ ಗ್ರಾಮಗಳ ಹೆಸರನ್ನು ಬದಲಿಸುವ ಬಗ್ಗೆ ಗಮನಕ್ಕೆ ಬಂದಿದೆ. ಈ ಪ್ರಕ್ರಿಯು ನಿಜಕ್ಕೂ ಸತ್ಯವೇ ಅಗಿದ್ದರೆ, ಇದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಹಬಾಳ್ವೆಯಿಂದ ಕೂಡಿರುವ ವಾತಾವರಣವನ್ನು ಹದಗಡೆಸುವುದು ಸೂಕ್ತವಲ್ಲ ಎಂದು ಹೆಚ್ಡಿಕೆ ಅಭಿಪ್ರಾಯಪಟ್ಟಿದ್ದು, ಕಾಸರಗೋಡು, ಕೇರಳದ ಭಾಗವಾಗಿದ್ದರೂ ದಶಕಗಳಿಂದ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಐಟಿ ಆ್ಯಕ್ಟ್ ನಂತರ ಟ್ವಿಟರ್ ಮತ್ತೊಂದು ಕ್ಯಾತೆ: ಪ್ರಕಟಿಸಿದ್ದ ಮ್ಯಾಪ್ ಡಿಲೀಟ್!
ಅಲ್ಲದೇ, ಈ ಪ್ರದೇಶದ ಜನರು ಯಾವಾಗಲು ಪರಸ್ಪರ ಭಾಷಾ ಪರಂಪರೆಯನ್ನು ಹೊಂದಿದ್ದಾರೆ. ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ. ಹೆಸರು ಬದಲಾವಣೆಯು ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಾದವಿದೆ. ಆದರೆ, ಹಳ್ಳಿಯ ಹೆಸರುಗಳು ಮೂಲ ಕನ್ನಡ ಪರಿಮಳವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಹೆಚ್ಡಿಕೆ ಮನವಿ ಮಾಡಿದ್ದಾರೆ.