ಬೆಂಗಳೂರು: ನವೆಂಬರ್ ಅಂತ್ಯದ ವೇಳೆಗೆ ನಗರದಲ್ಲಿ ಮಾಡಲಾಗಿರುವ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಮಾತು ಕೊಟ್ಟಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ತಿಂಗಳು ಪೂರ್ಣಗೊಂಡಿದ್ದರೂ ಪೂರ್ತಿಯಾಗಿ ಒತ್ತುವರಿ ತೆರವು ಮಾಡುವಲ್ಲಿ ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಮಳೆ ಅನಾಹುತ ಸಂಭವಿಸಿದ್ದ ಸಂದರ್ಭದಲ್ಲಿ ಮತ್ತು ಒತ್ತುವರಿ ತೆರವು ವೇಳೆ ಬಿಬಿಎಂಪಿಯು ಕೇವಲ ಬಡವರ ಮನೆಗಳ ಮೇಲೆ ದಬ್ಬಾಳಿಕೆ ನಡೆಸಿ ಶ್ರೀಮಂತರ ಬೆನ್ನಿಗೆ ನಿಂತಿತ್ತು ಎಂದು ದೂರಲಾಗಿತ್ತು. ಬಡವರ ಮನೆಗಳಿಗೆ ಜೆಸಿಬಿಗಳನ್ನು ನುಗ್ಗಿಸುವುದಕ್ಕೂ ಮುನ್ನ ಸರ್ವೇ ಮಾಡಬೇಕು, ಅದುವರೆಗೂ ಡೆಮಾಲಿಷನ್ ನಿಲ್ಲಿಸಲಾಗುವುದು. ಸರ್ವೇ ಮಾಡಿ ನವೆಂಬರ್ ಅಂತ್ಯದ ವೇಳೆಗೆ ಎಲ್ಲಾ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿಕೆ ನೀಡಿತ್ತು. ಆದ್ರೆ, ಇದೀಗ ಒತ್ತುವರಿ ತೆರವು ಮಾಡುವಲ್ಲಿ ವಿಫಲವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಮುಂದುವರಿದ ಪಾಲಿಕೆಯ ಒತ್ತುವರಿ ತೆರವು ಕಾರ್ಯಾಚರಣೆ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜೆಸಿಬಿ ಆಪರೇಷನ್
ಬಿಬಿಎಂಪಿ ಹೇಳುವುದೇನು?: ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ, 'ನಾವು ಒತ್ತುವರಿ ತೆರವು ಕಾರ್ಯ ನಿಲ್ಲಿಸಿಲ್ಲ. ಒತ್ತುವರಿ ಸರ್ವೇ ಮಾಡಿಸಲು ಸರ್ವೇಯರ್‌ಗಳ ಕೊರತೆ ಎದುರಾಗಿತ್ತು. ಇದೀಗ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಒತ್ತುವರಿ ಪತ್ತೆಕಾರ್ಯ ಕೈಗೊಂಡು ಡೆಮಾಲಿಷನ್ ಕಾರ್ಯ ಆರಂಭಿಸುತ್ತೇವೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: 2,052 ಕಡೆ ರಾಜಕಾಲುವೆ ಒತ್ತುವರಿ ತೆರವು: ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ