ETV Bharat / state

ರಾಜ್ಯಸಭೆ ಚುನಾವಣೆ : ದೇವೇಗೌಡರ ಸ್ಪರ್ಧೆಗೆ  ಜೆಡಿಎಲ್​​​ಪಿಯಲ್ಲಿ ಒಮ್ಮತದ ತೀರ್ಮಾನ - ರಾಜ್ಯಸಭೆ ಚುನಾವಣಾ ಸ್ಪರ್ಧೆಗೆ ಹೆಚ್​ಡಿ ದೇವೇಗೌಡ ಹೆಸರು ಅಂತಿಮ,

ಇಂದು ನಡೆದ ಜೆಡಿಎಲ್​ಪಿ ಸಭೆಯಲ್ಲಿ ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧೆ ಮಾಡಬೇಕು ಎಂದು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೆಚ್​.ಕೆ ಕುಮಾರಸ್ವಾಮಿ ತಿಳಿಸಿದ್ದಾರೆ.

HD Devegowda name final, HD Devegowda name final for Rajyasabha election, Rajyasabha election news, Rajyasabha election latest news, ಹೆಚ್​ಡಿ ದೇವೇಗೌಡ ಹೆಸರು ಅಂತಿಮ, ರಾಜ್ಯಸಭೆ ಚುನಾವಣಾ ಸ್ಪರ್ಧೆಗೆ ಹೆಚ್​ಡಿ ದೇವೇಗೌಡ ಹೆಸರು ಅಂತಿಮ, ರಾಜ್ಯಸಭೆ ಚುನಾವಣೆ ಸುದ್ದಿ,
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಮ್ಮತದ ಅಭ್ಯರ್ಥಿ ಎಂದ ಜೆಡಿಎಸ್​ ರಾಜ್ಯಾಧ್ಯಕ್ಷ
author img

By

Published : Jun 5, 2020, 4:54 PM IST

ಬೆಂಗಳೂರು : ರಾಜ್ಯಸಭಾ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಸ್ಪರ್ಧೆ ಮಾಡಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಮ್ಮತದ ಅಭ್ಯರ್ಥಿ ಎಂದ ಜೆಡಿಎಸ್​ ರಾಜ್ಯಾಧ್ಯಕ್ಷ

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಧ್ಯಾಹ್ನ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ದೇವೇಗೌಡರು ರಾಷ್ಟ್ರದ ಹಿರಿಯ ರಾಜಕಾರಣಿ. ರಾಜ್ಯ ಹಾಗೂ ದೇಶದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವು ಅವರಿಗಿದೆ. ಹಾಗಾಗಿ ಅವರು ಸಂಸತ್ತಿನಲ್ಲಿ ಇರಬೇಕು. ಹೀಗಾಗಿ ಎಲ್ಲ ಶಾಸಕರು ದೇವೇಗೌಡರ ಸ್ಪರ್ಧೆಗೆ ತೀರ್ಮಾನ ಮಾಡಿದ್ದೇವೆ. ಅವರನ್ನು ಸ್ಪರ್ಧಿಸುವಂತೆ ಒಪ್ಪಿಸುತ್ತೇವೆ ಎಂದು ಹೇಳಿದರು.

ಇವತ್ತಿನ ಸಂದರ್ಭದಲ್ಲಿ ದೇಶಕ್ಕೆ ದೇವೇಗೌಡರಂತಹ ನಾಯಕರ ಅವಶ್ಯಕತೆ ಇದೆ. ಇಲ್ಲಿಯವರೆಗೂ ಯಾವ ಕಾಂಗ್ರೆಸ್ ನಾಯಕರನ್ನೂ ಸಂಪರ್ಕ ಮಾಡಿಲ್ಲ. ಆದರೆ, ದೇವೇಗೌಡರು ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕೊರೊನಾ ವೈರಸ್ ವಿಚಾರವಾಗಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಕೊರೊನಾ ಸಮಸ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ಅವರ ಸಮಯ ಕೇಳಿದ್ದೇವೆ ಎಂದು ಹೆಚ್ .ಕೆ. ಕುಮಾರಸ್ವಾಮಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.